ನಾಪತ್ತೆಯಾಗಿದ್ದ ಅಕ್ಕ-ತಂಗಿ ಧರ್ಮಸ್ಥಳದಲ್ಲಿ ಪತ್ತೆ

ಬೆಂಗಳೂರು,ಜೂ.೧೯- ಚಾಕೊಲೇಟ್‌ಗೆ ಅಪ್ಪ ಹಣ ಕೊಡದಿದ್ದಕ್ಕೆ ಕೋಪಗೊಂಡು ನಾಪತ್ತೆಯಾಗಿದ್ದ ಕೋಣನಕುಂಟೆ ಸಹೋದರಿಯರು ಉಚಿತ ಸರ್ಕಾರಿ ಬಸ್ ಪ್ರಯಾಣದ ಲಾಭ ಪಡೆದು ಧರ್ಮಸ್ಥಳದಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಜೂ.೧೬ರಂದು ೯ ಮತ್ತು೧೦ನೇ ತರಗತಿಯಲ್ಲಿ ಓದುತ್ತಿದ್ದ ಅಕ್ಕ-ತಂಗಿ ನಾಪತ್ತೆಯಾಗಿದ್ದು,ಇಬ್ಬರು ಕಾಣದೆ ಇದ್ದಾಗ ಪೋಷಕರು ಗಾಬರಿಗೊಂಡು. ಮನೆಯ ಸುತ್ತಮುತ್ತ ಹುಡುಕಾಡಿ ಸ್ನೇಹಿತರು, ಪರಿಚಿತರ ಬಳಿ ವಿಚಾರಿಸಿದರೂ ಸುಳಿವು ಸಿಗಲಿಲ್ಲ ಇದರಿಂದ ಕಂಗಾಲಾದ ಪೋಷಕರು ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ನಾಪತ್ತೆ ದೂರು ದಾಖಲಿಸಿ ತನಿಖೆಗಿಳಿದ ಪೊಲೀಸರಿಗೆ ಹೆಣ್ಮಕ್ಕಳ ಸುಳಿವು ಕೊಟ್ಟಿದ್ದು ಉಚಿತ ಬಸ್ ಪ್ರಯಾಣ ( ಫ್ರೀ ಬಸ್ ಸರ್ವೀಸ್) ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಫ್ರೀ ಬಸ್‌ವೊಂದು ಹುಡುಗಿಯರ ಸುಳಿವು ನೀಡಿತ್ತು.
ಸುಳಿವು ಹಿಡಿದು ಹೋದ ಪೊಲೀಸರಿಗೆ ಕೋಣನಕುಂಟೆಯಲ್ಲಿ ನಾಪತ್ತೆಯಾದವರು ಧರ್ಮಸ್ಥಳದ ಮಂಜುನಾಥ್‌ನ ಸನ್ನಿಧಿಯಲ್ಲಿದ್ದರು.
ಕಾಣೆಯಾಗಿ ಎರಡು ದಿನದ ಬಳಿಕ ಪೊಲೀಸರ ಕೈಗೆ ಸಿಕ್ಕ ಸಹೋದಯರಿಂದ ಶಕ್ತಿ ಯೋಜನೆಯ ಫ್ರೀ ಬಸ್ ಸರ್ವೀಸ್ ರಿವೀಲ್ ಆಗಿದೆ. ಇಬ್ಬರು ಪುತ್ರಿಯರು ಚಾಕೊಲೇಟ್‌ಗೆ ಹಣ ಕೊಡುವಂತೆ ಕೇಳಿದ್ದರು. ಆದರೆ ಹಣ ಕೊಡದೆ ಅಪ್ಪ ರೇಗಾಡಿಬಿಟ್ಟರು ಎಂದು ತನಿಖೆಯಲ್ಲಿ ತಿಳಿಸಿದ್ದಾರೆ. ತಂದೆ ಹಣ ಕೊಡಲಿಲ್ಲ ಎಂದು ಕೋಪಗೊಂಡ ಅಕ್ಕ-ತಂಗಿ ಫ್ರೀ ಬಸ್ ಏರಿ ಧರ್ಮಸ್ಥಳಕ್ಕೆ ಪ್ರಯಾಣಿಸಿದ್ದಾರೆ. ಎರಡು ದಿನದ ಬಳಿಕ ನಿನ್ನೆ ಧರ್ಮಸ್ಥಳದಲ್ಲಿ ಸಹೋದರಿಯರು ಪತ್ತೆಯಾಗಿದ್ದು ಮಕ್ಕಳಿಬ್ಬರು ದೊರೆತಿದ್ದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.