ನಾಯಕನಾಗಿ ಕೇಂಪೇಗೌಡ ಬಡ್ತಿ

ಹಾಸ್ಯ ಕಲಾವಿದರು ನಾಯಕರಾಗುವ ಪರಿಪಾಠ ಮುಂದುವರಿದೆ.ಇದರ ಸಾಲಿಗೆ ಕೆಂಪೇಗೌಡ ಹೊಸ ಸೇರ್ಪಡೆ .
ಸುಮಾರು ೮೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಮಿಡಿ, ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು, ಸದ್ಯ ’ಕಟ್ಲೆ ಸಿನಿಮಾಕ್ಕೆ ನಾಯಕ ಆಗುವುದರ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಎಸ್.ಎಸ್.ವಿಧಾ ಆಕ್ಷನ್ ಕಟ್ ಹೇಳುತ್ತಿದ್ದು ಹೊಸಕೋಟೆಯ ಭರತ್ಗೌಡ ಬಂಡವಾಳ ಹೂಡುತ್ತಿದ್ದಾರೆ.
ಸೈಂಟಿಫಿಕ್ ಕಾಲ್ಪನಿಕ ಕತೆಯಲ್ಲಿ ಸೆಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇರಲಿದೆ. ಪ್ರತಿಯೊಬ್ಬ ಮನುಷ್ಯನಿಗೂ ಸಮಯ ಇರುತ್ತದೆ. ಮನುಷ್ಯನ ಸಾವು ದೇಹಕ್ಕೆ ಮಾತ್ರ. ಆತ್ಮಕ್ಕೆ ಇರೋಲ್ಲ. ದೇಹ ಪಂಚಭೂತಗಳಲ್ಲಿ ವಿಲೀನ ಆಗುತ್ತದೆ. ಎರಡಕ್ಕೂ ಎಲ್ಲೋ ಒಂದು ಕಡೆ ಸಂಬಂದ ಇದೆ. ಅದು ಹೇಗೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಪ್ರಸಕ್ತ ಯುವ ಜನಾಂಗ ಅರಿವಿದ್ದರೂ ತಪ್ಪುಗಳಿಗೆ ಶರಣಾಗುತ್ತಿದ್ದಾರೆ. ಇಂತಹ ಅನೀತಿಗಳನ್ನು ಮಾಡಬಾರದೆಂದು ತೂಕದ ಸಂದೇಶದ ಮೂಲಕ ಹೇಳಲಾಗಿದೆ.
ಅಮೃತ ಮತ್ತು ಶರಣ್ಯ ನಾಯಕಿಯರು ಟೆನ್ನಿಸ್ಕೃಷ್ಣ,ಹರೀಶ್ರಾಜ್, ಪವನ್ಕುಮಾರ್, ಕರಿಸುಬ್ಬು ಮುಂತಾದವರು ನಟಿಸುತ್ತಿದ್ದಾರೆ. ಈಗಾಗಲೇ ಶೇಕಡ ೭೦ ರಷ್ಟು ಚಿತ್ರೀಕರಣ ಸಿರ್ಸಿ, ಮಲೆನಾಡು ಭಾಗಗಳಲ್ಲಿ ಮುಗಿಸಲಾಗಿದೆ. ಬಾಕಿ ೩೦ ರಷ್ಟು ಶೂಟಿಂಗ್ ಬೆಂಗಳೂರಿನಲ್ಲಿ ಸದ್ಯದಲ್ಲೆ ನಡೆಸಲು ಯೋಜನೆ ಹಾಕಲಾಗಿ, ಮತ್ತಷ್ಟು ಹಿರಿಯ ಪೋಷಕ ಕಲಾವಿದರುಗಳು ಸೇರಿಕೊಳ್ಳಲಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಮತ್ತು ಭರ್ಜರಿಚೇತನ್ಕುಮಾರ್ ಸಾಹಿತ್ಯದ ಗೀತೆಗಳಿಗೆ ಶ್ರೀಧರ್ ಸಂಭ್ರಮ್ ಸಂಗೀತವಿದೆ . ವೇದಾಥ್ ರ್ಥ್ಜಯಕುಮಾರ್ ಛಾಯಾಗ್ರಹಣವಿದೆ.