ನಾಮಪತ್ರ ವಾಪಸ್ಸು: ಬಿ. ಜೆ. ಪಿ. ಅಭ್ಯರ್ಥಿ ಗೆ ನನ್ನ ಬೆಂಬಲ:ಮಹೇಂದ್ರಸಿಂಗ್ ನಾಯಕ

ವಿಜಯಪುರ,ಎ.24:ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿಯ ಟಿಕೆಟ್ ಬಯಸಿ ನಾಮಪತ್ರ ಸಲ್ಲಿಸಿದ್ದೆ ಆದರೆ ಪಕ್ಷದ ಒಂದಿಬ್ಬರು ನಾಯಕರ ಪ್ರಭಾವದಿಂದ ನನಗೆ ಟೀಕೆಟ ಸಿಗಲಿಲ್ಲ ಆದರೂ ಪಕ್ಷದ ಹಿರಿಯ ನಾಯಕರ ಸಲಹೆಯಂತೆ ಇಂದು ನಾನು ನಾಮಪತ್ರ ವಾಪಸ್ಸು ಪಡೆದು ಪಕ್ಷದ ಅಭ್ಯರ್ಥಿ ಸಂಜೀವ. ಐಹೊಳಿಗೆ ಬೆಂಬಲಿಸುವದಾಗಿ ಮಹೇಂದ್ರಸಿಂಗ್ ನಾಯಕ ಹೇಳಿದರು.
ಪತ್ರಿಕಾಗೊಷ್ಠಿಯಲ್ಲಿಂದು ಮಾತನಾಡಿ ನನಗೆ ಟಿಕೆಟ ಸಿಗುತ್ತದೆ ಎಂಬ ಭರವಸೆಯು ಇತ್ತು ಆದರೆ ಕಾರಣಾಂತರಗಳಿಂದ ನನಗೆ
ಟಿಕೆಟ್ ಸಿಗಲಿಲ್ಲ, ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡಿದ ನಂತರ ನಡೆದ ಕೆಲವು ಅನಿರೀಕ್ಷಿತ
ಬೆಳವಣಿಗೆಗಳ ಕಾರಣದಿಂದ ನಮ್ಮ ಪಕ್ಷದ ಹಿರಿಯರು ಕರೆ ಮಾಡಿ ನನಗೂ ನಾಮಪತ್ರ ಸಲ್ಲಿಸುವಂತ
ಸೂಚಿಸಿದರು. ಸಿ ಫಾರ್ಮ್ ಸಿಗಬಹುದು ಎಂಬ ಆಶೆಯಲ್ಲಿ ವರಿಷ್ಠರ ಸೂಚನೆಯಂತೆ ನಾನು ದಿನಾಂಕ
20 ರಂದು ನಾಮಪತ್ರ ಸಲ್ಲಿಸಿದ್ದೆ, ಆದರೆ ನಿನ್ನ 23 ರಂದು ಪಕ್ಷದ ವರಿಷ್ಠರು ನನಗೆ ಕರೆ
ಮಾಡಿ ನಾಮಪತ್ರವನ್ನ ಹಿಂತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ, ಪಕ್ಷದ ವರಿಷ್ಠರ ಅಣತಿಯಂತೆ ನಾನು
ಇವತ್ತು ನಾನು ಸಲ್ಲಿಸಿದ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳತ್ತಿದ್ದನೆ,
ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ
ಇಟ್ಟು ಕೊನೆಗಳಿಗೆವರೆಗೂ ನನ್ನ ಹೆಸರನ್ನೂ ಪ್ರಸ್ತಾಪಿಸಿತ್ತು. ಪಕ್ಷ ನಮಗೆ ಯಾವುದೇ ರೀತಿಯ ಅನ್ಯಾಯ
ಮಾಡಿಲ್ಲ. ಪಕ್ಷದಲ್ಲಿರುವ ಕೆಲ ನಾಯಕರುಗಳಿಂದ ನಮಗೆ ಅನ್ಯಾಯವಾಗಿದೆ. ಪಕ್ಷದ ವರಿಷ್ಠರ ಈ ಪ್ರೀತಿ
ವಿಶ್ವಾಸಕ್ಕೆ ಹೃದಾಯಾಳದಿಂದ ಕೃತಜ್ಞತೆ ಸಲ್ಲಿಸುತ್ತಾ ಭಾರತೀಯ ಜನತಾ ಪಕ್ಷದ ಒಬ್ಬ ಸಾಮಾನ್ಯ
ಕಾರ್ಯಕರ್ತನಾಗಿ ಪಕ್ಷದ ಕೆಲಸ ಮಾಡುತ್ತನೆ, ವಿಜಯಪುರ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ಹೋಗಿ ಕೆಲಸ
ಮಾಡಲು ನಾನು ಸಿದ್ಧನಿದ್ದೇನೆ, ಆದ್ದರಿಂದ ನಾಗರಾಣ ಮತಕ್ಷೇತ್ರದ ಪಕ್ಷದ ಅಭ್ಯರ್ಥಿಯನ್ನು ಹೆಚ್ಚಿನ ಅಂತರದ
ಮತಗಳಿಂದ ಗೆಲ್ಲಿಸಲು ನಾನು ಮತ್ತು ನನ್ನ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡುತ್ತವೆ. ಒಟ್ಟಾರೆ
ಇಲ್ಲಿಯವರೆಗೆ ನನ್ನ ಜೊತೆಯಲ್ಲಿದ್ದು ನನ್ನನ್ನು ಪ್ರೋತ್ಸಾಹಿಸಿ ಬೆಂಬಲಿಸಿದ ಪಕ್ಷದ ವರಿಷ್ಠರು, ಜಿಲ್ಲಾ
ನಾಯಕರಗಳು ಹಾಗೂ ನನ್ನೆಲ್ಲಾ ಆತ್ಮೀಯ ಕಾರ್ಯಕರ್ತರಿಗೂ ಧನ್ಯವಾದಗಳನ್ನ ತಿಳಿಸಿದರು.