ನಾನು ವೀಕ್ ಕ್ಯಾಂಡಿಡೇಟ್ ಅಲ್ಲ, ಸಮರ್ಥ ಅಭ್ಯರ್ಥಿ

ಸಂಜೆವಾಣಿ ವಾರ್ತೆ

ಶಿವಮೊಗ್ಗ, ಏ.16: ನಾನು ವೀಕ್ ಕ್ಯಾಂಡಿಡೇಟ್ ಅಲ್ಲ, ಸಮರ್ಥ ಅಭ್ಯರ್ಥಿ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಗೀತಾ ಶಿವರಾಜ್‌ಕುಮಾರ್ ಎದುರಾಳಿಗಳಿಗೆ ಉತ್ತರ ನೀಡಿದ್ದಾರೆ.ಶಿವಮೊಗ್ಗದಲ್ಲಿ  ಸೋಮವರ ನಾಪಮತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಎದುರಾಳಿ ಯಾರಾದರೂ ಇರಲಿ, ನಾನು ಚಿಂತೆ ಮಾಡುವುದಿಲ್ಲ್ಲ ನಾನು ವೀಕ್ ಅಭ್ಯರ್ಥಿ ಅಲ್ಲ.  ಸಮರ್ಥ ಅಭ್ಯರ್ಥಿಯಾಗಿದ್ದೇನೆ. ಈಶ್ವರಪ್ಪ ಹಾಗೂ ಬಿಜೆಪಿ ನಾಯಕರಿಗೆ  ಹೆದರಿಕೆ ಆಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಕ್ಷೇತ್ರದಲ್ಲಿ ಉತ್ತಮವಾದ ವಾತಾವರಣ ಇದೆ. ಮಹಿಳೆಯರು ಕಾಂಗ್ರೆಸ್ ಪರವಾಗಿದ್ದಾರೆ. ಮೋದಿ ಅಲೆ ಎಲ್ಲೂ ಕಾಣುತ್ತಿಲ್ಲ. ಬಿಜೆಪಿಯವರು ಬರೀ ಸುಳ್ಳುಗಳನ್ನು ಹೇಳುತ್ತಾರೆ. ಕಳೆದ ವಾರವಿಡಿ ತೀರ್ಥಹಳ್ಳಿ ಶಿವಮೊಗ್ಗ ಗ್ರಾಮಾಂತರ, ಬೈಂದೂರು ಎಲ್ಲೆಡೆ ಪ್ರಚಾರ ಮಾಡಲಾಗಿದೆ. ಒಳ್ಳೆಯ ರೆಸ್ಪಾನ್ಸ್ ಇದೆ. ಸರ್ಕಾರದ ಗ್ಯಾರಂಟಿಗಳು ವರ್ಕ್ ಔಟ್ ಆಗುತ್ತಿವೆ. ಬಗರ್‌ಹುಕುಂ ಹಕ್ಕು ಪತ್ರ ಸಮಸ್ಯೆ ನಿವಾರಣೆ ಮಾಡುತ್ತೇನೆ ಕೇಂದ್ರದ ಗಮಕ್ಕೂ ತರಲಾಗುವುದು ಎಂದು ತಿಳಿಸಿದ್ರು.  .ಈ ವೇಳೆ ಮಾತನಾಡಿದ ನಟ ಶಿವರಾಜಕುಮಾರ್, ನಮ್ಮ ಆತ್ಮ ಶುದ್ಧ್ದವಿರಬೇಕು. ಮಾತು ಕಡಿಮೆ ಇರಬೇಕು. ಅಂದಾಗ ಉತ್ತಮ ಕೆಲಸ ಮಾಡÀಲು ಸಾಧ್ಯ. ನಾವು ಹೆಚ್ಚಿನ ಮಾತನಾಡಲು ಹೋಗುವುದಿಲ್ಲ. ಕೆಲಸವೇ ನಮಗೆ ಪ್ರಧಾನ ಎಂದರು.ಮೆರವಣಿಗೆ:ಗೀತಾ ಶಿವರಾಜ್‌ಕುಮಾರ್ ನಾಮಪತ್ರ ಸಲ್ಲಿಕೆ ಮಾಡುತ್ತಿರುವಂತೆಯೇ ರಾಮಣ್ಣ ಶೆಟ್ಟಿ ಪಾರ್ಕ್ನಿಂದ ಮೆರವಣಿಗೆ ಸಹ ಆರಂಭವಾಗಿದೆ.   ಸೊರಬದಿಂದ ನೇರವಾಗಿ ಡಿಸಿ ಕಚೇರಿಗೆ ಬಂದ ಗೀತಾ  ತಮ್ಮ ಪತಿ ಶಿವರಾಜ್‌ಕುಮಾರ್ ಜೊತೆಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್,  ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ,  ಹಾಗೂ ಮುಖಂಡ ಸಿದ್ದಲಿಂಗಯ್ಯರವರಿದ್ದರುಮುಹೂರ್ತದ ಪ್ರಕಾರ ೧೦: ೩೦ಕ್ಕೆ ನಾಮಪತ್ರವನ್ನು ಅವರು  ಸಲ್ಲಿಸಿದರಾದರೂ ಎರಡನಯ ಬಾರಿಗೆ ಮಧ್ಯಾಹ್ನ ೧:೩೦ರ ವೇಳೆ  ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗಮಿಸಿದಾಗ ಅವರೊಟ್ಟಿಗೆ ತೆರಳಿ ಮತ್ತೆ ನಾಮಪತ್ರ ಸಲ್ಲಿಸಿದರು.ಇದಕ್ಕೂ ಮುನ್ನ ಮೆರವಣಿಗೆ ಗೋಪಿ ವೃತ್ತಕ್ಕೆ ಬಂದು ಸೇರಿತ್ತು. ಆನಂತರ ಅಲ್ಲಿ ಸಮಾವೇಶ ನಡೆಯಿತು.ಮೆರವಣಿಗೆಯಲ್ಲಿ  ಡೊಳ್ಳು ಕುಣಿತ, ವಿವಿಧ ಕಲಾತಂಡಗಳು ಹಾಗೂ ವಾದ್ಯವೃಂದಗಳಿದ್ದವು. ಕಾರ್ಯಕರ್ತರು ಭಾರೀ ಗಾತ್ರ ಹಾರವನ್ನು ಜೆಸಿಬಿ ಮೂಲಕ ಹಾಕಿ ಗೀತಾ ದಂಪತಿಗಳಿಗೆ ಶÀÄಭಕೋರಿದರು.