ನಾಮಫಲಕ ಅಳವಡಿಕೆಗೆ ಚಾಲನೆ

ಬೀದರ: ನ.9:ಬಿಜೆಪಿ ಬೀದರ್ ಗ್ರಾಮಾಂತರ ಮಂಡಲ ಘಟಕದಿಂದ ಹಮ್ಮಿಕೊಂಡ ನಾಮಫಲಕಗಳ ಅಳವಡಿಸುವ ಕಾರ್ಯಕ್ರಮ ತಾಲೂಕಿನ ಚಾಂಬೋಳ ಗ್ರಾಮದಲ್ಲಿ ಸೋಮವಾರ ಜರುಗಿತು.

ಬೂತ್ ಅಧ್ಯಕ್ಷರ ಮನೆಗಳಿಗೆ ನಾಮಫಲಕ ಅಳವಡಿಕೆಗೆ ಕೇಂದ್ರದ ನವೀಕರಿಸಬಹುದಾದ ಇಂಧನ ಮೂಲಕ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಚಾಲನೆ ನೀಡಿ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಮೊದಲ ಆದ್ಯತೆ ಇದೆ. ಸಣ್ಣ ಕಾರ್ಯಕರ್ತನಾಗಿದ್ದ ನಾನೀಗ ಕೇಂದ್ರದ ಸಚಿವನಾಗಿರುವೆ. ಇದುವೇ ಬೇರೆ ಪಕ್ಷಗಳಿಗಿಂತ ಬಿಜೆಪಿಗೆ ಇರುವ ವಿಶೇಷ ಎಂದು ಹೇಳಿದರು.

ಬರುವ ದಿನಗಳಲ್ಲಿ ವಿಧಾನ ಪರಿಷತ್, ಜಿಪಂ, ತಾಪಂ ಚುನಾವಣೆಗಳು ಬರಲಿವೆ. ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಸಿದ್ಧತೆಯಲ್ಲಿ ತೊಗಡಿಸಿಕೊಂಡು ಪಕ್ಷದ ಪರವಾದ ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಅಧ್ಯಕ್ಷ ರಾಜೇಂದ್ರ ಪೂಜಾರಿ ಮಾತನಾಡಿ, ಗ್ರಾಮಾಂತರ ವ್ಯಾಪ್ತಿಯ ಎಲ್ಲ ಬೂತ್ ಅಧ್ಯಕ್ಷರಿಗೆ ಅವರ ಹೆಸರುಳ್ಳ ನಾಮಫಲಕಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಪಂಢರಿನಾಥ ಲದ್ದೆ, ವಿಜಯಕುಮಾರ ಹಿಪ್ಪಳಗಾಂವ, ದೀಪಕ ಗಾದಗೆ, ಲಕ್ಷ್ಮಣ ರಾಠೋಡ್, ರವಿ ಭಂಗೆ, ಧಮೇಂದ್ರ ಯರನಳ್ಳಿ, ನಾಗೇಂದ್ರ ಪಾಟೀಲ್, ರಾಮಶೆಟ್ಟಿ ಬಿರಾದಾರ, ಉದಯಕುಮಾರ ಬಿರಾದಾರ, ವಿಜಯಕುಮಾರ ಸೋಲಪುರೆ, ಶಿವರಾಜ ಶ್ರೀಗಿರೆ, ರಮೇಶ ಕತ್ತೆ, ಉಮೇಶ ಬಿರಾದಾರ, ಪಂಢರಿ ಮೇತ್ರೆ, ಕುಶಾಲ ಜೀತಪ್ಪ ಇತರರರಿದ್ದರು.