ನಾಯಕರ ಭಾವಚಿತ್ರಗಳಿಗೆ ಅಪಮಾನ ಆರೋಪ

ದೇವದುರ್ಗ.ಏ.೦೨-ಪಟ್ಟಣದ ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಗೌರವ ಪೂರ್ವಕವಾಗಿ ಗೋಡೆಗಳಿಗೆ ನೇತು ಹಾಕದೆ, ಎಲ್ಲೆಂದರಲ್ಲಿ ಹಾಕಿ ಅಪಮಾನ ಮಾಡಿದ್ದಾರೆ ಎಂದು ಮಾದಿಗ ಯುವ ಸೈನ್ಯ ರಾಜ್ಯಾಧ್ಯಕ್ಷ ನಂದಕುಮಾರ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ವಸತಿ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ, ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್, ಜವಹರ್ ಲಾಲ್ ನೆಹರು ಸೇರಿ ವಿವಿಧ ಗಣ್ಯರು ಭಾವಚಿತ್ರ ಗೋಡೆ ಮೇಲೆ ನೇತು ಹಾಕದೆ, ಟೆಬಲ್ ಮೇಲೆ ಬೇಕಾಬಿಟ್ಟಿಯಾಗಿ ಇರಿಸಲಾಗಿದೆ. ಇದು ಮಹಾನ್ ವ್ಯಕ್ತಿಗಳಿಗೆ ಮಾಡಿದ ಅಪಮಾನವಾಗಿದೆ.
ಈ ಬಗ್ಗೆ ಪ್ರಾಚಾರ್ಯ ಶರಣಗೌಡರಿಗೆ ಹಲವು ಸಲ ಭಾವಚಿತ್ರ ಗೋಡೆ ಮೇಲೆ ಹಾಕುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮಕೈಗೊಂಡಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಪ್ರಾಚಾರ್ಯ ಶರಣಗೌಡ ವಿರುದ್ಧ ಕ್ರಮಕೈಗೊಂಡು ಮಹಾನ್ ನಾಯಕರ ಭಾವಚಿತ್ರಗಳನ್ನು ಗೌರವವಿತ ಸ್ಥಾನದಲ್ಲಿ ಇರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತ ಮನ್ನಾಪುರ, ರಂಗನಾಥ ನಾಯಕ, ಭೀಮಾಶಂಕರ್, ಭೀಮರಾಯ ಭಂಡಾರಿ, ಮರಿಲಿಂಗ ಪಾಟೀಲ್ ಗೌರಂಪೇಟೆ, ಶಂಕರಗೌಡ, ರಾಘವೇಂದ್ರ ಇತರರಿದ್ದರು.