ನಾನು ಸದಾ ಕಾರ್ಯಕರ್ತರ ಜೋತೆಗಿರುತ್ತೇನೆ::ಎಸ್.ತಿಪ್ಪೇಸ್ವಾಮಿ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಮೇ.16: ನನ್ನ ಸೋಲು ಶಾಶ್ವತವಲ್ಲ, ಮುಂದಿನ ಐದು ವರ್ಷಗಳಲ್ಲಿ ಪಕ್ಷ ಬಲಪಡಿಸುತ್ತೇನೆ ಎಂದು ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ತಿಳಿಸಿದರು.
 ಅವರು ಇಂದು ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಸಿ ಮಾತನಾಡುತ್ತಾ, ನನ್ನ ಸೋಲು ಅನಿರೀಕ್ಷಿತವಾಗಿದೆ ನಮ್ಮ ಕ್ಷೇತ್ರದ ಮತದಾರರ ನನ್ನ ಕೈ ಬಿಡುವುದಿಲ್ಲ ಎಂದು ನಂಬಿದೆ ಆದರೆ ಕೆಲವು ಕುತಂತ್ರಿಗಳಿಂದ ಸೋಲ ಬೇಕಾಯಿತು. ನಾನು ಸದಾ ನಮ್ಮ ಬಿಜೆಪಿ ಜೊತೆ ಮತ್ತು ಬಿಜೆಪಿ ಕಾರ್ಯಕರ್ತರ ಜೊತೆ ಗಿರುತ್ತೇನೆ.
ಮುಂಬರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ  ಕ್ಷೇತ್ರದ   ಬಿಜೆಪಿ ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿ ಕೊಳ್ಳಲು ಶ್ರಮಿಸುತ್ತೆನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂ ಅಧ್ಯಕ್ಷ ರಾದ ಪಿ. ಎಂ. ಮಂಜುನಾಥ ,ರಾಮರಡ್ಡಿ   ಟಿ.ಟಿ.ರವಿಕುಮಾರ್ ಪಿ. ಲಕ್ಷ್ಮಣ, ಆರ್. ತಿಪ್ಪೇಸ್ವಾಮಿ ಹಾನಗಲ್, ಕಿರಣ್ ಗಾಯಕ್ವಾಡ್, ಪ್ರಭು ಇನ್ನು ಮುಂತಾದವರಿದ್ದರು.