ನಾನು ಮುಖ್ಯಮಂತ್ರಿ ಲಿಸ್ಟನಲ್ಲಿದ್ದೇನೆಃ ಬಸನಗೌಡ ಯತ್ನಾಳ

ಸಾವಳಗಿ, ಎ.20:ಮುಂಬರುವ ದಿನಗಳಲ್ಲಿ ಸಿಎಂ ಬದಲಾವಣೆಯಾಗುವುದು ಖಂಡಿತ. ನಾನು ಕೂಡ ಸಿಎಂ ಲಿಸ್ಟನಲ್ಲಿ ಇದ್ದೇನೆ ಎಂದು ಕಾರ್ಯಕ್ರಮದಲ್ಲಿ 2ಎ ಮೀಸಲಾತಿಯ ಪಾದಯಾತ್ರೆ ಸಮಿತಿಯ ಗೌರವಾಧ್ಯಕ್ಷರಾದ, ವಿಜಯಪೂರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಶರಣು ಶರಣಾರ್ಥಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಬಸವೇಶ್ವರ ಆವರಣದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮಿಸಲಾತಿಗೆ ಪಂಚಲಕ್ಷ ಪಾದಯಾತ್ರೆಗೆ ಸಹಕರಿಸಿದ ಪಂಚಮಸಾಲಿ ಸಮಾಜದ ಬಂದುಗಳಿಗೆ ಶರಣು ಶರಣಾರ್ಥಿ ಕಾರ್ಯಕ್ರಮದ ಬೃಹತ್ ಸಮಾವೇಶದಲ್ಲಿ ಬಾಗವಹಿಸಿ ಮಾತನಾಡಿದರು.
ಯಡಿಯೂರಪ್ಪನವರ ಅಕ್ಕ-ಪಕ್ಕದಲ್ಲಿ ಇರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ದಾರಿ ತಪ್ಪಿಸುತ್ತಿದ್ದಾರೆ. ಯಡಿಯೂರಪ್ಪನವರು ಸಿಎಂ ಸ್ಥಾನ ಬಿಟ್ಟರೆ, ನಾವು ಕೂಡ ಸಿಎಂ ಆಗಬಹುದು. ಸಿಎಂ ಆಗುವವರ ಲಿಸ್ಟನಲ್ಲಿ ನಾವು ಕೂಡ ಇದ್ದೇವೆ. ನಮ್ಮ ಸರ್ಕಾರದಲ್ಲಿ ಕೆಲವು ಡುಬ್ಲಿಕೇಟ್ ಸಚಿವರಿದ್ದು, ಸಮಾಜವನ್ನು ತಪ್ಪು ದಾರಿಗೆ ಎಳೆಯುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮಾಜ ತಕ್ಕ ಪಾಠ ಕಲಿಸುತ್ತದೆ. ರೈತರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದರೂ ಬಿಲ್ ಕೊಡುವ ಯೋಗ್ಯತೆ ಇಲ್ಲ. ಸುಮ್ಮನೆ ಸಮಾಜದ ದಾರಿ ತಪ್ಪಿಸುವ ಕುತಂತ್ರಕ್ಕೆ ಕೈ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿಗೆ ಟಾಂಗ್ ನೀಡಿದರು.
ಮೀಸಲಾತಿಯು ಸಮಾಜದ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಹಾಗೂ ಸಮಾಜದ ಕಟ್ಟಕಡೆಯ ಬಡ ಕುಟುಂಬಗಳಿಗೆ 2ಎ ಮೀಸಲಾತಿಯ ಸಾಮಾಜಿಕ ನ್ಯಾಯ ದೊರೆಕಿಸಿ ಕೊಡಿಸುವುದೇ ನಮ್ಮ ಹೋರಾಟದ ಗುರಿ. ನಾನು ಯಾವುದೇ ಅಧಿಕಾರಕ್ಕಾಗಿ ಆಸೆ ಪಟ್ಟ ವ್ಯಕ್ತಿ ಅಲ್ಲ. ಯಾರ ಮನೆಯ ಬಾಗಿಲಿಗೂ ಹೋಗಿ ಕೈಚಾಚಿ ನಿಲ್ಲುವ ಮನುಷ್ಯ ಅಲ್ಲ. ನಾನು ಒಬ್ಬ ರಾಜ್ಯ ಹಿರಿಯ ನಾಯಕನಾಗಿದ್ದೆನೆ. ಯಾರಿಗೂ ಅಂಜುವ ಮಗ ನಾನಲ್ಲ. ಸದನದಲ್ಲಿ ಸರಕಾರ ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ ನಿಗದಿತ ಅವಧಿಯಲ್ಲಿ ಮೀಸಲಾತಿಯನ್ನು ನೀಡದೇ ಇದ್ದೆರೆ ಮುಂದಿನ ದಿನಗಳಲ್ಲಿ ಹೋರಾಟದ ಕಾವು ಹೆಚ್ಚಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿಯ ಹೋರಾಟಕ್ಕೆ ಮಣಿದ ಸರಕಾರ 6 ತಿಂಗಳೊಳಗೆ 2ಎ ಮೀಸಲಾತಿ ನೀಡಲಾಗುವದೆಂದು ಭರವಸೆ ನೀಡಿದೆ. ಬೇಡಿಕೆ ಈಡೆರದಿದ್ದರೆ ಹೋರಾಟ ನಿಲ್ಲುವದಿಲ್ಲ ಎಂದರು.
ಇದೇ ಸಂಧರ್ಭದಲ್ಲಿ ಆಖಿಲ ಭಾರತ ಲಿಂಗಾಯತ ಪಂಚಮಸಾಲಿ ರಾಷ್ಟ್ರಾಧ್ಯಕ್ಷರಾದ ಡಾ. ವಿಜಯಾನಂದ ಕಾಶಪ್ಪನವರ ಮಾತನಾಡಿ ಪಂಚಮಸಾಲಿ ಸಮಾಜದ ಮೀಸಲಾತಿ ಹೋರಾಟದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯ ನಿಟ್ಟಿನಲ್ಲಿ ನ್ಯಾಯಯುತವಾದ ಹೋರಾಟ ಮಾಡುತ್ತಿದ್ದೆವೆ. ಅವಶ್ಯಕತೆ ಬಿದ್ದರೆ ಸಮಾಜಕ್ಕಾಗಿ ನಮ್ಮ ರಾಜಕೀಯ ಜೀವನವನ್ನೆ ತ್ಯಾಗ ಮಾಡಲು ಸಿದ್ದರಿದ್ದೆವೆ ಎಚಿದು ಹೇಳಿದರು.
ಇದೇ ಸಂಧರ್ಭದಲ್ಲಿ ರುದ್ರಾಕ್ಷಿಮಠ ನಾಗನೂರ-ಬೆಳಗಾವಿ ಹಾಗೂ ಶಿವಲಿಂಗೇಶ್ವರ ವಿರಕ್ತಮಠದ ಪೀಠಾಧಿಪತಿಗಳಾದ ಡಾ ಅಲ್ಲಮಫ್ರಭು ಮಹಾಸ್ವಾಮಿಗಳು ಮಾತನಾಡಿ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಯನ್ನು ನೀಡಿ ಸಮಾಜದ ಪ್ರಗತಿಗೆ ಹಾಗೂ ನ್ಯಾಯಯುತ ಹೋರಾಟಕ್ಕೆ ಸರಕಾರ ಆದಷ್ಟು ಬೇಗನೆ ಸ್ಪಂದಿಸಿ ಮೀಸಲಾತಿಯನ್ನು ನೀಡಬೇಕೆಂದು ಹೇಳಿದರು.
ಇದೇ ಸಂಧರ್ಭದಲ್ಲಿ ಗ್ರಾಮದ ಹಿರಿಯರಾದ ಬಿ ಎಸ್ ಸಿಂಧೂರ, ಸುರೇಶಗೌಡ ಪಾಟೀಲ, ಡಾ.ಎಸ್ ಆರ್ ಬಾಲಪ್ಪನವರ, ಡಾ.ಬಿ.ಎಸ್ ಪಾಟೀಲ (ನಾಗರಾಳ ಹುಲಿ) ಮಾತನಾಡಿದರು, ಅಣ್ಣಪ್ಪ ಕರಬಸನವರ ಸ್ವಾಗತಿಸಿದರು, ಆನಂದ ದುಪದಾಳ ನಿರೂಪಿಸಿದರು. ಲಕ್ಷ್ಮಣ ಕಿತ್ತೂರ ವಂದಿಸಿದರು.