ನಾಮಪತ್ರ ಸಲ್ಲಿಕೆ ಕೊನೆಯ ದಿನದಂದು20 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆ

ಕಲಬುರಗಿ:ಮೇ.16:ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ 2024ರ ಜೂನ್ 3ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಗುರುವಾರ 20 ಅಭ್ಯರ್ಥಿಗಳಿಂದ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ ಅವರು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ವಿವರ ಇಂತಿವೆ. ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಅಮರನಾಥ ನೀಲಕಂಠ ಪಾಟೀಲ ಅವರು 4 ನಾಮಪತ್ರ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಂದ್ರಶೇಖರ ಬಸವರಾಜ ಅವರು 1 ನಾಮಪತ್ರ ಸಲ್ಲಿಸಿದ್ದಾರೆ.

ಉಳಿದಂತೆ ಸ್ವತಂತ್ರ ಅಭ್ಯರ್ಥಿಗಳಾಗಿ ತೇಜಸ್‍ಕುಮಾರ್ ತಂದೆ ರಾಮಾಂಜನೇಯಲು ಎಂ. ಮತ್ತು ಸುರೇಶ ತಂದೆ ರಾಜಶೇಖರಪ್ಪ ತಲಾ 2 ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿಯಾಗಿ ಸ್ವತಂತ್ರ ಅಭ್ಯರ್ಥಿಗಳಾಗಿ ಪ್ರಭು ನಾರಾಯಣ, ಬಸವರಾಜ ದುರ್ಗಪ್ಪ ಮ್ಯಾಗಲಮನಿ, ಮಹ್ಮದ್ ಹುಸೇನ್ ತಂದೆ ಮಹ್ಮದ್ ಅಲಿ, ಎನ್. ಪ್ರತಾಪ ರೆಡ್ಡಿ, ರಾಜು ತಂದೆ ದೇವಪ್ಪ, ರಿಯಾಜ್ ಅಹ್ಮದ್ ತಂದೆ ನಬಿಸಾಬ್, ಸತೀಶಕುಮಾರ ತಂದೆ ರಾಮಮೂರ್ತಿ, ಸಾಯಿನಾಥ ತಂದೆ ಸಂಜೀವಕುಮಾರ್ ನಾಗೇಶ್ವರ, ಸುನೀಲಕುಮಾರ ತಂದೆ ಹೈದ್ರÀಪ್ಪ, ಅನಿಮೇಶ ತಂದೆ ಮಹಾರುದ್ರಪ್ಪ, ವಿಲಾಸ್ ತಂದೆ ಮಾರುತಿ, ಶರಣಬಸಪ್ಪ ತಂದೆ ಶ್ರೀಮಂತಪ್ಪ, ಸುರೇಶ ತಂದೆ ದವಿದಪ್ಪ, ಸತೀಶಕುಮಾರ ತಂದೆ ಅಮೃತ ಹಾಗೂ ಶಿವಕುಮಾರ ತಂದೆ ಜಂಬುನಾಥ ಸ್ವಾಮಿ ಅವರುಗಳು ತಲಾ 1 ನಾಮಪತ್ರ ಸಲ್ಲಿಸಿದ್ದಾರೆ.

   ಇದರಿಂದ ಇಲ್ಲಿಯವರೆಗೆ ಒಟ್ಟಾರೆ 29 ಅಭ್ಯರ್ಥಿಗಳಿಂದ 41 ನಾಮಪತ್ರಗಳು ಸಲ್ಲಿಸಿದಂತಾಗಿದೆ. ಮೇ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನ ಮೇ 20 ಇರುತ್ತದೆ.