ನಾಮಪತ್ರ ಹಿಂಪಡೆದ ಮಾರೂತಿರಾವ ಮೂಳೆ

ಬಸವಕಲ್ಯಾಣ:ಎ.3: ಮಾರ್ಚ್ 30ರಂದು ಬಸವಕಲ್ಯಾಣ ವಿಶಾನ ಸಭೆ ಉಪ ಚುನಾವಣೆಗೆ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಮಾಜಿ ಶಾಸಕ ಮಾರೂತಿರಾವ ಮುಳೆ ಇಂದು ನಾಮಪತ್ರ ಹಿಂತೆಗೆದುಕೊಳ್ಳುವ ಮೂಲಕ ಪರೊಕ್ಷವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎನ್.ಸಿ.ಪಿ ಜಿಲ್ಲಾಧ್ಯಕ್ಷ ರಾಮಭಾವ ಜಾಧವ್ ನಗರದಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿ, ಮಾರೂತಿರಾವ್ ಮುಳೆ ಅವರು ಸದಾ ತನ್ನನ್ನು ತಾನು ಮಾರಿಕೊಳ್ಳುವ ವ್ಯಕ್ತಿಯಾಗಿದ್ದು, ಈಗಲೂ ಅದೆ ಚಾಳಿ ಮುಂದುವರೆಸಿದ್ದಾರೆ. ಹಣಕ್ಕಾಗಿ ಮಾರಿಕೊಳ್ಳುವ ಇಂಥವರಿಗೆ ಮರಾಠಾ ಸಮಾಜ ಯಾವತ್ತೂ ನಂಬಬಾರದೆಂದು ರಾಮಭಾವ ಜಾಧವ್ ಹೇಳಿದ್ದಾರೆ. ಸಮಾಜವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಮುಳೆಯವರನ್ನು ಸಮಾಜದಿಂದ ಬಹಿಸ್ಕಾರ ಹಾಕುವಂತೆ ಸಮುದಾಯವನ್ನು ಕೋರಿದ್ದಾರೆ.