ನಾಯಕರ ಬಂಧನ ವಿರೋಧಿಸಿ ಪ್ರತಿಭಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.28: ಮಹಿಳಾ ಕುಸ್ತಿಪಟ್ಟುಗಳ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ಖಂಡಿಸಿ, ಮಹಿಳಾ ಸಮಾನ್ – ಮಹಾಪಂಚಾಯತಿಯು ದೆಹಲಿಯಲ್ಲಿ ಜರುಗುತ್ತಿದೆ.
ಈ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ನಮ್ಮ ಹರಿಯಾಣ, ದೆಹಲಿ ಸಮಿತಿಯ ನಾಯಕರನ್ನು ದೆಹಲಿ ಪೊಲೀಸರು ಮತ್ತು ಹರಿಯಾಣ ಪೋಲೀಸರು ಇಂದು ಮುಂಜಾನೆ  ಬಂಧಿಸಿದ್ದಾರೆ. ಇಂಥಾ ಜನವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಖಂಡಿಸಿ ಇಂದು  ಕೋಳೂರಿನಲ್ಲಿ ಪ್ರತಿಭಟನೆಯ ನಡೆಸಲಾಯ್ತು.
ಈ ಸಂದರ್ಭದಲ್ಲಿ  ಸಂಘಟನೆಯ ಜಿಲ್ಲಾ ಅಧ್ಯಕ್ಷ ಗೋವಿಂದ್, ನಿಂಗಪ್ಪ ಸೇರಿದಂತೆ ಇತರರು ಇದ್ದರು.