
ಗಬ್ಬೂರು,ಏ.೨೧- ದೇವದುರ್ಗದ ಪಟ್ಟಣ ಸೇರಿದಂತೆ ಹೋಬಳಿ ಮತ್ತು ಹಳ್ಳಿಗಳಲ್ಲಿ ನಾಮಫಲಕವಿಲ್ಲದೆ ಮೆಡಿಕಲ್ ಶಾಪ್ ಗಳಿಂದ ಹಗಲುದರೋಡೆ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತರಾದ ನಾಗರಾಜ ಪಾಟೀಲ ಹಂಚಿನಾಳ ಅವರ ಆರೋಪವಾಗಿದೆ.
ಸಾರ್ವಜನಿಕರಿಗೆ, ಕಳಪೆ ಔಷಧಿ ಮತ್ತು, ಔಷಧಿ ಮಳಿಗೆಗಳಲ್ಲಿ, ೧೦ನೇ ತರಗತಿ ಹೋದದಿರುವಂತಹ ವ್ಯಕ್ತಿಗಳನ್ನು ಅಂಗಡಿಯಲ್ಲಿ ನೇಮಕ ಮಾಡುತ್ತಾರೆ ಅಂಗಡಿಯ ಮಾಲೀಕರುಗಳು, ಪರವಾನಿಗೆ ಹೊಂದಿರುವ ವ್ಯಕ್ತಿ ಮಾತ್ರ ಔಷಧಿ ಮಳೆಯಲ್ಲಿ ವ್ಯವಹಾರ ಮಾಡುವುದು ಕಾನೂನು, ಆದರೆ ಔಷಧಿ ಮಳಿಗೆಯ ಮಾಲೀಕರಗಳು, ಸಂಬಂಧಪಟ್ಟ ಟ್ರಕ್ ಕಂಟ್ರೋಲ್ ಅಧಿಕಾರಿಗಳಿಗೆ, ಇಂತಿಷ್ಟು ಲಂಚಾ ರೂಪದಲ್ಲಿ ಹಣವನ್ನು ನೀಡಿ, ತಾವು ಮಾಡಿದ್ದೆ ಆಟ ಸಾರ್ವಜನಿಕರಿಗೆ ಸಿಕ್ಕಸಿಕ್ಕ ಮಾತ್ರೆಗಳನ್ನು ಕೊಟ್ಟರು ಸಹ, ಸಾರ್ವಜನಿಕರ ಗೋಳು ಹೇಳುವವರಿಲ್ಲ ಕೇಳುವವರಿಲ್ಲ.
ಕುರಿ ಗುಂಪಿನಂತೆ ದೇವದುರ್ಗ ಪಟ್ಟಣದ ತುಂಬಾ ಮೆಡಿಕಲ್ ಶಾಪಗಳು ತಲೆ ಎತ್ತಿವೆ, mbbs ಡಾ. ಶಿಫಾರಸು ಮಾಡಿದರೆ ಮಾತ್ರ, ಔಷಧಿ ಮಳಿಗೆಯ ಮಾಲೀಕರುಗಳು ಮಾತ್ರೆಗಳನ್ನು ಸಾರ್ವಜನಿಕ ರೋಗಿಗೆ ಕೊಡಬೇಕು, ಆದರೆ ಎಂಬಿಬಿಎಸ್ ಡಾಕ್ಟ್ರುಗಳ ಸಂಖ್ಯೆನೇ ಬಹಳ ಕಡಿಮೆ ಇದೆ ಅದಕ್ಕಿಂತ ೧೦ ಪಟ್ಟು ಮೆಡಿಕಲ್ ಶಾಪ್‌ಗಳು ಸೃಷ್ಟಿಯಾಗಿವೆ. ಆದಕಾರಣ ಜಿಲ್ಲಾಧಿಕಾರಿಗಳು ಮತ್ತು ತಾಲೂಕು ತಹಶೀಲ್ದಾರ್ ಸಾಹೇಬರು ಮಧ್ಯಪ್ರವೇಶ ಮಾಡಿ, ಕಡಿವಾಣ ಹಾಕಬೇಕು.
ಇನ್ನು ಹಳ್ಳಿಗಳಲ್ಲಂತೂ ಕಿರಾಣಿ ಅಂಗಡಿಯಲ್ಲಿ, ಮತ್ತು ಖಒP ವೈದ್ಯರ ಮನೆಯಲ್ಲಿ, ಲಕ್ಷಾಂತರ ರೂಪಾಯಿ ಮಾತ್ರೆಗಳು ಸಿಗುತ್ತವೆ, ಸರಕಾರದ ಸಂಬಳ ತೆಗೆದುಕೊಂಡು ಸಾರ್ವಜನಿಕರ ಹಿತ ಕಾಪಾಡಬೇಕಾದ ಸಂಬಂಧ ಪಟ್ಟ ಇಲಾಖೆ ಇನ್ನೂ ಮುಂದಾದರು ಎಚ್ಚೆತ್ತುಕೊಳ್ಳಬೇಕು, ದೇವದುರ್ಗ ಪಟ್ಟಣದ ಮೆಡಿಕಲ್ ಶಾಪ್ ಗಳಿಗೆ ನಾಮಫಲಕ ಸಹ ಇಲ್ಲ, ಇಂತಹ ವ್ಯವಸ್ಥೆ ಆದಷ್ಟು ಬೇಗನೆ ಕಡಿವಾಣ ಬಿಳಲೇಬೇಕೆಂದು, ನಾಗರಾಜ್ ಪಾಟೀಲ್ ಹಂಚಿನಾಳ್ ಅವರು ಆಗ್ರಹಿಸಿದ್ದಾರೆ.