ನಾಮಪತ್ರ ಸಲ್ಲಿಸುವ ಎರಡನೇ ದಿನ 06 ನಾಮಪತ್ರಗಳ ಸ್ವೀಕಾರ

ವಿಜಯಪುರ, ಏ.16: ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಏಪ್ರಿಲ್ 15ರ ಶನಿವಾರÀದಂದು ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 06 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದ್ದಾರೆ.

28-ಬಸವನಬಾಗೇವಾಡಿ ಮತಕ್ಷೇತ್ರದಿಂದ 01, 29-ಬಬಲೇಶ್ವರ ಮತಕ್ಷೇತ್ರದಿಂದ 02, 30-ಬಿಜಾಪುರ ನಗರ ಮತಕ್ಷೇತ್ರದಿಂದ 02, 32-ಇಂಡಿ ಮತಕ್ಷೇತ್ರದಿಂದ 01, ನಾಮಪತ್ರಗಳು ಸೇರಿದಂತೆ ಒಟ್ಟು 06 ನಾಮಪತ್ರಗಳು ಇಂದು ಸಲ್ಲಿಕೆಯಾಗಿವೆ.

26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರ, 27-ದೇವರಹಿಪ್ಪರಗಿ ಮತಕ್ಷೇತ್ರ ಹಾಗೂ 31-ನಾಗಠಾಣ (ಎಸ್‍ಸಿ) ಮತಕ್ಷೇತ್ರ ಹಾಗೂ 33-ಸಿಂದಗಿ ಮತಕ್ಷೇತ್ರದಿಂದ ಇಂದು ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ.

ಬಸವನಬಾಗೇವಾಡಿ ಮತಕ್ಷೇತ್ರದಿಂದ ಪ್ರವೀಣಕುಮಾರ ರಾಯಗೊಂಡ (ಕರ್ನಾಟಕ ರಾಷ್ಟ್ರ ಸಮಿತಿ), ಬಬಲೇಶ್ವರ ಮತಕ್ಷೇತ್ರದಿಂದ ಬೀರಪ್ಪ ಸೊಡ್ಡಿ (ಪಕ್ಷೇತರ) ಹಾಗೂ ಸಾಬಣ್ಣ ಗಂಜಿ (ಪ್ರಜಾಕಿಯಾ ಪಕ್ಷ) ದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಬಿಜಾಪುರ ನಗರ ಮತಕ್ಷೇತ್ರದಿಂದ ರಾಕೇಶ ಇಂಗಳಗಿ (ಕರ್ನಾಟಕ ರಾಷ್ಟ್ರ ಸಮಿತಿ) ಹಾಗೂ ಬಸನಗೌಡ ಪಾಟೀಲ (ಯತ್ನಾಳ) ಅವರು (ಭಾರತೀಯ ಜನತಾ ಪಾರ್ಟಿ) ಯಿಂದ ಮತ್ತು ಇಂಡಿ ಮತಕ್ಷೇತ್ರದಿಂದ ಕಾಸುಗೌಡ ಬಿರಾದಾರ (ಭಾರತೀಯ ಜನತಾ ಪಾರ್ಟಿ) ಅವರು ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟಾರೆ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೊದಲನೇ ದಿನ 17 ಹಾಗೂ ಎರಡನೇ ದಿನ 06 ಸೇರಿದಂತೆ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿವೆ.