ನಾಮಫಲಕ ಇಲ್ಲದ ನಗರಸಭಾ ಕಚೇರಿ

ಸಂಜೆವಾಣಿ ವಾರ್ತೆ
ನಂಜನಗೂಡು: ಜು.12:- ನಗರದ ಮಧ್ಯದ ಭಾಗದಲ್ಲಿರುವ ನಗರಸಭಾ ಕಛೇರಿ ಇದೆ ಇಲ್ಲಿಗೆ ಸಾವಿರಾರು ಜನ ಪ್ರತಿದಿನ ಬಂದು ತಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ಬರುತ್ತಾರೆ.
ಆದರೆ ನಗರಸಭೆ ಎಂದು ನಾಮಫಲಕ ಇಲ್ಲದೆ ಇರುವ ಕಾಲಿ ಬೋರ್ಡ್ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು. ಇದರ ಬಗ್ಗೆ ಕೆಲವು ದಿನಗಳ ಹಿಂದೆ ಶಾಸಕ ದರ್ಶನ್ ಧ್ರುವನಾರಾಯಣ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ನಡೆಸುವಾಗ ನಾನು ಯಾವ ಕಚೇರಿಗೆ ಬಂದಿದ್ದೇನೆ ಎಂಬುದು ಅರ್ಥವಾಗುತ್ತಿಲ್ಲ ಮೊದಲು ನಗರಸಭಾ ಕಚೇರಿ ಎಂದು ನಾಮಫಲಕ ಅಳವಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ನಗರಸಭಾ ಆಯುಕ್ತ ನಂಜುಂಡಸ್ವಾಮಿ ತಕ್ಷಣ ಎರಡು ದಿನದಲ್ಲಿ ನಾಮಫಲಕ ಹಾಕುತ್ತೇವೆ ಎಂದು ತಿಳಿಸಿದರು ಆದರೆ ದಿನಗಳು ಕಳೆಯುತ್ತಿವೆ ಹೊರತು ಕಚೇರಿಗೆ ನಾಮಫಲಕ ಹಾಕಲು ಮುಂದಾಗಿಲ್ಲ.
ಶಾಸಕರ ಮಾತನ್ನು ಗಾಳಿಗೆ ತೂರಿದ ಅಧಿಕಾರಿಗಳು ಕಚೇರಿಯ ಕೆಲಸ ಹೇಗೆ ಎಂಬುದೇ ಸಾರ್ವಜನಿಕರ ಪ್ರಶ್ನೆಯಾಗಿದೆ ಮುಂದಾದರು ತಕ್ಷಣ ನಗರಸಭೆ ಕಚೇರಿಗೆ ನಗರಸಭಾ ಕಚೇರಿ ಎಂದು ನಾಮಫಲಕ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.