ನಾಮಫಲಕ ಕಿತ್ತುಹಾಕಿದವರ ಮೇಲೆ ಕ್ರಮಕ್ಕೆ ಒತ್ತಾಯ

ದಾವಣಗೆರೆ. ಜ.೨ ; ಜಗಳೂರು ತಾಲ್ಲೂಕಿನ ತೊರೆಸಿದ್ದಿಹಳ್ಳಿ ಗ್ರಾಮದ ಶ್ರೀ ಆದಿಜಾಂಬವ ಸಮಾಜ ಸೇವಾ ಸಮಿತಿ ಎಸ್.ಸಿ.(ರಿ) ಯ ನಾಮಫಲಕವನ್ನು ಕಿತ್ತುಹಾಕಿ, ಧ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ದಲಿತ‌ಸಂಘಟನೆಗಳ ಜಿಲ್ಲಾಧ್ಯಕ್ಷ ಸಿ.ಬಸವರಾಜ್ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರುಜಗಳೂರು ತಾಲ್ಲೂಕಿನ ತೋರೆಸಿದ್ದಿಹಳ್ಳಿ ಗ್ರಾಮದಲ್ಲಿ ಆದಿಜಾಂಬವ ಸಮಿತಿಯು 6 ತಿಂಗಳ ಹಿಂದೆ ಪ್ರಾರಂಭಿಸಲಾಗಿದೆ.ಸಮಿತಿಯ ರಿ.ನಂ. ಡಿಆರ್ ಡಿವಿ/ ಎಸ್‌ಓಆರ್ /783/2022-23 ನಂಬರ್‌ವುಳ್ಳ ಸಂಘಟನೆ ನೊಂದಾವಣೆ ಕೊಂಡು ನಂತರ 2022 ಡಿ.20 ರಂದು ಸಿದ್ಧಿಹಳ್ಳಿರಿ. ಸಂ.ನಂ. 75ರಲ್ಲಿ 41 ಎಕರೆ ಸರ್ಕಾರಿ ಗೋಮಾಳ ಜಮೀನಿದ್ದು, ಈ ಜಾಗದಲ್ಲಿ ನಮ್ಮ ಗ್ರಾಮದ ಬಡವರು ಈ ಹಿಂದೆ ಮನೆಗಳನ್ನು ನಿರ್ಮಿಸಿಕೊಂಡು ಉಳಿದ 31 ಎಕರೆಯು ಸರ್ಕಾರಿ ಗೋಮಾಳ ಜಮೀನು ಖಾಲಿಯಿರುತ್ತದೆ.ಈ ಜಮೀನಿನಲ್ಲಿ 1.30 ಜಮೀನಿನಲ್ಲಿ ವೃದ್ಧಾಶ್ರಮ‌ ಮತ್ತು ಸಮಾಜ ಇತರೆ ಚಟುವಟಿಕೆ ನಡೆಸಲು ನಿರ್ಧರಿಸಿದ್ದು, ಅದರಂತೆ ಸದರಿ 1.30 ಗುಂಟೆ ಜಮೀನನ್ನು ಸ್ವಚ್ಛಗೊಳಿಸಿ ಸಂಘದ ನಾಮಫಲಕವನ್ನು ಬರೆಯಿಸಿ ಹಾಕಲಾಗಿತ್ತು ಆದರೆ ಕೆಲ ಕಿಡಿಗೇಡಿಗಳು  ಸಂಘದ ನಾಮಫಲಕವನ್ನು ಕಿತ್ತುಹಾಕಿ ಧ್ವಂಸಗೊಳಿಸಿದ್ದಾರೆ.ಈ ಬಗ್ಗೆ ಜಗಳೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು ಆದರೆ‌ ಇದೂವರೆಗೂ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.ಈ ಕೂಡಲೇ ನಾಮಫಲಕ ಕಿತ್ತುಹಾಕಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಮಹಾಂತೇಶ್,ವಿಜಯಕುಮಾರ್, ಆರ್ ರಮೇಶ್ ಸಿದ್ದಿ,ಯಲ್ಲಪ್ಪ,ಎಂ.ರಾಜಪ್ಪ ಇದ್ದರು.