ನಾನೆಂದೂ ನಿನ್ನ ಮರೆಯಲ್ಲಕೆ.ಆರ್.ಪಿ.ಗೆ ಮತದ ಭರವಸೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಾನೆಂದೂ ನಿನ್ನ ಮರೆಯಲ್ಲಮ್ಮ, ನಿನಗೆ ಓಟು ಹಾಕುವುದು ಖಚಿತ, ಎಷ್ಟೋ ಬಾರಿ ಓಟು ಹಾಕಿನಿ, ಯಾರೂ ನನ್ನ ಮನೆಗೆ ಬಂದು ಓಟು ಕೇಳಿದ್ದಿಲ್ಲ. ನಮ್ಮ ಕಾಟೆಗುಡ್ಡಕ್ಕೆ ಬಂದು ಓಟು ಕೇಳಿರುವ ನಿಮಗೆ ನನ್ನ ಓಟು ಗ್ಯಾರೆಂಟಿ ಎಂದು ಅಲ್ಲಿನ ವೃದ್ದೆಯೋರ್ವರು ಕೆ.ಆರ್.ಪಿ ಅಭ್ಯರ್ಥಿ ಲಕ್ಷ್ಮೀ ಅರುಣ ಅವರ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದರು.
ನಿನ್ನೆ ಸಂಜೆ ನಗರದ 15 ನೇ ವಾರ್ಡಿನ ಕಾಟೆಗುಡ್ಡ, ವಡ್ಡರಬಂಡೆ, ಇಲಾಹಿ ಸ್ಟ್ರೀಟ್.  ಕೆಸಿ ರಸ್ತೆಯಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಸಂದರ್ಭದಲ್ಲಿ ಇದು ನಡೆಯಿತು.
ವೃದ್ದೆಯಿಂದ ಆಶೀರ್ವಾದ ಪಡೆದ ಲಕ್ಷ್ಮೀ ಅವರು ನಿಮ್ಮಂತವರ ಆಶೀರ್ವಾದಿಂದ ನಾನು ಆಯ್ಕೆಯಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುದುಕರ ಸಂಬಳ ಹೆಚ್ಚು ಮಾಡಲಿದೆಂದು ಭರವಸೆ ನೀಡಿದರು.
ಜನಾರ್ಧನರೆಡ್ಡಿ ಅವರು ಸಚಿವರಾಗಿದ್ದಾಗ ಈ ಪ್ರದೇಶದ ಅಭಿವೃದ್ಧಿಗೆ ಕೈಗೊಂಡಿದ್ದನ್ನು ತಿಳಿಸಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ   ರೂಪ, ರಾಜೇಶ್ವರಿ, ಗೀತಾರಾಮ್, ಪುಷ್ಪಲತ, ರಾಮುಡು, ಇಮ್ರಾನ್, ಉಲ್ಲಾಸ್, ಶಂಕರ್, ಶರತ್, ರಾಮು, ಮದು, ಇಸಾಕ್, ಅಯಾಜ್ , ಶ್ರೀನಿವಾಸ,  ಸಶೀಲ, ಪದ್ಮ, ರೇಖಾ ಮೊದಲಾದವರು ಇದ್ದರು.