ನಾಯಕತ್ವ ಬದಲಾವಣೆಗೆ ಆಗ್ರಹಿಸುವವರನ್ನು ಪಕ್ಷದಿಂದ ಉಚ್ಛಾಟಿಸಿ:ನಡಹಳ್ಳಿ

ಮುದ್ದೇಬಿಹಾಳ: ಮೇ.28:ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಾಯಕತ್ವ ಬದಲಾವಣೆಯಾಗಬೇಕು ಎಂದು ಮಾಧ್ಯಮಗಳ ಮೂಲಕ ಹೇಳಿಕೆ ಕೋಡುವ ಸಚೀವರಾಗಿರಲಿ ಶಾಸಕರಾಗಿರಲಿ ಒಟ್ಟಾರೇಯಾಗಿ ಯಾರೇ ಅಗಿರಲಿ ಅಂತಹವರನ್ನು ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರು ಈ ವಿಷಯವನ್ನು ತುಂಬಾ ಗಂಭಿರವಾಗಿ ಪರಿಗಣಿಸಿ ಪಕ್ಷವಿರೋಧಿ ಚಟುವಟಿಯಡಿಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಮೂಲಕ ಎಚ್ಚರಿಕೆ ನೀಡಬೇಕು ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ) ಅವರು ಹೇಳಿದರು.

ಪಟ್ಟಣದ ಇಲ್ಲಿನ ತಮ್ಮ ದಾಸೋಹ ನಿಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೇದ ನಲವತ್ತೇಂಟು ವರ್ಷಗಳ ಕಾಲ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಕೀರ್ತಿ ಬಿ ಎಸ್ ಯಡೀಯೂರಪ್ಪನವರಿಗೆ ಸಲ್ಲುತ್ತದೆ. ಅವರ ರಾಜಕೀಯದ ಹಿರಿತನದ ಅನುಭವವನ್ನು ಅರಿತುಕೊಂಡೆ 2018 ಚುನಾವಣೆ ವೇಳೆ ರಾಷ್ಟ್ರೀಯ ನಾಯಕ ಅಮೀಶಾ ಜಿಯವರು ಯಡಿಯೂರಪ್ಪನವರ ನೇತೃತ್ವದ ನಾಯಕತ್ವದಲ್ಲಿಯೇ ರಾಜ್ಯ ಬಿಜೆಪಿ ಚುನಾವಣೆ ಎದರಲಿಸಿದೇ ಎಂದು ಖಡಕ್ಕ್ ಸಂದೇಶ ರವಾನಿಸಿದ್ದರ ಪರಿಣಾಮ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.

ಸಧ್ಯ ರಾಜ್ಯದಲ್ಲಿ ಕೋರೊನಾ ಒಂದನೆ ಎರಡನೇ ಅಲೇ ಬಂದು ತೀವೃ ಸಂಕಷ್ಟದಲ್ಲಿಯೂ ಧೈರ್ಯವಾಗಿ ಎದುರಿಸುವ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅದರಂತೆ ಮುಂದಿನ 23 ತಿಂಗಳವರಗೂ ಬಿ ಎಸ್ ಯಡೀಯೂರಪ್ಪನವರೇ ಮುಖ್ಯಮಂತ್ರಿಗಳಾಗಿ ಉತ್ತಮ ಆಡಳಿತ ನಡೆಸುತ್ತಾರೆ ಅವರ ನೇತೃತ್ವದಲ್ಲಿಯೇ 2023ರಲ್ಲಿ ನಡೆಯುವ ವಿಧಾನ ಸಭಾ ಚುನಾವಣೆಯನ್ನು ಎದುರಿಸುತ್ತೇವೆ ಸಧ್ಯಕ್ಕೆ ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಾಲಿ ಇಲ್ಲ.

ಆದರೇ ನಮ್ಮದೇ ಬಿಜೆಪಿಯ ಕೆಲ ಸಚೀವರು, ಮತ್ತು ಶಾಸಕರು ಮಾಧ್ಯಮಗಳ ಮೂಲಕ ಹೇಳಿಕೆ ಕೊಡುವ ಕುತಂತ್ರಿ ರಾಜಕಾರೀಣಿ ಮಾತುಗಳನ್ನು ಯಾರೂ ಕೂಡ ಗಂಭಿರವಾಗಿ ತೆಗೆದುಕೊಳ್ಳುವ ಅಗತ್ಯತೆ ಇಲ್ಲ. ಜತೆಗೆ ಮುಖ್ಯಮಂತ್ರಿ ಬಿ ಎಸ್ ಯಡೀಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಸಬೇಕು ಎಂದು ಹುನ್ನಾರ ನಡೆಸುತ್ತಿರುವು, ರಾಜಕೀಯ ಕುತಂತ್ರ ನಡೆಸುತ್ತಿದ್ದಾರೆ ಯಾರೇ ಆಗಲಿ ಅವರು ಈ ಈಕ್ಷಣದಿಂದಲೇ ಇದನ್ನು ಕೈ ಬಿಡಬೇಕು ಇದರಿಂದ ಪಕ್ಷದ ವರ್ಚಸ್ಸಿಗೆ ದಕ್ಕೆ ಬರಲಿದೆ.

ನಾವು ಪಕ್ಷ ನಿಷ್ಟರು ಎಂದು ಹೇಳಿಕೊಂಡು ಯಡಿಯೂರಪ್ಪನವರ ವಿರುದ್ಧ ಮಾತನಾಡುತ್ತಿದ್ದರೇ ಅದು ಅವರ ಮೂರ್ಖತನದ ಪರಮಾವಧಿ ಹೊರತು ಬೇರೆನು ಅಲ್ಲ ಎಂಬುದು ತಮ್ಮ ಗೊಂದಲ ಹೇಳಿಕೆಗಳೆ ಸಾಕ್ಷಿಯಾಗಲಿವೆ. ಅವರ ಬಗಗೆ ಹಗುರವಾಗಿ ಮಾತನಾಡಿ ನೀವು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಲು ಸಾಧ್ಯವೇ ಇಲ್ಲ.

ಈ ವೇಳೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಮ್ಮ ವಿರುದ್ಧ ಶಡ್ಯಂತರ ನಡೆಸುತ್ತಿರುವ ಮಂತ್ರಿಯಾರು ಎಂಬುದನ್ನು ತಮಗೆ ತಿಳಿದಿರುತ್ತದೆ ಅಂತವರನ್ನು ಈ ಕೂಡಲೇ ತಮ್ಮ ಮಂತ್ರಿ ಮಂಡಲದಿಂದ ಕೈಬಿಡೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದರು.


ಇಲ್ಲಿವಯರೆಗೂ ಯಾವೋಬ್ಬ ಶಾಸಕರೂ ಮಾಧ್ಯಮದ ಮುಂದೆ ಬಂದು ನಾವು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಧೈರ್ಯ ಮಾಡಿಲ್ಲ. ಆದರೇ ಒಬ್ಬರೇ ಒಬ್ಬರು ಶಾಸಕರು ಪದೆ ಪದೆ ಹೇಳಿಕೆ ಕೋಡುತ್ತಲೇ ಇದ್ದಾರೆ. ಅದು ಕೂಡ ಮಾಧ್ಯಮದವರೆಲ್ಲರಿಗೂ ತಿಳಿದಿರುವ ವಿಚಾರ ಅವರ ಹೆಸರನ್ನು ನನ್ನ ಬಾಯಿಂದ ನಾನು ಹೇಳುವ ಅಗತ್ಯವಿಲ್ಲ.