ನಾಮದೇವ ಸಿಂಪಿ ಜಾತಿಗೆ ಮೀಸಲಾತಿ ಒದಗಿಸಲು ಆಗ್ರಹ


ಧಾರವಾಡ.ಎ.20: ನಾಮದೇವ ಸಿಂಪಿ ಜಾತಿಯನ್ನು ಪ್ರತ್ಯೇಕ ಪ್ರವರ್ಗವನ್ನಾಗಿ ಗುರುತಿಸಿ 5% ರಷ್ಟು ಮೀಸಲಾತಿಯನ್ನು ಕಲ್ಪಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿ ನಾಮದೇವ ಸಿಂಪಿ ಸಮಾಜಬಾಂಧವರು ಇಂದು ಅಪರ್ ಜಿ ಲ್ಲಾಧಿಕಾರಿ ಶಿವಾನಂದ ಕರಾಳೆ ಅವರಿಗೆ ಮನವಿ ಅರ್ಪಿಸಿದರು.
ನಾಮದೇವ ಸಿಂಪಿ ಜಾತಿಯನ್ನು ಪ್ರವರ್ಗ-I ರಲ್ಲಿ ಪರಿಗಣಿಸಿ/ಸೇರ್ಪಡಿಸಿ ಈಗ ಪ್ರವಗ9 1 ಕ್ಕೆನಿಗದಿಪಡಿಸಿದ 4% ಮೀಸಲಾತಿ ಮಿತಿಯನ್ನು 8% ಕ್ಕೆ ಹೆಚ್ಚಿಸಬೇಕು.ಕರ್ನಾಟಕದ ಎಲ್ಲ ಸಮುದಾಯದಲ್ಲಿ ತೀರಾ ಹಿಂದುಳಿದ ಹಾಗೂ ಎಲ್ಲಾ ರಂಗಗಳಲ್ಲಿ ಅಬಿವೃಧ್ಧಿ ಹೊಂದದೇ ಹಿಂದುಳಿದಿರುವ “ನಾಮದೇವ ಸಿಂಪಿ” ಸಮಾಜದ ಅಭಿವೃಧ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರವೊಂದನ್ನು ರಚಿಸಿ ಪ್ರತಿ ವರ್ಷ ಸಾಕಷ್ಟು ಪ್ರಮಾಣದಲ್ಲಿ ಅನುದಾನವನ್ನು ಮೀಸಲಿಡುವಂತೆ ಆಗ್ರಹಿಸಲಾಯಿತು.
ಒಂದು ವೇಳೆ ಪ್ರವರ್ಗ-I ರಲ್ಲಿ ಪರಿಗಣಿಸಲಾಗದಿದ್ದಲ್ಲಿಪ್ರವರ್ಗ-II ಎ ದಲ್ಲಿಯೇ ಮುಂದುವರೆಸಿದರೆ ನಾಮದೇವ ಸಿಂಪಿ ¸ಸಮಾಜಕ್ಕೆ ಯೋಗ್ಯ ಒಳ ಮೀಸಲಾತಿ ಒದಗಿಸಿಕೊಡಬೇಕು ಎಂದು ಆಗ್ರಹಿಸಲಾಯಿತು. ಬಡತನದ ಕಾರಣದಿಂದ ನಮ್ಮ ಸಮುದಾಯದಲ್ಲಿ ಅಕ್ಷರಸ್ಥರ ಸಂಖ್ಯೆ ತೀರಾ ಕಡಿಮೆಯಿದೆ. ಅಲ್ಲದೇ ಇಲ್ಲಿಯವರೆಗೆ ನಮ್ಮಸಮುದಾಯದ ಯಾರೊಬ್ಬರೂಶಾಸಕ, ಸಂಸದ, ಸಚಿವರು ಇರುವುದಿಲ್ಲ. ಹೀಗಾಗಿ ¸ಸರಕಾರದಲ್ಲಿ ನಮ್ಮಸಮಾಜದಪ್ರತಿನಿಧಿತ್ವ ಇಲ್ಲದಿರುವದರಿಂದ ನಾವು ¸ ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅಂದರೆ ಯಾವುದೇ ಕೋನದಿಂದ ಕೂಲಂಕುಶವಾಗಿ ಪರಿಸ್ಥಿತಿಯನ್ನು ಪರಾಮರ್ಶಿಸಿ ನೋಡಲಾಗಿ ನಮ್ಮ ಸಮುದಾಯವು ತೀರಾ ತೀರಾ ಅಲ್ಪ ಸಂಖ್ಯಾತ/ ಕೆಳಗಿನ ಸಮುದಾಯ ಅಂತಾ ಮೇಲ್ನೋಟಕ್ಕೆ ನಿರ್ಧರಿಸಬಹುದಾಗಿದೆ ಎಂದು ನಾಮದೇವ ಸಿಂಪಿ ಸಮಾಜದ ಮುಖಂಡರು ತಿಳಿಸಿದರು.
ಪ್ರತಿಭಟನೆಯಲ್ಲಿ ಗೌ ಅಧ್ಯಕ್ಷ ನಾರಾಯಣ ವಿರೂಪಾಕ್ಷಪ್ಪ ಕೋಪಡೆ9,ಅಧ್ಯಕ್ಷ ಮುರಳೀಧರ ಹಾಸಲಕರ ,ಧೂಂಡಿಬಾ ಕ್ಷೀರಸಾಗರ, ಕ್ರಷ್ಣಾ ಚಿಕ್ಕೂಡೆ9, ಲಕ್ಷ್ಮಣ ಕೋಳೆಕರ,ಗುಂಡು ಭಿಂಗೆ,ರಮೇಶ ಘಾನವಟಕರ,ಶಂಕರ ವಂಡಕರ, ರುಕ್ಕ್ಮೀಣಿ ಮಹಿಳಾ ಮಂಡಳಿಯ ಅದ್ಯಕ್ಷ ಸುರೇಖಾ ಚಿಕ್ಕೂಡೆ9,ಕಾಯ9ದಶಿ9 ರಶ್ಮಿ ಪಿಸೆ, ಅಶೋಕ ಭೂಂಗಾಳೆ,ಆನಂದ ರೇಣಕೆ ,ರಮೇಶ ಸದರೆ,ವಿವೇಕ್ ಖಟಾವಕರ,ಮುಂತಾದವರು ಉಪಸ್ಥಿತರಿದ್ದರು.