ನಾಯಕತ್ವ ಗುಣ ಕಲಿಸುವುದೇ ಎನ್.ಎಸ್.ಎಸ್.ಮುಖ್ಯ ಗುರಿ

ಕಲಬುರಗಿ,ಸೆ.13- ನಾಯಕತ್ವ ಗುಣ ಕಲಿಸುವುದೇ ಎನ್.ಎಸ್.ಎಸ್ ಮುಖ್ಯ ಗುರಿಯಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ಹೇಳಿದರು.
ನಗರದ ಸ್ಟೇಷನ್ ಬಜಾರದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹನುಮಾನ ನಗರ ತಾಂಡಾದಲ್ಲಿ ಹಮ್ಮಿಕೊಂಡಿದ್ದ 2021-22ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾಜಿಕ, ಶೈಕ್ಷಣಿಕ, ವೈಜ್ಞಾನಿಕ ಗುಣಗಳು ಬದುಕಿನಲ್ಲಿ ಅಳವಡಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆಯು ಸಹಾಯವಾಗುತ್ತದೆ. ಇದರ ಲಾಭ ಪಡೆದು ಸ್ವಯಂಸೇವಕರು ಸರಕಾರದ ಯೋಜನೆಗಳನ್ನು ನಿಜವಾದ ಫಲಾನುಭವಿಗಳಿಗೆ ಮುಟ್ಟಿಸುವ ಸಮಾಜಮುಖಿ ಕೆಲಸ ಮಾಡಬೇಕು. ಇತಿಹಾಸವನ್ನು ಇತಿಹಾಸ ದೃಷ್ಟಿಯಿಂದಲೇ ನೋಡಬೇಕು ಮತಿಯ ದೃಷ್ಟಿಯಿಂದ ಅಲ್ಲಾ ಇತ್ತೀಚಿಗೆ ಇತಿಹಾಸ ತಿರುಚಿಕೆ ನಡೆದಿದ್ದು ಸಮಾಜಕ್ಕೆ ಘಾತಕವಾಗಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಧ್ವಜಾರೋಹಣ ನೆರವರಿಸಿ ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಲಂಡನ್ಕರ್ ಅವರು, ಭಾರತವು ಸ್ವತಂತ್ರ ಪಡೆಯಬೇಕಾದರೆ ಯುವಕರ ತ್ಯಾಗ, ಬಲಿದಾನ ಮಹತ್ವವನ್ನು ನಾವು ಸಾರಬೇಕಾಗಿದೆ. ಬ್ರಿಟಿಷರ ವಿರುದ್ಧ ಸಂಘಟಿತವಾಗಿ ಹೋರಾಡಿದರ ಫಲವೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಮಹಾತ್ಮ ಗಾಂಧೀಜಿಯವರ ಸರ್ವೋದಯ ತತ್ವವನ್ನು ನನಸು ಮಾಡಲು ದೇಶದಲ್ಲಿ ಯುವಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ರಾಷ್ಟ್ರೀಯ ಮಟ್ಟದಲ್ಲಿ ಎನ್.ಎಸ್.ಎಸ್ ಕಾರ್ಯರಂಭ ಮಾಡಲಾಗಿದೆ. ಎನ್‍ಎನ್‍ಎಸ್ ಮುಖ್ಯ ಗುರಿ ನನಗಾಗಿ ಅಲ್ಲ ನಿಮಗಾಗಿ ಆಗಿದ್ದು, ಎಲ್ಲಾ ವಿದ್ಯಾರ್ಥಿಗಳು ಸಮಾಜದ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸಿ ತರ್ಕಬದ್ಧ ಪರಿಹಾರವನ್ನು ಕಂಡುಕೊಳ್ಳಬೇಕು. ಸಾಮಾಜಿಕ ಪಿಡುಗುಗಳಾದ ಜಾತಿ ಪದ್ಧತಿ, ಅಸ್ಪೃಶ್ಯತೆ ,ದೇವದಾಸಿ ಪದ್ಧತಿ, ಬಡತನ, ನಿರುದ್ಯೋಗ ಭ್ರಷ್ಟಾಚಾರ ಇವುಗಳು ಬಲಿಷ್ಠ ಭಾರತಕ್ಕೆ ಅಡ್ಡಗಾಲಾಗಿದ್ದು, ಸ್ವಯಂಸೇವಕರು ಈ ನಿಟ್ಟಿನಲ್ಲಿ ಇಂಥಹ ಪಿಡುಗುಗಳ ವಿರುದ್ಧ ಹೋರಾಡಿ ಬಲಿಷ್ಠ ಭಾರತ ಕಟ್ಟಬೇಕು. ಧರ್ಮಗಳು ಜನರಿಗೆ ನೀತಿ ನಿಯಮಗಳು ನೀಡಿ ಸನ್ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕು. ಆದರೆ, ಇತ್ತೀಚಿಗೆ ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟಲಾಗುತ್ತಿರುವ ಪ್ರವೃತಿ ಹೆಚ್ಚಾಗುತ್ತಿದ್ದು ಭಾರತದ ಇದು ಭಾವೈಕ್ಯತೆಗೆ ಕೊಡಲಿ ಪೆಟ್ಟು ನೀಡುತ್ತಿದೆ, ಯುವಕರು ಇಂಥ ಬೌದ್ಧಿಕ ಅದಪಥÀನದ ಕಡೆಗೆ ಹೋಗಬಾರದು ವಾಸ್ತವ ಸ್ಥಿತಿಯನ್ನು ತಿಳಿದುಕೊಂಡು ಸಮ ಸಮಾಜ ನಿರ್ಮಾಣ ಮಾಡಲು ಬದ್ಧರಾಗಬೇಕು. ದೇಶದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯಾಗಿದ್ದು, ಕೆಲವೇ ಕೆಲವು ಶಕ್ತಿಗಳ ಹತ್ತಿರ ಸಂಪತ್ತಿನ ಕೇಂದ್ರೀಕರಣದಿಂದ ಎಷ್ಟೋ ಬಡ ಬಗ್ಗರ ಮೂಲ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲಾರದಂತಹ ದಯನೀಯ ಸ್ಥಿತಿ ಇದೆ. ಇಂತಹ ಸಂಪತ್ತಿನ ಅಸಮಾನತೆ ಹೋಗಲಾಡಿಸಿ ಸಮೃದ್ಧ ಭಾರತ ನಿರ್ಮಾಣವಾಗಬೇಕು. ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ ಫುಲೆ ರವರ ಕನಸಿನ ಭಾರತ ನಿರ್ಮಾಣವಾಗಬೇಕು. ಮನುಷ್ಯನ ಸ್ವಾರ್ಥದಿಂದ ಪರಿಸರ ಕುಲುಷಿತಗೊಂಡು ಪರಿಸರ ಹಾಳಾಗಿದ್ದು ಮುಂದೆ ಮಾನವ ಕುಲಕ್ಕೆ ದೊಡ್ಡ ಗಂಡಾಂತರ ಕಾದಿದೆ ಎಂದರು. ಈಗಲೇ ಎಚ್ಚೆತ್ತು ಪರಿಸರವನ್ನು ಸಂರಕ್ಷಿಸುವ ಕೆಲಸ ನಾವು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ್ ದೊಡಮನಿ, ಪ್ರಸ್ತಾವಿಕವಾಗಿ ಪಾಂಡು ಎಲ್ ರಾಠೋಡ್ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಜಾತಾ ಬಿರಾದಾರ್ ವಹಿಸಿದರು. ನಿರ್ವಹಣೆಯನ್ನು ಬಲರಾಮ ಚವಾಣ್, ಸ್ವಾಗತವನ್ನು ವಿಜಯಲಕ್ಷ್ಮಿ ರೆಡ್ಡಿ, ವಂದನಾರ್ಪಣೆಯನ್ನು ಶ್ರೀಶೈಲ್ ಖುರ್ದು ನೆರವೇರಿಸಿದರು. ಸಾಹಯಕ ಕಾರ್ಯಕ್ರಮ ಅಧಿಕಾರಿ ಸಿದ್ದಲಿಂಗಪ್ಪ ಪೂಜಾರಿ,ಬಾಬು ಲೋಕು ಚೌಹಾಣ್, ರೇಖಾ ರಾಯಚುರ್ ,ಮಾಪಣ್ಣ ಜಿರೋಳ್ಳಿ ,ಮಲ್ಲಯ್ಯ ಮಠಪತಿ ರಾಜೇಶ್, ಶ್ರೀನಿವಾಸ್ ,ರೋಹಿಣಿ ಶಶಿಧರ್ ಭೂಸನೂರ್, ಮುಂತಾದವರು ಉಪಸ್ಥಿತರಿದ್ದರು.