ನಾಯಕನಹಟ್ಟಿ ಹೋಬಳಿಯ ವಿವಿಧ ಗ್ರಾಮದಲ್ಲಿ ಪ್ರಧಾನಿ ಜನ್ಮದಿನಾಚರಣೆ

ನಾಯಕನಹಟ್ಟಿ.ಸೆ.೧೮ : ನಾಯಕನಹಟ್ಟಿ ಹೋಬಳಿಯ ವಿವಿಧ ಹಳ್ಳಿಗಳಿಗೆ ಕೇಂದ್ರ ಸಚಿವ ಎ ನಾರಾಯಣ ಸ್ವಾಮಿ ಅವರು  ಪ್ರಧಾನಿಮಂತ್ರಿ ನರೇಂದ್ರ ಮೋದಿಜೀಯವರ 71ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೊಜಿ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿಜೀಯವರಿಗೆ ಶುಭ ಹಾರೈಸಿದರು.ನಂತರ ಪಟ್ಟಣದ ರಾಜ ಬೀದಿಗಳಲ್ಲಿ ಸಂಚಾರಿಸಿ ಪಾದಗಟ್ಟೆಯ ಹಿಂದೂ ಮಹಾಗಣಪತಿ ಸ್ಥಳಕ್ಕೆ ತೆರೆಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರಿಗೆ ಹುಟ್ಟು ಹಬ್ಬದ ಅಂಗವಾಗಿ ಪೂಜಿ ಸಲ್ಲಿಸಿದರು ಹಾಗೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಬೃಹತ್ ಲಸಿಕ ಮೇಳಕ್ಕೆ ಚಾಲನೆ ನೀಡಿ ಕಾರ್ಯಕರ್ತೆಯರಿಗೆ ಲಸಿಕೆ ಹಾಕಿಸಿದರು.ಈ ಕಾರ್ಯಕ್ರಮದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷರಾದ ಈ. ರಾಮರೆಡ್ಡಿ, ಚಳ್ಳಕೆರೆ ಮಂಡಲದ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ, ಡಿ.ಓ. ಮುರಾರ್ಜಿ, ತಾಲ್ಲೂಕು ದಂಡಧಿಕಾರಿ ಎನ್.ರಘುಮೂರ್ತಿ, ಜಿಲ್ಲಾ ಎಸ್ಟಿ ಮೋರ್ಚ ಅಧ್ಯಕ್ಷರಾದ ಟಿ.ಶಿವಣ್ಣ, ಜಿಲ್ಲಾ ರೈತ ಮಹಿಳಾ ಮೋರ್ಚ ಉಪಾಧ್ಯಕ್ಷರಾದ ಶಾರದಮ್ಮ, ಜಿಲ್ಲಾ ಮಹಿಳಾ ಮೋರ್ಚ ಉಪಧ್ಯಾಕ್ಷೆ ರೂಪಮ್ಮ, ನಾ.ಮಂಡಲದ ಎಸ್ಸಿ ಮೋರ್ಚ ಅಧ್ಯಕ್ಷರಾದ ಚನಗನಹಳ್ಳಿ ಮಲ್ಲೇಶಿ, ಜಿಲ್ಲಾ ಖಜಾಂಚಿ ಶಿವದತ್ತ, ನಾ.ಮಂಡಲದ ಮಹಿಳಾ ಮೋರ್ಚ ಅಧ್ಯಕ್ಷರಾದ ಸುನಂದಮ್ಮ, ನಗರದ ಘಟಕದ ಅಧ್ಯಕ್ಷರಾದ ಎನ್.ಮಹಾಂತಣ್ಣ, ಮಂಡಲದ ರೈತ ಮೋರ್ಚ ಅಧ್ಯಕ್ಷರಾದ ಬಾಲರಾಜ್ ಯಾದವ್ ಇತರರಿದ್ದರು.