ನಾಯಕ ಸಮುದಾಯದ ಮೀಸಲಾತಿ ಹೆಚ್ಚಿಸಿ

ಗಬ್ಬೂರು.ನ.08- ನಾಯಕ ಸಮುದಾಯಕ್ಕೆ ಶೇ 7.5 ರಷ್ಟು ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ತಾಯಜ್ ಕುಮಾರ್ ನಾಯಕ ರಾಮದುರ್ಗ ಆಗ್ರಹಿಸಿದರು.
ಸಮೀಪದ ಜಿನ್ನಾಪುರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ಮಾತನಾಡಿದರು. ‘ವಾಲ್ಮೀಕಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಶೇ 7.5 ರಷ್ಟು ಮೀಸಲಾತಿ ಹೆಚ್ಚಿಸಬೇಕು.ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ವಾಲ್ಮೀಕಿ ಸಮುದಾಯವನ್ನು ಉನ್ನತ ಸ್ಥಾನಕ್ಕೆ ತರಲು ಸರ್ಕಾರ ಶ್ರಮಿಸಬೇಕು. ಸ್ವಾಮೀಜಿ ಸಹ ಇದಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಅನುದಾನ ಬಳಕೆಗೆ ಕಾಯ್ದೆ ರೂಪಿಸಿ, ಪ್ರತಿವರ್ಷ 30 ಸಾವಿರ ಕೋಟಿ ಹಣ ಬಿಡುಗಡೆ ಮಾಡಿತ್ತು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮುಖಂಡ ಮೌನೇಶ ಅಧ್ಯಕ್ಷ ವಹಿಸಿಕೊಂಡಿದ್ದರು ಮುತ್ತಯ್ಯ ನಾಯಕ, ಸಿದ್ಧಲಿಂಗ ದೊರೆ ರಾಮಣ್ಣ ನಾಯಕ,ಶಿವು ನಾಯಕ, ಕರಿಗೂಳಿ ನಾಯಕ, ರಂಗನಾಥ ನಾಯಕ, ಚಂದ್ರು ನಾಯಕ, ಹನುಮಗೌಡ ನಾಯಕ, ಚಿದಾನಂದ ನಾಯಕ, ಆಂಜನೇಯ ನಾಯಕ, ಚನ್ನು ನಾಯಕ ಸೇರಿದಂತೆ ಗ್ರಾಮಸ್ಥರು ಇದ್ದರು.