ಲಂಡನ್, ಜೂ.೨೮- ಕಳೆದ ಜನವರಿಯಿಂದ ಕ್ಯಾಲಿಫೋರ್ನಿಯಾದ ಪರ್ವತ ಪ್ರದೇಶದಿಂದ ನಾಪತ್ತೆಯಾಗಿದ್ದ ಪ್ರಖ್ಯಾತ ಬ್ರಿಟಿಷ್ ನಟ ಜೂಲಿಯನ್ ಸ್ಯಾಂಡ್ಸ್ (೬೫) ಅವರು ಸಾವು ಇದೀಗ ಖಚಿತಗೊಂಡಿದೆ. ಇದೇ ಪರಿಸರದಲ್ಲಿ ಪತ್ತೆಯಾಗಿರುವ ಮೃತದೇಹವು ಸ್ಯಾಂಡ್ಸ್ ಅವರದ್ದು ಎಂದು ದೃಢಪಟ್ಟಿದೆ.
ಕಳೆದ ಜನವರಿ ತಿಂಗಳ ೧೩ರಂದು ಕ್ಯಾಲಿಫೋರ್ನಿಯಾದ ಪ್ರಸಿದ್ದ ಪರ್ವತ ಪ್ರದೇಶಗಳಿಗೆ ಸ್ಯಾಂಡ್ಸ್ ಅವರು ಕಾಲ್ನಡಿಗೆ ಯಾನಕ್ಕೆ ತೆರಳಿ, ಬಳಿಕ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಇಲ್ಲಿನ ಸ್ಯಾನ್ ಗೇಬ್ರಿಯಲ್ ಪರ್ವತಗಳ ಬಾಲ್ಡಿ ಬೌಲ್ ಪ್ರದೇಶದಲ್ಲಿ ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಸ್ಯಾಂಡ್ಸ್ ಕಣ್ಮರೆಯಾಗಿದ್ದರು. ಅದೂ ಅಲ್ಲದೆ
ಕ್ಯಾಲಿಫೋರ್ನಿಯಾದ ಮಾರಣಾಂತಿಕ ಚಂಡಮಾರುತಗಳ ಜೊತೆಗೆ ಹಿಮಾವೃತ ಪರಿಸ್ಥಿತಿಗಳು ಮತ್ತು ಹಿಮಪಾತದ ಸಾಧ್ಯತೆಯಿಂದ ಜರ್ಜರಿತಗೊಂಡಿದ್ದರಿಂದ ವಿಮಾನ ಮತ್ತು ನೆಲದ ಮೂಲಕ ಹುಡುಕಾಟ ಪ್ರಕ್ರಿಯೆಗಳಿಗೆ ಅಡ್ಡಿಯಾಗಿತ್ತು. ಆದರೆ ಇದೀಗ ಇಲ್ಲಿ ಕಾಲ್ನಡಿಗೆ ಯಾನಕ್ಕೆ ತೆರಳಿದ್ದ ಪ್ರವಾಸಿಗರು ಮೃತದೇಹವೊಂದನ್ನು ಪತ್ತೆಹಚ್ಚಿದ್ದು, ಅದೀಗ ಸ್ಯಾಂಡ್ಸ್ ಅವರದ್ದೇ ಎಂಬುದು ಔಪಚಾರಿಕವಾಗಿ ತಿಳಿದು ಬಂದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇಲಾಖೆ, ಸಾವಿನ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಪರೀಕ್ಷಾ ಫಲಿತಾಂಶಗಳು ಬಾಕಿ ಉಳಿದಿವೆ. ಸ್ಯಾಂಡ್ಸ್ ಅನ್ನು ಪತ್ತೆಹಚ್ಚಲು ದಣಿವರಿಯಿಲ್ಲದೆ ಶ್ರಮಿಸಿದ ಎಲ್ಲಾ ಸ್ವಯಂಸೇವಕರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇವೆ ಎಂದು ತಿಳಿಸಿದೆ. ಇನ್ನು ಸ್ಯಾಂಡ್ಸ್ ಅವರು ಆಸ್ಕರ್-ವಿಜೇತ ಚಲನಚಿತ್ರ ?ಎ ರೂಮ್ ವಿತ್ ಎ ವ್ಯೂ? ಮತ್ತು ಟಿವಿ ನಾಟಕಗಳು ೨೪ ಮತ್ತು ಸ್ಮಾಲ್‌ವಿಲ್ಲೆಯಲ್ಲಿನ ಪಾತ್ರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು.