ನಾಯಕ ಅವರಿಗೆ ಟಿಕೆಟ್ ನೀಡಿದರೆ ಕಾರ್ಯಕರ್ತರಿಗೆ ಶಕ್ತಿ

ತಾಳಿಕೋಟೆ : ಫೆ.6: ಸಂಘ ಶಕ್ತಿಯೊಂದಿಗೆ ಬೆಳೆದು ಬರುವದರೊಂದಿಗೆ ಯುವಕರೊಂದಿಗೆ ಸದಾ ಒಡನಾಟ ಹೊಂದಿ ಪಕ್ಷ ಸಂಘಟನೆಗಾಗಿ ಸದಾ ದುಡಿಯುತ್ತಾ ಸಾಗಿರುವ ಡಾ.ಬಾಬುರಾಜೇಂದ್ರ ನಾಯಕ ಅವರಿಗೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ ಟಿಕೆಟ್ ನೀಡಿದರೆ ಕಾರ್ಯಕರ್ತರಿಗೆ ಶಕ್ತಿ ಬರಲಿದೆ ಎಂದು ಪುರಸಭಾ ಮಾಜಿ ಸದಸ್ಯ ಬಿಜೆಪಿ ಪಕ್ಷದ ಯುವ ಮುಖಂಡ ರಾಜು ಸಜ್ಜನ ಅವರು ಹೇಳಿದರು.
ಬುಧವಾರರಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಯಾವಾಗಲು ಯುವಕರು ಕೆಲಸ ಮಾಡುತ್ತಾ ಬಂದಿದ್ದಾರೆ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕೆಂಬ ಕೂಗು ಮತ್ತು ಒತ್ತಡವೂ ಕೂಡಾ ಕಾರ್ಯಕರ್ತರದ್ದಾಗಿದೆ ಸದಾ ಯುವಕರೊಂದಿಗೆ ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಒಡನಾಟ ಬಾಂದವ್ಯವನ್ನು ಹೊಂದಿರುವ ಡಾ.ಬಾಬು ರಾಜೇಂದ್ರ ನಾಯಕ ಅವರಿಗೆ ಟಿಕೆಟ್ ನೀಡಿದರೆ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸಿನ ಜೊತೆಗೆ ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಲು ಅನುಕೂಲವಾಗಲಿದೆ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳು ಆಗವೆ ಅವುಗಳು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಜಿ ಅವರು ಕೊಟ್ಟ ಯೋಜನೆಗಳಿಂದ ನೇರವಾಗಿ ಎಲ್ಲ ಬಡ ಜನರಿಗೆ ಮುಟ್ಟಿವೆ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಜನರಿಗೆ ಸಿಗಬೇಕೆಂದರೆ ಈ ಭಾರಿಯ ಚುನಾವಣೆಯಲ್ಲಿ ಹೊಸಬರಿಗೆ ಮಣೆ ಹಾಕಿದರೆ ಬಡ ಬಗ್ಗರು ಆರ್ಥಿಕವಾಗಿ ಮೇಲೆಳುವದರ ಜೊತೆಗೆ ಪಕ್ಷದ ಕಾರ್ಯಕರ್ತರಿಗೆ ಯುವಕರಿಗೆ ಹೆಚ್ಚಿನ ಶಕ್ತಿಬಂದಂತಾಗಲಿದೆ ಎಂದರು.
ಇನ್ನೋರ್ವ ಬಿಜೆಪಿ ಯುವ ಮುಖಂಡ ಮಹಾಂತೇಶ ಮುರಾಳ ಅವರು ಮಾತನಾಡಿ ಹಾಲಿ ಸಂಸದರು ಚುನಾವಣೆಯಲ್ಲಿ ಗೆದ್ದ ನಂತರ ಜಿಲ್ಲೆಯ ಯಾವುದೇ ತಾಲೂಕಿಗೆ ಬೆಟ್ಟಿಕೊಟ್ಟಿಲ್ಲಾ ಇದು ಎಲ್ಲ ಕಾರ್ಯಕರ್ತರಿಗೆ ಬೇಸರವನ್ನು ಮೂಡಿಸಿದೆ ಕೇವಲ ಚುನಾವಣೆ ಸಂದರ್ಬದಲ್ಲಿ ಮಾತ್ರ ತಾಲೂಕು ಕೇಂದ್ರಗಳಿಗೆ ಬೆಟ್ಟಿ ನೀಡುತ್ತಾ ಬಂದಿದ್ದಾರೆ ಯಾವ ತಾಲೂಕಿನಲ್ಲಿ ಯಾರು ಬಿಜೆಪಿ ಕಾರ್ಯಕರ್ತರು ಎಂಬುದು ಅವರಿಗೆ ಗೊತ್ತೇ ಇಲ್ಲಾ ಹಾಲಿ ಸಂಸದರು ಇಲ್ಲಿಯವರೆಗೂ ಕಾರ್ಯಕರ್ತರ ಸಮಸ್ಯಗಳನ್ನು ಆಲಿಸಿಲ್ಲಾ ಯಾವ ಕಾರ್ಯಕರ್ತರ ಒಂದೂ ಕೆಲಸವನ್ನು ಮಾಡಿಕೊಟ್ಟಿಲ್ಲಾ ಕೇವಲ ಅಧಿಕಾರದ ಅವಧಿಯಲ್ಲಿ ಕಾಲಹರಣ ಮಾಡಿದ್ದೇ ಜಾಸ್ತಿಯಾಗಿದೆ ಕಾರ್ಯಕರ್ತರು ಯಾರೇ ಕೆಲಸಕ್ಕೆ ಹೋದರೆ ನನಗೆ ನೀವು ಓಟು ನೀಡಿಲ್ಲಾ ಮೋದಿಜಿಗೆ ನೀಡಿದ್ದೀರಿ ಅವರಲ್ಲಿಯೇ ಹೋಗಿ ಕೇಳಿ ಎಂಬ ಉಢಾಫೆ ಉತ್ತರಗಳು ಅವರಿಂದ ಸಾಕಷ್ಟು ಬಂದಿವೆ ಹೀಗಾಗಿ ಈ ಭಾರಿಯ ಚುನಾವಣೆಯಲ್ಲಿ ಟಿಕೆಟ್‍ನ್ನು ಹೊಸಬರಿಗೆ ನೀಡಿದರೆ ಪಕ್ಷದ ಕಾರ್ಯಕರ್ತರಿಗೆ ಬಲ ಬಂದಂತಾಗಲಿದೆ ಅಲ್ಲದೇ ಪಕ್ಷದ ಕಾರ್ಯಚಟುವಟಿಕೆಗಳನ್ನು ಮಾಡಲು ಯುವಕರಿಗೆ ಶಕ್ತಿ ನೀಡಿದಂತಾಗಲಿದೆ ಕಾರಣ ಸದಾ ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡು ಪಕ್ಷ ನಿಷ್ಠೆಯಾಗಿ ಕೆಲಸ ಮಾಡುತ್ತಾ ಬಂದಿರುವ ಡಾ.ಬಾಬು ರಾಜೇಂದ್ರ ನಾಯಕ ಅವರಿಗೆ ಟಿಕೆಟ್ ನೀಡಿ ಕಾರ್ಯಕರ್ತರಿಗೆ ಅಂಟಿರುವ ಅಸಮಾದಾನದ ಹೊಗೆಯನ್ನು ಹೊಗಲಾಡಿಸಬೇಕೆಂದು ಅವರು ಒತ್ತಾಯಿಸಿದರು.
ಈ ಸಮಯದಲ್ಲಿ ಪುರಸಭೆ ಮಾಜಿ ಸದಸ್ಯ ಮಾನಸಿಂಗ್ ಕೊಕಟನೂರ, ದೇವು ಹಜೇರಿ, ಜಗದೀಶ ಬಿಳೇಭಾವಿ, ಬಸವರಾಜ ಹೊಟ್ಟಿ, ಅಶೋಕ ಚಿನಗುಡಿ, ಕಸ್ತೂರಿ ಪ್ರಥಮಶೆಟ್ಟಿ, ಅನೀಲ ಕುಂಭಾರ, ಅನೀಲ ಕಸ್ತೂರಿ, ರಮೇಶ ಮಾಲಿಪಾಟೀಲ, ವಿರೇಶ ಕಸಬೇಗೌಡರ, ಬಸ್ಸು ಇಂಗಳಗಿ, ಸಂತೋಷ ಕುಲಕರ್ಣಿ, ಮುತ್ತು ಕುಂಭಾರ, ಗಂಗು ಹಜೇರಿ, ಅಲೌಕಸಿಂಗ್ ಗೌಡಗೇರಿ, ರಾಹುಲ್ ನರಗುಂದ, ವಿನಯಸಿಂಗ್ ಕೊಕಟನೂರ, ನೀಖೀಲ್ ಮೂಲಿಮನಿ, ಸೋಹನ್ ಹಜೇರಿ, ಸೀತಾರಾಮ ಮೂಲಿಮನಿ, ರಾಕೇಶ ನರಗುಂದ ಮೊದಲಾದವರು ಇದ್ದರು.