ನಾಮನಿರ್ದೇಶನ ಸದಸ್ಯ ಲಕ್ಷ್ಮಣ ಹುಲಿಗಾರ್‌ಗೆ ಸನ್ಮಾನ

ರಾಯಚೂರು, ಮೇ.೨೮- ನಗರ ಸಭೆಗೆ ನೂತನವಾಗಿ ನಾಮ ನಿರ್ದೇಶನಗೊಂಡ ಲಕ್ಷ್ಮಣ ಹುಲಿಗಾರ ಅವರನ್ನು ಎಲ್‌ಬಿಎಸ್ ನಗರದ ಶ್ರೀ ಸೊಮನಾಥ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ವಾರ್ಡ್ ನಂ ೨೯ ಎಲ್‌ಬಿಎಸ್ ನಗರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭೆ ನಾಮಿನೇಟೆಡ್ ಸದಸ್ಯರಾದ ಲಕ್ಷ್ಮಣ ಹುಲಿಗಾರ, ಹತ್ತು ವರ್ಷಗಳಿಂದ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದ್ದು, ೨೮, ೨೯ ವಾರ್ಡನಲ್ಲಿ ೨ ಬಾರಿ ಸ್ಪರ್ಧೆ ಮಾಡಿ ಪರಾಜಿತ ಗೊಂಡಿzನೆ . ಆದರೆ ನನ್ನ ಸಾಮಾಜಿಕ ಸೇವೆ ನಿಲ್ಲಿಸಲಿಲ್ಲ. ಜನರು ನನ್ನ ಸೇವೆಗಳನ್ನು ಗುರುತಿಸಲಿಲ್ಲ ಆದರೂ ಈ ವಾರ್ಡಗಳಲ್ಲಿ ಸದಾ ಸೇವೆ ಸಲ್ಲಿಸುತ್ತಾ ಬಂದಿದ್ದು, ಹಲವಾರು ಜನಪರ ಕಾರ್ಯಗಳನ್ನು ಮಾಡಿzನೆ. ನಗರ ಶಾಸಕರಾದ ಡಾ. ಶಿವರಾಜ ಪಾಟೀಲರು ನನ್ನನ್ನು ಗುರುತಿಸಿ ಈ ಸ್ಥಾನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು. ಬಿಜೆಪಿ ಯುವ ಮುಖಂಡ ಕೆ. ಸುರೇಶ ಸಾಹುಕಾರ ಮಾತನಾಡಿ, ಲಕ್ಷ್ಮಣ ಹುಲಿಗಾರ ಅವರು ಈ ವಾರ್ಡನ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ. ವಾರ್ಡನಲ್ಲಿ ೨೪ ವಿದ್ಯುತ್ ಕಂಬಗಳನ್ನು ಹಾಕಿಸಿದ್ದಾರೆ. ಅಲ್ಲದೇ ಶ್ರೀ ಸೋಮನಾಥ ಈಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಾಸಕರ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚೆಂಬರ್ ಮತ್ತು ವಾರ್ಡನ ಹಕ್ಕು ಪತ್ರ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ಮಾಡುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಇಡಪನೂರು, ಪ್ರಭುರಾಜ ಸ್ವಾಮಿ ವೆಂಕಟ್‌ರಾವ್, ವೀರನಗೌಡ , ಈರಣ್ಣ, ಹನುಮಂತರಾಯ, ಬೋಳಬಂಡಿ, ಗಂಗಾಧರ ಸ್ವಾಮಿ , ಮಲ್ಲಿಕಾರ್ಜುನಗೌಡ, ಚಂದ್ರಶೇಖರ್, ಆಂಜಿನೇಯ್ಯ, ದೇವರೆಡ್ಡಿ ರವಿ, ಗೌರಮ್ಮ, ಮಾಧವಿ, ಶಿವರೆಡ್ಡಿ, ಸುನೀಲ್‌ಗೌಡ , ಶರಣಪ್ಪ ಗೌಡ ,ಯುವರಾಜ್, ಬಿ.ಕೆ. ವೆಂಕಟೇಶ, ಆಕಾಶ್, ಸೇರಿದಂತೆ ಬಡಾವಣೆಯ ಜನರು ಉಪಸ್ಥಿತರಿದ್ದರು.