ಹುಣಸೂರು,ಮಾ.25:-ನಾನು ಎಂದುಅಭಿವೃದ್ದಿಯ ಸರದಾರನಾಗಲು ಬಯಸಿದಿಲ್ಲ, ನಾನು ನನ್ನತಾಲ್ಲೂಕುಜನರ ಬದುಕಿನ ಸೂತ್ರದಾರನಾಗಲು ಬಯಸಿದ್ದೆನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಭಾವುಕ ನುಡಿಗಳನಾಡಿದರು.
ತಾಲ್ಲೂಕಿನ ಮಾದಳ್ಳಿ ಉಕ್ಕಿನಕಂತೆ ಮಠದಲ್ಲಿ 224ನೇ ಅಮಾವಾಸ್ಯೆ ಪ್ರಯುಕ್ತ ಏರ್ಪಡಿಸಿದ ಪೂಜೆಯಲ್ಲಿಕುಟುಂಬ ಸಮೇತರಾಗಿ ಭಾಗವಹಿಸಿ ಮಾತನಾಡಿದ ಅವರು ನಾನು ಶಾಸಕನಾದಗಿಂದ ಇಂದಿನವರೆಗೂ ತಾಲ್ಲೂಕಿನ ಜನರ ಸಮಸ್ಯೆಗಳಿಗೆ ಪರಿಹಾರಆಗುತ್ತ ಬಂದಿದ್ದೆನೆ, ನನಗೆ ನನ್ನ ಕೆಲಸ ತೃಪ್ತಿ ನೀದುವುದಕ್ಕಿಂತ ಹೆಚ್ಚಾಗಿ ಸಮಾಧಾನ ನೀಡಿದೆ. ಸರ್ಕಾರದ ಅನುದಾನದ ಮೂಲಕ ಹಾಗೂ ವೈಯಕ್ತಿಕವಾಗಿ ತಾಲ್ಲೂಕಿಗೆ ಹಲವಾರುಜನಪರ ಕಾರ್ಯಗಳನ್ನು ಮಾಡಿದ್ದೆನೆ, ಹೆಚ್ಚಾಗಿ ಜನತೆಯಲ್ಲಿ ಸಾಮರಸ್ಯ ಬೆಸೆದಿದ್ದೆನೆ ಎಂದರು.
ಆದರೆ ಇತ್ತಿಚ್ಚಿಗೆ ತಾಲ್ಲೂಕಿಗೂತಮ್ಮಗೂ ಸಂಬಂಧವಿಲ್ಲದಂತೆ ಎಲೋ ದೂರಇದ್ದವರು, ಇಂದು ತಮ್ಮ ರಾಜಕಿಯ ಸ್ವಾರ್ಥಕ್ಕಾಗಿ ಹಣದ ಆಸೆ ತೋರಿಸುತ್ತ ಜನರನ್ನು ದಿಕ್ಕು ತಪ್ಪಿಸುತ್ತ, ಜಾತಿ ಧರ್ಮಗಳ ಮೂಲಕ ಒಡಕುಉಂಟು ಮಾಡುತ್ತ ಇರುವುದುದುರಂತ ಎಂದು ತಮ್ಮ ರಾಜಕಿಯ ವೈರಿಗಳಿಗೆ ಕುಟುಕಿದರು.
ಈ ಮಾದಳ್ಳಿ ಮಠ ತಾಲ್ಲೂಕಿನ ಅಸ್ಮಿತೆ, ಯಾರುಕೂಡಧಾರ್ಮಿಕ ಪೂಜಾ ಕಾರ್ಯದಲ್ಲಿ ರಾಜಕೀಯ ಬೆರಸಬಾರದು ಮತ್ತು ಮಾಡಬಾರದು. ಇದು ರಾಜಕೀಯ ಮಾಡುವ ಮತ್ತು ಮಾತನಾಡುವ ವೇದಿಕೆಯಲ್ಲ. ಆದರೂ ಕೆಲವರು ರಾಜಕೀಯ ವೇದಿಕೆ ಮಾಡಿಕೊಂಡಿದ್ದಾರೆ, ಇಲ್ಲೂ ತಮ್ಮ ರಾಜಕಿಯ ಬೆಳೆ ಬೆಯಿಸಿಕೊಂಡವರಿದ್ದಾರೆ ಎಂದು ಮಾರ್ಮಿಕವಾಗಿ ಮಾತನಾಡುವ ಮೂಲಕ ತಮ್ಮ ವಿರೋಧಿಗಳಿಗೆ ಕುಟುಕಿದರು.ಇದೇ ಸಂದರ್ಭದಲ್ಲಿ ಮಠದ ಇತಿಹಾಸವನ್ನು ಸಾರುವಬಸವ ಭಾರತ ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಸಾಂಬ ಸದಾಶಿವ ಸ್ವಾಮೀಜಿಯವರ ದಿವ್ಯ ಸಾನಿಧ್ಯವಹಿಸಿದರು. ಹಂದನಹಳ್ಳಿ ಸೋಮಶೇಖರ್, ಜಿ.ಪಂ ಮಾಜಿ ಉಪಾಧ್ಯಕ್ಷರಾದ ಗೌರಮ್ಮ, ಬಸವ ಸಮಿತಿಅಧ್ಯಕ್ಷಕೂಸಪ್ಪ, ಗುರುಸ್ವಾಮಿ, ಬಸವರಾಜಪ್ಪ, ರಮೇಶ್, ದೇವರಾಜ್, ಪುಟ್ಟರಾಜ, ವಜ್ರಮ್ಮ, ಶೋಭಾ, ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರು, ಸದಸ್ಯರು ಭಕ್ತ ವೃಂದ, ಮುಖಂಡರು, ಇತರೆ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಸೇರಿದಂತೆ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.