ನಾಪತ್ತೆ ಪ್ರಕರಣ ಕೊಲೆಯಲ್ಲಿ ಅಂತ್ಯ ; 48 ಗಂಟೆಯಲ್ಲಿ ಆರೋಪಿಗಳ ಬಂಧಿಸಿದ ಪೋಲಿಸರು

ಆಳಂದ:ಎ.3:ಆಸ್ತಿ ವಿವಾದ ಹಿನ್ನಲೇ ಯುವಕನ ಕೋಲೆಗೈದು ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಉದ್ಧೇಶದಿಂದ ಮೃತ ದೇಹವನ್ನು ಚೀಲದೊಳಗೆ ಕಟ್ಟಿ, ಮಹಾರಾಷ್ಟರದ ಅಕ್ಕಲಕೋಟ ಪಟ್ಟಣದ ಭರಮಶೆಟ್ಟಿ ತೋಟದ ಬಾವಿಯೋಳಗೆ ಎಸುದಿರುವ ಪ್ರಕರಣಕ್ಕೆ ಸಂಭಂದಿಸಿದಂತೆ ಐದು ಜನ ಅರೋಪಿಗಳನ್ನು ಬಂಧಿಸುವಲ್ಲಿ ಮಾದನಹಿಪ್ಪರಗಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರಕರಣದ ವಿವರ :

ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದ ಹಿರೋಳಿ ಗ್ರಾಮದ ನಾಗಪ್ಪ ವಾಡೇದ (40) ಎಂಬ ವ್ಯಕ್ತಿ ಕಾಣೆ ಯಾಗಿರುವ ಬಗ್ಗೆ ಆತನ ಸಂಬಂಧಿಕರು ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೋಂಡರು. ಮೋಬೈಲ ಕಾಲ್ ಆಧಾರದ ಮೇಲೆ ತನಿಖೆ ಕೈಗೊಂಡಿರುವ ಪೊಲೀಸರು ಅಕ್ಕಲಕೋಟ ಪಟ್ಟಣದ ಭರಮಶೆಟ್ಟಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಿರೋಳಿ ಗ್ರಾಮದ ಮಲ್ಲಿನಾಥ ವಾಡೇದ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ಸಂಪೂರ್ಣ ಪ್ರಕರಣ ಬೆಳಕಿಗೆ ಬಂದಿದೆ. ಆಸ್ತಿ ವಿವಾಧ ಹಿನ್ನಲೇ ನಾಗಪ್ಪ ಮತ್ತು ಮಲ್ಲಿನಾಥ ನಡುವೇ ವೈಮನಸ್ಸು ಬಂದಿತ್ತು. ಹೇಗಾದರೂ ಮಾಡಿ ನಾಗಪ್ಪನನ್ನು ಕೋಲೆ ಮಾಡಲು ಮಲ್ಲಿನಾಥ ಸಂಚು ಹಾಕಿದನು. ಕಳೆದ 6 ತಿಂಗಳ ಹಿಂದೆ ನಾಗಪ್ಪನ ಪತ್ನಿ ಮೃತಪ್ಪಟ್ಟಿದಳು. ಆದರೆ ನಾಗಪ್ಪನಿಗೆ ಇನ್ನೋಂದು ಮದುವೆ ಮಾಡಿಕೊಳ್ಳಲು ಗ್ರಾಮದ ಗಾಂಧಾರಿ ತೋರಣಗಿ ಎಂಬ ಮಹಿಳೆ ಮೇಲಿಂದ ಮೇಲೆ ಒತ್ತಾಯಿಸುತ್ತಿದ್ದಳು. ಅಕ್ಕಲಕೋಟದಲ್ಲಿ ಕನ್ನೆ ಇದೆ. ಅದನ್ನು ನೋಡಿಕೊಂಡು ಬರುವುದಾಗಿ ತಿಳಿಸಿದಳು. ಮದುವೆ ಆಸೆಯಿಂದ ನಾಗಪ್ಪ ಅಕ್ಕಲಕೋಟಕ್ಕೆ ಬರಲು ಒಪ್ಪಿದನು. ಬಸವರಾಜ ವಾಡೆದ ಮತ್ತು ಗಾಂಧಾರಿ ತೋರಣಗಿ ಇವರು ನಾಗಪ್ಪನನ್ನು ಅಕ್ಕಲಕೋಟಕ್ಕೆ ಕರೆ ತಂದಿದ್ದಾರೆ. ಅಕ್ಕಲಕೋಟ ಪಟ್ಟಣದ ಭರಮಶೆಟ್ಟಿ ತೋಟದಲ್ಲಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಾಗಪನನ್ನು ಕರೆ ತಂದಿದ್ದಾರೆ. ಸುಮಾರು 6 ಜನರು ಕೂಡಿ ನಾಗಪ್ಪನನ್ನು ಕೋಲೆಗೈದು ಸಾಕ್ಷ್ಯಾಧಾರಗಳನ್ನು ನಾಶ ಪಡಿಸುವ ಉದ್ಧೇಶದಿಂದ ಮೃತ ದೇಹವನ್ನು ಚೀಲದೊಳಗೆ ಕಟ್ಟಿ, ಅಕ್ಕಲಕೋಟ ಪಟ್ಟಣದ ಭರಮಶೆಟ್ಟಿ ತೋಟದ ಬಾವಿಯೋಳಗೆ ಎಸುದಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಆಳಂದ ಪೊಲೀಸ್ ಠಾಣೆಯ ಪಿಎಸ್‍ಐ ಮಹಾಂತೇಶ ಪಾಟೀಲ ಮತ್ತು ಮಾದನ ಹಿಪ್ಪರಗಾದ ಪಿಎಸ್‍ಐ ಇಂದುಮತಿ ಜಾಧವ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕೊಲೆ ಪ್ರಕರಣವನ್ನು ಬೇಧಿಸಿದ್ದಾರೆ.

ಬಂಧಿತ ಅರೋಪಿಗಳು :

ಪ್ರಕರಣಕ್ಕೆ ಸಂಬಂಧಿಸಿದ ಅರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಕೈಗೊಂಡು ವಿಚಾರಣೆ ನಡೆಸಿದರು. ತನಿಖೆಯಲ್ಲಿ ಅರೋಪಿಗಳು ಕೋಲೆ ಪ್ರಕರಣವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ಅರೋಪಿಗಳಾ 1) ಮಲ್ಲಿನಾಥ ಗುರುಸಿದ್ದ 2)ಬಸವರಾಜ ರೇವಣಸಿದ್ದಪ್ಪ 3) ಹಣಮಂತ ಫಕೀರಪ್ಪ 4) ಗಾಂಧಾರಬಾಯಿ ಗಂಡ ಹಣಮಂತ ತೋರಣಗಿ 5) ನಾಗಮ್ಮ ಗಂಡ ಮಲ್ಲಿನಾಥ ಬಂಧಿತ ಆರೋಪಿಗಳಾಗಿದ್ದಾರೆ ಇವರೆಲ್ಲÁ ಆಳಂದ ತಾಲೂಕಿನ ಹಿರೋಳಿ ಗ್ರಾಮದವರಾಗಿದ್ದಾರೆ. ಜಿಲ್ಲಾ ಪೆÇೀಲಿಸ್ ಅಧೀಕ್ಷಕರಾದ ಡಾ. ಸಿಮೀ ಮೇರಿಯಮ್ ಜಾರ್ಜ ಹಾಗೂ ಹೆಚ್ಚುವರಿ ಪೆÇಲೀಸ್ ಅಧಿಕ್ಷಕರಾದ ಪ್ರಸನ್ನ ದೇಸಾಯಿ ರವರ ಮಾರ್ಗದರ್ಶನದಲ್ಲಿ ಮತ್ತು ಪೆÇೀಲಿಸ್ ಉಪಾಧೀಕ್ಷಕರಾದ ಮಲ್ಲಿಕಾರ್ಜುನ ಸಾಲಿ ಇವರ ನೇತೃತ್ವದಲ್ಲಿ ಮಂಜುನಾಥ ಎಸ್ ಸಿ.ಪಿ.ಐ ಮಾದನಹಿಪ್ಪರಗಾ ಪಿ.ಎಸ.ಐ ಇಂದುಮತಿ ಹಾಗೂ ಸಿಬ್ಬಂದಿ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.