ನಾನೂ ಜೈಲಿಗೆ ಹೋಗಿದ್ದೆ: ಪ್ರಧಾನಿ ಮೋದಿ

ಢಾಕಾ.ಮಾ.26- ಬಾಂಗ್ಲಾದೇಶ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡುವ ಸಮಯದಲ್ಲಿ ಜೈಲಿಗೆ ಹೋಗುವ ಅವಕಾಶ ಒದಗಿ ಬಂದಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮ ನನಗೆ ಮತ್ತು ನನ್ನ ಸ್ನೇಹಿತರಿಗೆ ಮಹತ್ವದ್ದು ಭಾರತದಲ್ಲಿ ಸತ್ಯಾಗ್ರಹ ಮಾಡುವ ಸಮಯದಲ್ಲಿ ಜೈಲಿಗೆ ಹೋಗುವ ಅವಕಾಶ ಸಿಕ್ಕಿತು ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶದ 50 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟ ದಲ್ಲಿ ಸತ್ಯಾಗ್ರಹ ನಡೆದಿದ್ದೆ ಎಂದು ಹೇಳಿದ್ದಾರೆ.

ಢಾಕಾದ ರಾಷ್ಟ್ರೀಯ ಪೆರೇಡ್ ಮೈದಾನದಲ್ಲಿ ನಡೆದ ಬಾಂಗ್ಲಾದೇಶ ದ‌ 50 ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮಜೀಜ್ ಜಾಕೆಟ್ ಧರಿಸಿ ಬಾಂಗ್ಲಾದೇಶ ದ ಪಿತಾಮಹ ಶೇಖ್ ಮುಜಿಬೀರ್ ರೆಹಮಾನ್ ಅವರಿಗೆ ಗೌರವ ಸಲ್ಲಿಸಿದರು.

ಈ ವೇಳೆ ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನಿ ಶೇಖ್ ಹಸೀನಾ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಪ್ರದಾನಿ ಅವರು, ನನ್ನ ಜೀವನದಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮರೆಯಲಾರದ್ದು ,ಐವತ್ತನೆ ಸ್ವಾತಂತ್ರ್ಯ ದಿನಕ್ಕೆ ತಮಗೆ ಆಹ್ವಾನ ನೀಡಿರುವುದನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.

1971 ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತದ ಸೈನಿಕರ ಪಾತ್ರ ಮಹತ್ವದ್ದು ಅದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಂದು ಅವರು ತಿಳಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಸೈನಿಕರ ಹೋರಾಟವನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ ಎಂದು ಅವರು ಹೇಳಿದ್ದಾರೆ.