ನಾಮಪತ್ರ ಪರಿಶೀಲನೆ :೧೭ ಕ್ರಮಬದ್ದ ೧ ತಿರಸ್ಕೃತ

ರಾಯಚೂರು,ಏ.೨೧- ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಲ್ಲಿಕೆಯಾದ ನಾಮಪತ್ರ ಪರಿಶೀಲನೆ ಇಂದು ನಡೆಯಿತು. ಗ್ರಾಮಾಂತರ ಕ್ಷೇತ್ರಕ್ಕೆ ಸಲ್ಲಿಕೆಯಾಗಿದ್ದ ಒಟ್ಟು ೧೮ ನಾಮಪತ್ರಗಳಲ್ಲಿ ೧ತಿರಸ್ಕೃತವಾಗಿದೆ, ೧೭ ಕ್ರಮಬದ್ದವಾಗಿದೆ.
ಒಟ್ಟು ೯ ಅಭ್ಯರ್ಥಿಗಳು ೧೮ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬ ಬಿಎಸ್ಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತವಾಗಿದೆ ಎಂದು ರಾಯಚೂರು ಗ್ರಾಮಾಂತರ ಚುನಾವಣಾ ಅಧಿಕಾರಿ ಶಶಿಕಾಂತ್ ಶಿವಪೂರೆ ಅವರು ತಿಳಿಸಿದ್ದಾರೆ. ಏಪ್ರಿಲ್ ೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ ೧೦ ರಂದು ಮತದಾನ ನಡೆಯಲಿದೆ.