ನಾನು ಮತ್ತು ಗುಂಡ -2 ಟೀಸರ್ ಬಿಡುಗಡೆ

ನಾಯಿ ಮತ್ತು ಮನುಷ್ಯನ ನಡುವಿನ ಸಂಬಂಧದ ಸುತ್ತ ಸಾಗುವ ” ನಾನು ಮತ್ತು ಗುಂಡ”ಚಿತ್ರ ಬಿಡುಗಡೆಯಾಗಿ ಯಶಸ್ಸು ಪಡೆದಿತ್ತು. ಇದೀಗ ಅದರ ಮುಂದುವರಿದ ಭಾಗ ” ನಾನು ಮತ್ತು ಗುಂಡ-2 ಚಿತ್ರದ ಟೈಟಲ್ ಟೀಸರ್  ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಬಹುತೇಕ ಚಿತ್ರೀಕರಣ ಶಿವಮೊಗ್ಗ, ಬಾಳೆ ಹೊನ್ನೂರು, ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಿದ್ದು ಊಟಿ ಚಿತ್ರೀಕರಣ ಬಾಕಿ ಉಳಿದಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು,ಹಿಂದಿ ಮತ್ತು ಮಲೆಯಾಳಂ ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದೆ.

ನಿರ್ದೇಶಕ , ನಿರ್ಮಾಪಕ  ರಘು ಹಾಸನ್ ಮಾತನಾಡಿ, ಮೊದಲು ಲಾಂಚ್ ಮಾಡಲು ಯಾರು ಬೆಂಬಲ ಇರಲಲ್ಲ. ಒಟಿಟಿ ಯಲ್ಲಿ ಚಿತ್ರಕ್ಕೆ ಸಿಕ್ಕ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದುವರಿದ ಭಾಗದ ಚಿತ್ರಿಕರಣ ಮಾಡಲಾಗುತ್ತಿದೆ. ಟೀಸರ್‍ನಲ್ಲಿ ಕಾಣಿಸಿಕೊಂಡಿದ್ದ ಸಿಂಬ ಇಂದು ಇಲ್ಲ. ಆತನಿಲ್ಲದಿರುವುದು ಬೇಸರದ ಸಂಗತಿ. ಚಿತ್ರ ಟೀಸರ್‍ನಲ್ಲಿ ನಟಿಸಿದ ನಂತರ ಸಿಂಬ ಅನಾರೋಗ್ಯದಿಂದ ಸಾವನ್ನಪ್ಪಿದ. ಅವನ ಮಗ ಚಿತ್ರದಲ್ಲಿ ನಟಿಸುತ್ತಿದ್ದಾನೆ.

ಚಿತ್ರದಲ್ಲಿ ಗೋವಿಂದಗೌಡ ಮುಂದುವರಿದಿದ್ದಾರೆ ಮೊದಲ ಭಾಗದಲ್ಲಿ ನಾಯಕ ಸತ್ತು ಹೋಗಿರುವ ಹಿನ್ನೆಲೆ ನಾಯಕ ಯಾರು ಎನ್ನುವುದನ್ನು ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು. ಊಟಿ ಭಾಗದ ಚಿತ್ರೀಕರಣವನ್ನು  ಡಿಸೆಂಬರ್ ನಲ್ಲಿ ಚಿತ್ರೀಕರಣ ಮಾಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು

ಯಾರು ಯಾರನ್ನು ಬೆಳೆಸಲ್ಲ

“ ಇಲ್ಲಿ ಯಾರು ಯಾರನ್ನು ಬೆಳೆಸಲ್ಲ, ಬದಲಾಗಿ ಕನ್ನಡ ಕಲಾಭಿಮಾನಿಗಳ ಆಶೀರ್ವಾದ ಇರಬೇಕು .ನಾನು ಮತ್ತು ಗುಂಡ ಚಿತ್ರ-2 ಟೈಟಲ್ ಟೀಸರ್ ಬಿಡುಗಡೆ ಮಾಡಿ, ಪ್ರತಿಯೊಬ್ಬ ಹೊಸಬರ ಚಿತ್ರವನ್ನು ಬೆಂಬಲಿ, ಯಶಸ್ಸಿಗೆ ಯಾವುದೇ ಶಾರ್ಟ್‍ಕಟ್ ಇಲ್ಲ. ಪರಿಶ್ರಮ ಜೊತೆಗೆ ಕನ್ನಡ ಕಲಾಬಿಮಾನಿಗಳ ಆಶೀರ್ವಾದವಿರಲಿ.ಮೊದಲ ಭಾಗ ನೋಡಿದ್ದೆ ಮನಸ್ಸಿಗೆ ತುಂಬಾನೆ ಇಷ್ಟವಾಗಿತ್ತು” –  ನಟ ದೃವ ಸರ್ಜಾ.