ನಾಯಿ ಕಡಿತ:ಪರಿಹಾರಕ್ಕೆ ಆಗ್ರಹಿಸಿ ಧರಣಿ

ಕಲಬುರಗಿ,ಜ 2: ಇಲ್ಲಿನ ಮಿಜ್ಬಾ ನಗರದಲ್ಲಿ ಇತ್ತೀಚಿಗೆ ನಾಯಿಕಡಿತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಾಲಕಿಗೆ 5 ಲಕ್ಷ ರೂ ಪರಿಹಾರ ನೀಡುವಂತೆ ಆಗ್ರಹಿಸಿ ಪಾಲಿಕೆ ಸದಸ್ಯ ಸಾಜಿದ್ ಕಲ್ಯಾಣಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇಂದು ಧರಣಿ ಕುಳಿತ ಪ್ರಸಂಗ ನಡೆಯಿತು.
ಡಿ. 28 ರಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಾಯಿ ಕಡಿತದಿಂದ ತೀವ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಫೂರಾ ಎಂಬ 6 ವರ್ಷದ ಬಾಲಕಿ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡುವದಾಗಿ ಮೇಯರ್ ವಿಶಾಲ್ ದರ್ಗಿ ಘೋಷಿಸಿದ್ದರು.
ಆದರೆ ಪರಿಹಾರ ಇನ್ನೂ ನೀಡಿಲ್ಲ. ಪರಿಹಾರ ನೀಡುವವರೆಗೂ ಧರಣಿ ಮುಂದುವರೆಸುವದಾಗಿ ಪಾಲಿಕೆ ಸದಸ್ಯ ಸಾಜಿದ್ ಕಲ್ಯಾಣಿ ಪಟ್ಟು ಹಿಡಿದರು. ಒಂದು ವಾರದೊಳಗೆ ಪರಿಹಾರ ನೀಡುವ ಭರವಸೆಯ ಬಳಿಕೆ ಅವರು ಧರಣಿ ಕೈಬಿಟ್ಟರು.