ನಾಮಫಲಕಗಳಲ್ಲಿ ಇಂಗ್ಲೀಷ್ ವ್ಯಾಮೋಹ: ನಿಯಂತ್ರಣಕ್ಕೆ ಶ್ರೀ ಶಾಂತಮಲ್ಲ ಶ್ರೀಗಳು ಮನವಿ

ರಾಯಚೂರು,ನ.೧- ನಗರದ ಹಲವೆಡೆ ನಾಮ ಫಲಕಗಳಲ್ಲಿ ಇಂಗ್ಲೀಷ್ ವ್ಯಾಮೋಹ ಎದ್ದು ಕಾಣುತ್ತಿದೆ. ಇದರ ಕಡೆ ಕರವೇ ಗಮನಹರಿಸಬೇಕೆಂದು ಶ್ರೀ ಶಾಂತಮಲ್ಲ ಶ್ರೀಗಳು ಹೇಳಿದ್ದರು.
ಅವರಿಂದು ಕರ್ನಾಟಕ ರಾಜ್ಯೋತ್ಸವದಂಗವಾಗಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಕಚೇರಿಯಲ್ಲಿ ಧ್ವಜಾರೋಹಣ ನೇರವೇರಿಸಿ, ಕರವೇ ಜಿಲ್ಲಾಧ್ಯಕ್ಷ ಜಿಲ್ಲೆಯ ನೆಲ, ಜಲ ಮತ್ತು ಕನ್ನಡಮ್ಮನ ಸೇವೆ ಸಲ್ಲಿಸುತ್ತಿರುವದು ಶ್ಲಾಘನೀಯವಾಗಿದೆ. ಹಲವು ನಾಮ ಫಲಕಗಳಲ್ಲಿ ಇಂಗ್ಲೀಷ್ ವ್ಯಾಮೋಹ ಎದ್ದು ಕಾಣುತ್ತಿದ್ದು, ಇದನ್ನು ನಿಯಂತ್ರಿಸಬೇಕೆಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೈ . ಗೋಪಾಲರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮಾತನಾಡಿ, ನಗರದ ವಿವಿಧೆಡೆಯಿರುವ ಇಂಗ್ಲೀಷ್ ನಾಮಫಲಕಗಳ ಕುರಿತು ನಗರಸಭೇ ಆಯುಕ್ತರೊಂದಿಗೆ ಚರ್ಚಿಸಿ ಇಂಗ್ಲೀಷ್ ಹಾವಳಿಯನ್ನು ನಿಯಂತ್ರಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ.ಶರಣಪ್ಪ ಗೋನಾಳ, ಮಂಜುನಾಥ ಹಾನಗಲ್, ವಿ.ಆರ್.ಶಾಂತಕುಮಾರ, ಶರಣಪ್ಪ ಆಟೋ, ಜಿಂದಪ್ಪ ಯಾದವ, ರಮೇಶ ಪಡುಕೋಟಿ, ಕೊಂಡಪ್ಪ, ವಿರೇಶ ಸೋನಾ, ಸಾಧಿಕ್, ಫೀರೋಜ್, ಶಹನವಾಜ್, ಮಹೇಶ, ಗೋಪಾಲರೆಡ್ಡಿ, ವೆಂಕಟೇಶ ಮಡಿವಾಳ, ರಾಜೇಶ ಉಣ್ಣೆ, ಮಲ್ಲಿಕಾರ್ಜುನ, ಹನುಮಂತು, ವಿಶಾಲ ಮತ್ತು ದಂಡಪ್ಪ ಬಿರಾದರ್ ಉಪಸ್ಥಿತರಿದ್ದರು.