ನಾಯಕ ಸಮುದಾಯ ಕೊಡುಗೆಗೆ ಹೆಸರುವಾಸಿ: ಕೆಸಿಎನ್

ಕೆ.ಆರ್.ಪೇಟೆ, ನ.01: ಸ್ವಾಭಿಮಾನದಿಂದ ಯಾರ ಸಹಾಯವೂ ಇಲ್ಲದೇ ಸ್ವತಂತ್ರವಾಗಿ ಬದುಕುವ ಹಾಗೂ ಬೇರೆಯವರಿಗೆ ಒಳ್ಳೆಯದನ್ನು ಮಾಡುವ ವಾಲ್ಮೀಕಿ ಸಮುದಾಯಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯನ್ನು ವಾಲ್ಮೀಕಿ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಸಚಿವರು ನಾಯಕ ಸಮುದಾಯ ಕೊಡುಗೆಗೆ ಹೆಸರುವಾಸಿಯಾಗಿದ್ದು ರಮೇಶ್ ಜಾರಕಿಹೊಳಿ, ಶ್ರೀರಾಮುಲು, ಮುಂತಾದಂಥ ಮಹಾನ್ ನಾಯಕರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದೆ, ಶ್ರೇಷ್ಠ ಗ್ರಂಥಗಳನ್ನು ಬರೆದು ಭಾರತದ ಕೋಟ್ಯಂತರ ಜನಗಳಿಗೆ ಮಾರ್ಗದರ್ಶನ ನೀಡಲಾಗಿದೆ. ಇಂಥಹ ಸಮುದಾಯ ಸಮಾಜಮುಖಿಕೆಲಸಗಳನ್ನು ಮಾಡುತ್ತಿದ್ದು ಅವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನಾಯಕ ಸಮುದಾಯದ ಮುಖಂಡರುಗಳು ಸಚಿವರಿಗೆ ಬೆಳ್ಲಿ ಕತ್ತಿಯನ್ನು ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮೂಡ ಅದ್ಯಕ್ಷ, ಕೆ.ಶ್ರೀನಿವಾಸ್, ತಹಶೀಲ್ದಾರ್ ಶಿವಮೂರ್ತಿ, ಜಿ.ಪಂ. ಉಪಾದ್ಯಕ್ಷೆ ಗಾಯಿತ್ರಿ, ಪುರಸಭಾ ಅದಯಕ್ಷೆಯ ಅಭ್ಯರ್ಥಿ ಮಹಾದೇವಿ, ಜಿ.ಪಂ.ಸದಸ್ಯ ರಾಮದಾಸ್, ಮಾಜಿ ಜಿಪಂ ಸದಸ್ಯ ಮಂಜುನಾಥ್, ಕುಮಾರ್, ನಂಜುಂಡಸ್ವಾಮಿ, ಧನಂಜಯ, ಕರ್ತೆನಹಳ್ಳಿ ಸುರೇಶ್, ಗಂಗಾಧರ, ಪ್ರವೀಣ, ಕೃಷ್ಣ, ವಾಲ್ಮೀಕಿ ಸಮುದಾಯದ ಮುಖಂಡರುಗಳು, ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.