ನಾಯಕರಿಲ್ಲದ ಅನಾಥಕೋಣೆಯಲ್ಲಿ ಕಾಂಗ್ರೆಸ್ ನಾಯಕರು


ದಾವಣಗೆರೆ.ಮೇ.೧೪; ಸಚಿವ ಸಂಪುಟದ ವಿಸ್ತರಣೆ ಹಾಗೂ ಪುನಾರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಹಾಗೂ ಮುಖ್ಯಮಂತ್ರಿಗಳು ಕರ್ನಾಟಕಕ್ಕೆ ಒಳಿತಾಗುವ ನಿರ್ಣಯವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಹೇಳಿದ್ದಾರೆ.
ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವರಿಷ್ಠರಿಗೆ ದೂರದೃಷ್ಠಿಯಿದೆ ಅದಕ್ಕಾಗಿ ನಮ್ಮ ನಾಯಕರಿಗೆ ಯಾವ ಸಮಯಕ್ಕೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿದೆ.ಆರ್ ಎಸ್ಎಸ್ ಮೂಲದವರಿಗೆ ಸಚಿವ ಸ್ಥಾನದಿಂದ ಕೆಳಗಿಳಿಸುವುದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೇ.ನನ್ನನ್ನು ಚುನಾವಣೆಗೆ ನಿಲ್ಲಿಸಿ ಸಚಿವರನ್ನಾಗಿ ಮಾಡಿದೆ.ಮುಂದೆ ಕೂಡ ಪಕ್ಷ ಯಾವ ನಿರ್ಣಯ ತೆಗೆದುಕೊಳ್ಳುತ್ತೋ ಅದಕ್ಕೆ ನಾವು ಸಿದ್ದರಿದ್ದೇವೆ.ಇದರಲ್ಲಿ ಬೇರೆ ಬೇರೆ ವಿಚಾರ ಪ್ರಸ್ತಾಪ ಇಲ್ಲ.ಸಚಿವ ಸ್ಥಾನಕ್ಕೆ 60 ,100 ಕೋಟಿ ನೀಡುತ್ತಿದ್ದಾರೆ ಎನ್ನುವ ಹೇಳಿಕೆಗೆ ಕುರಿತು ಮಾತನಾಡಿದ ಅವರು ಪಕ್ಷ ನಮಗೆ  ಎಲ್ಲವನ್ನೂ ಕೊಟ್ಟಿದೆ ವಿನಃ ನಾವು ಪಕ್ಷಕ್ಕೆ ಏನು ಕೊಟ್ಟಿಲ್ಲ.ನಮ್ಮ ಪಕ್ಷದಲ್ಲಿ ವಿಚಾರಕ್ಕೆ ಆದ್ಯತೆ ವಿನಃ ಹಣಕ್ಕೆ ಆದ್ಯತೆ ಇಲ್ಲ.ಬೊಮ್ಮಯಿ ನೇತೃತ್ವದಲ್ಲಿ ನಾವು ಮುಂದಿನ ಚುನಾವಣೆ ಗೆ ಹೋಗುತ್ತೇವೆ ಎಂದರು.ಸಿಎಂ ಒಳ್ಳೆಯ ಬಜೆಟ್ ನೀಡಿ, 180 ಯೋಜನೆಗಳಿಗೆ ಜೀವವನ್ನು ನೀಡಿದ್ದಾರೆ.ಕಾಂಗ್ರೆಸ್ ನವರು ನಾಯಕರಿಲ್ಲದ ಅನಾಥವಾದ ಕೋಣೆಯಲ್ಲಿ ಇದ್ದಾರೆ.ಕಾರ್ಯಕರ್ತರು, ನಾಯಕರು ಕೂಡ ಅನಾಥರಾಗಿದ್ದಾರೆ.ಇಂದು ರಾಜ್ಯದ ಜನರಿಗೆ ಭರವಸೆ ಇದ್ದರೆ ಅದು ಬಿಜೆಪಿ ಹಾಗೂ‌ ಮೋದಿಯವರ ಮೇಲೆ ಮಾತ್ರ.ಕಾಂಗ್ರೆಸ್ ಹತ್ತು ಸುಳ್ಳು ಹೇಳಿ ನಿಜ ಮಾಡಲು ಹೋಗುತ್ತಿದ್ದಾರೆ.ಕಾಂಗ್ರೆಸ್ ಭ್ರಷ್ಟಾಚಾರಿಗಳು ಜಾಮೀನಿನ ಮೇಲೆ ಇದ್ದವರು.ರಾಷ್ಟ್ರೀಯ ಅಧ್ಯಕ್ಷರಿಂದ ಹಿಡಿದು, ರಾಜ್ಯ ಅಧ್ಯಕ್ಷರವರೆಗೂ ಬೇಲ್ ಮೇಲೆ ಇದ್ದಾರೆ.ಆದರೆ ಅವರು ನಮ್ಮ ಮೇಲೆ ಅರೋಪ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಮೋದಿ ನವ ಭಾರತದ ನಿರ್ಮಾಣಕ್ಕೆ ಹೊರಟರೆ, ಬೊಮ್ಮಯಿ ನವ ಕರ್ನಾಟಕ ನಿರ್ಮಾಣಕ್ಕೆ ಹೊರಟಿದ್ದಾರೆ ಎಂದರು. ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ‌ಲ್ಲಿ
ನಿರಂತರ ಜ್ಯೋತಿ ಅಕ್ರಮ ಪ್ರಕರಣ ಕುರಿತಂತೆಹರಿಹರ ತಾಲ್ಲೂಕಿನ ಎರಡು ಪೀಢರ್ ಗಳಲ್ಲಿ ತನಿಖೆ ನಡೆಸಿದ್ದೇವೆ.ಅದು ಸಮಾಧಾನ ತಂದಿಲ್ಲ ಉಳಿದ 29 ಪೀಡರ್ ಗಳ ತನಿಖೆ ಮಾಡುವುದಕ್ಕೆ ಆದೇಶಿಸಿದ್ದೇನೆ.ನಿರಂತರ ಜ್ಯೋತಿ ಅಕ್ರಮ ಪ್ರಕರಣದಲ್ಲಿ ಯಾರನ್ನು ರಕ್ಷಿಸುವುದಿಲ್ಲನಾನು ಇಂಧನ ಇಲಾಖೆ ಸಚಿವನಾದ ಮೇಲೆ 100 ಕ್ಕೂ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇನೆ.ಅದೇ ರೀತಿ ಹರಿಹರದಲ್ಲಿ ಸಮಗ್ರ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
Attachments area

ReplyReply to allForward