ನಾನು ನಿಮ್ಮ ಶಾಸಕ ಅಲ್ಲ ನಿಮ್ಮ ಸೇವಕ: ದರ್ಶನ್ ದೃವ

ನಂಜನಗೂಡು: ಜೂ.25:- ನನ್ನನ್ನು ಐತಿಹಾಸಿಕ ಬಹುಮತದಿಂದ ಗೆಲ್ಲಿಸಿದ್ದೀರಿ ನಂಜನಗೂಡು ವಿಧಾನ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಅಧಿಕ ಬಹುಮತದಿಂದ ನನ್ನನ್ನು ಆಯ್ಕೆ ಮಾಡಿ ಇತಿಹಾಸ ಸೃಷ್ಟಿಸಿದ್ದೀರಿ ನಾನು ನಿಮ್ಮ ಶಾಸಕನಲ್ಲ ನಿಮ್ಮ ಸೇವಕ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ನಂಜನಗೂಡು ಪಟ್ಟಣದ ವಿದ್ಯಾವರ್ಧಕ ಕಾಲೇಜ್ ಮೈದಾನದಲ್ಲಿ ಆಯೋಜನೆ ಮಾಡಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ನಂಜನಗೂಡು ವಿಧಾನ ಸಭಾ ಕ್ಷೇತದ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಅವರು
ನಮ್ಮ ತಂದೆಯಾವರು ಎರಡು ಬಾರಿ ಶಾಸಕರಾಗಿ ಎರಡು ಬಾರಿ ಸಂಸದರಾಗಿ ಈ ಭಾಗದಲ್ಲಿ ಎಲ್ಲರಿಗೂ ಉತ್ತಮವಾದ ಸೇವೆಯನ್ನು ಸಲ್ಲಿಸಿದರುನಮ್ಮ ತಂದೆಯಾವರು ನಂಜನಗೂಡಿನಿಂದ ಸ್ಪರ್ಧಿಸಲು ತುಂಬಾ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು ಅವರ ನಿಧನದಿಂದ ನಮ್ಮ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತು. ರಾಜ್ಯ ನಾಯಕರುಗಳಾದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಡಿ ಕೆ ಸುರೇಶ್, ಶಾಮನೂರು ಶಿವಶಂಕರಪ್ಪ,ಜಾಕಿರ್ ಗೂಳಿ, ಶ್ರೀ ಕಂಠು ಮತ್ತು ಕಾವೇರಪ್ಪನವರು, ಇನ್ನು ಅನೇಕ ನಾಯಕರುಗಳು ನಮ್ಮ ಧೈರ್ಯ ತುಂಬಿ ನನ್ನನ್ನು ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು ನಂತರದಲ್ಲಿ ಒಂದು ಲಕ್ಷಕ್ಕೂ ಅಧಿಕ ಬಹು ಮತಗಳಿದ ನೀವು ನನ್ನನೂ ಗೆಲಿಸಿ ದಾಖಲೆಯನ್ನು ಬರೆದಿರುವ ನೀವು ನಿಜಕ್ಕೂ ದಾಖಲೆಯ ಸರದಾರರು.ಚುನಾವಣಾ ಸಂದರ್ಭದಲ್ಲಿ ನನ್ನಗೆ ನಮ್ಮ ಪಕ್ಷದ ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರುಗಳು, ರೈತ ಸಂಘ,ದಲಿತ ಸಂಘ, ಕಾಂಗ್ರೆಸ್ ಮಹಿಳಾ ಸಂಘ ಇನ್ನು ಅನೇಕ ಸಂಘಟನೆಗಳು ಹಾಗು ಮಾಜಿ ಶಾಸಕರದ ಕಳಲೇ ಕೇಶವಮೂರ್ತಿಯಾವರ ಮಾರ್ಗದರ್ಶನದಲ್ಲಿ ಚುನಾವಣೆ ನಡಸಿ ಜಯಶೀಲಾರಗಿದೇವೆ. ನಮ್ಮ ತಂದೆಯಂತೆಯೇ ನಾನು ಕೂಡ ನಿಮ್ಮಗಳ ಸೇವೆಯನ್ನು ನಿಷ್ಕಲ್ಮಶವಾಗಿ ಮಾಡುತ್ತೇನೆ ನಾನು ಅವರ ಹಾದಿಯಲ್ಲಿಯೇ ಸಾಗುತ್ತೆನೆ.
ಮುಂದಿನ ದಿನಗಳಲ್ಲಿ ದಿನಕ್ಕೆ ಒಂದು ಪಂಚಾಯತಿಯನ್ನು ಆಯ್ಕೆ ಮಾಡಿಕೊಂಡು ಅಧಿಕಾರಿಗಳ ಸಮೇತ ಗ್ರಾಮಕ್ಕೆ ಭೇಟಿ ನೀಡಿ ಜನ ಸಂಪರ್ಕ ಸಭೆ ನಡೆಸಿ ಸ್ಥಳದಲ್ಲಿಯೇ ಸಾಧ್ಯವಾಗುವಷ್ಟು ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನಾನು ಮತ್ತು ನಮ್ಮ ಕುಟುಂಬ ನಿಮ್ಮ ಸೇವೆಗೆ ಸದಾ ಸಿದ್ದ ನಿಮ್ಮ ಸಹಕಾರ ತುಂಬಾ ಮುಖ್ಯ. ರಾಜ್ಯ ಕಾಂಗ್ರೆಸ್ ಗೆಲವುವನ್ನು ಎ ಐ ಸಿ ಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯಾವರಿಗೆ ಅರ್ಪಿಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಸಿ ಮಹದೇವ್ಪ್ಪನವರು ಮಾತನಾಡುತ್ತಾ ನಂಜನಗೂಡಿನಲ್ಲಿ ಕಾಂಗ್ರೆಸ್ ಜಯಗಳಿಸಲು ದೃವ ನಾರಾಯಣ್ ರವರ ನಿಧನವೆ ಕಾರಣ ಎಂದು ಹೇಳಲು ಸಾದ್ಯವಿಲ್ಲ ನಂಜನಗೂಡಿನಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಲು ಅನೇಕ ಕಾರಣಗಳಿವೆ ಜನದೇಶವೇ ಇಲ್ಲದ ಪಕ್ಷವೂಂದು ಹಿಂಭಾಗಿಲಿನಿಂದ ನಮ್ಮ ಪಕ್ಷದ 10 ಜನ ಶಾಸಕರನ್ನು ಮುಂಬಯಿಗೆ ಕರೆದುಕೊಂಡು ಹೋಗಿ ಬಹು ಮತಗಳಿಸಿ ಸರ್ಕಾರ ರಚನೆ ಮಾಡಿತು.
ಪ್ರಧಾನ ಮಂತ್ರಿ ಯಾದವರು ಕೋವಿಡ್ ಸಂದರ್ಭದಲ್ಲಿ ಸರಿಯಾದ ಮಾರ್ಗದರ್ಶನ ವೈಜ್ಞಾನಿಕವಾದ ಮಾರ್ಗಸೂಚಿ ಇಲ್ಲದೆ ಸರಿಯಾದ ಚಿಕಿತ್ಸೆ ನೀಡದೆ ಗಂಟೆ ಹೊಡೆಯಿರಿ, ಜಾಗಟೆ ಬಾರಿಸಿ, ದೀಪ ಹಚ್ಚಿ ಎಂದು ದೇಶವನ್ನು ಸಾನತನವಾದ ಕಡೆಗೆ ಕೊಂಡೊಯ್ಯಲು ಪ್ರಯತ್ನ ಪಟ್ಟರು. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಪರಿಣಾಮಕಾರಿಯಾಗಿ ಕೆಲಸ ಮಾಡಿತು ರೈತರ ಹಾಗು ಸಾರ್ವಜನಿಕರ ನೆರವಿಗೆ ನಿಂತು ರೈತರ ಹಣ್ಣು ತರಕಾರಿಗಳನ್ನು ಖರೀದಿ ಮಾಡಿ ಜನರಿಗೆ ಹಂಚಲು ಪ್ರಾರಂಭಿಸಿತು. ಬಿ ಜೆ ಪಿ ವಿರುದ್ದ ಪಕ್ಷದಲ್ಲಿ ಇದ್ದಾಗ ಮನಮೋಹನ್ ಸಿಂಗ್ ಸಿಲಿಂಡರ್ ಬೆಲೆಯನ್ನು 45 ಪೈ ಏರಿಕೆ ಮಾಡಿದರಿಂದ ಮುಖ್ಯಮಂತ್ರಿಯಾದ ನರೇಂದ್ರ ಮೋದಿಯವರು ಚುನಾವಣಾ ಭಾಷಣ ಸಂದರ್ಭದಲ್ಲಿ ಮಹಿಳೆಯರೇ ಮತ ನೀಡುವಾಗ ತಮ್ಮ ಸಿಲೆಂಡರಿಗೆ ಕೈಮುಗಿದು ಒಮ್ಮೆ ಹೋಗಿ ಎಂದು ಟೀಕೆ ಮಾಡುತ್ತಿದ್ದರು ಬಿಜೆಪಿ ಸರ್ಕಾರದಲ್ಲಿ ಸಿಲಿಂಡರಿಗೆ 400 ರೂಗಳು ಏರಿಕೆ ಆದ ಹಿನ್ನೆಲೆಯಲ್ಲಿ ಮಹಿಳೆಯರು 23 ರ ಚುನಾವಣೆಯಲ್ಲಿ ಅದೇ ವಾಕ್ಯವನ್ನು ನರೇಂದ್ರ ಮೋದಿಯವರಿಗೆ ಹಿಂತಿರುಗಿಸಿದ್ದಾರೆ ಎಂದರು.
ನಂತರ ಮಾತಾನಾಡಿದ ಸಂಸದ ಡಿ ಕೆ ಸುರೇಶ್ ಮಾಜಿ ಮುಖ್ಯಮಂತ್ರಿ ಗೆ ತಿರುಗೇಟು ನೀಡಿದ ಡಿ ಕೆ ಸುರೇಶ್ ನೀವು ನಮ್ಮನ್ನು ಟೀಕೆ ಮಾಡುವ ಬದಲು ನಿಮ್ಮ ಕೇಂದ್ರಕ್ಕೆ ಪತ್ರ ಬರೆದು ನಾವು ಕರ್ನಾಟಕ ಕನ್ನಡಿಗರ ರಕ್ಷಣೆಗೆ ಬಿ ಜೆ ಪಿ ಬದ್ಧವಾಗಿದೆ ಎಂದು ಗೋದಾಮಿನ ಇರುವ ಅಕ್ಕಿಯನ್ನು ನೀಡಿದರೆ ಸಹಾಯವಾಗುತ್ತದೆ ಎಂದು.
ಬಿಜೆಪಿ ಶಾಸಕ ಮತ್ತು ಸಂಸದರಿಗೆ ತಾಳ್ಮೆ ಇರಬೇಕು ನಾವು ರಾಜ್ಯದ ರೈತರ, ನಿರ್ಗತಿಕರ, ಹಿಂದುಳಿದವರ, ಬಡವರ ಪರ ಕಾಳಜಿಯಿಂದ ಅವರ ಸೇವೆ ಮಾಡಲು ನಮ್ಮಗೆ ಆರ್ಶಿವಾದ ಮಾಡಿದ್ದರೆನಮ್ಮ ಮೇಲೆ ಟೀಕೆ ಮಾಡುವುದು ಸರಿಯಲ್ಲ ಎಂದರು.
ಇಂದು ದೃವ ನಾರಾಯಣ್ ಅತ್ಮಕ್ಕೆ ಶಾಂತಿ ಸಿಕ್ಕೆದೆ ಅವರ ಪುತ್ರ ಇಂದು ಶಾಸಕನಾಗಿ ವೇದಿಕೆ ಮೇಲೆ ಅಸಿನರಾಗಿದ್ದಾರೆ ನೂತನ ಶಾಸಕರ ಮೇಲೆ ಭಾರಿ ನಿರೀಕ್ಷೆಗಳು ಬಹಳ ಇರುತ್ತದೆ ನಮ್ಮದೆ ಸರ್ಕಾರ ಇದ್ದಗ ಅದು ಸಾಮಾನ್ಯ ಕೂಡ ಎಲ್ಲರನ್ನು ಅನುಸರಿಸಿಕೊಂಡು ವಿಷಕಂಠನಾಗಿ ಇರಬೇಕಾಗುತ್ತದೆ. ಚುನಾವಣೆಯಲ್ಲಿ ನಮ್ಮಗೆ ಸಹಾಯ ಮಾಡಿದವರು ಮಾಡದೆ ಇರುವರು ಇರುತ್ತಾರೆ ಸಹಾಯ ಮಾಡಿದರವರು ಹಳ್ಳಿಯಲ್ಲಿ ಇರುತ್ತಾರೆ ಸಹಾಯ ಮಾಡದವರು ಹೂವಿನ ಹಾರ ಹಿಡಿದುಕೊಂಡು ನಿಮ್ಮ ಜೊತೆ ಇರುತ್ತಾರೆ ಕೆಲಸ ನಾವು ಗ್ರಾಮಗಳಿಗೆ ತೆರಳಿ ಅವರಿಗೆ ಸೇವೆ ಸಲ್ಲಿಸಬೇಕು.
ಇಂದಿನ ಕಾಲದಲ್ಲಿ ರಾಜಕೀಯ ಬಹಳ ಹಾಳಗಿದೆ ರಾಜಕೀಯವನ್ನು ಅರೆದು ಕುಡಿದಿದ್ದೇನೆ ಎಂದು ಎಲ್ಲರೂ ಅಂದುಕೊಳ್ಳಬಹುದು ಆದರೆ ರಾಜಕೀಯವನ್ನು ಸಂಪೂರ್ಣವಾಗಿ ಬಲ್ಲವರು ಈ ಪ್ರಪಂಚದಲ್ಲೇ ಯಾರು ಇಲ್ಲ ಅಂದಿನ ಕಾಲದಲ್ಲಿ ಸಚಿವರಿಗೆ ಶಾಸಕರಿಗೆ ಬಹಳ ಗೌರವ ಇತ್ತು ಇಂದುಇಂದು ಅದು ಕಾಣುತ್ತಿಲ್ಲ ರಾಜಕೀಯ ಸಂಪೂರ್ಣವಾಗಿ ಹಾಳಾಗಿದೆ ರಾತ್ರಿ ವೇಳೆ ಬಾರಿನಲ್ಲಿ ಕುಳಿತು ನಮ್ಮಗೆ ದೂರವಾಣಿ ಕರೆ ಮಾಡಿದರೆ ನಾವು ತೆಗೆಯಬೇಕು ಇಲ್ಲದಿದ್ದರೆ ನಮ್ಮನ್ನು ಕೆಟ್ಟವರು ಎನ್ನುತಾರೆ ಎಂದು ಹಾಸ್ಯ ಚಟಕಿ ಹಾರಿಸಿದರು.
ನೀವು ಮತ್ತೊಬ್ಬ ಧ್ರುವನಾರಾಯಣ್ ಆಗಬೇಕು ಎಂದರೆ ನಿಮ್ಮ ಸುತ್ತ ಇರುವ ಬೆಂಬಲಿಗರನ್ನು ಕರೆದುಕೊಂಡು ಗ್ರಾಮದಲ್ಲಿ ಇರುವ ರೈತರು ಕೂಲಿ ಕಾರ್ಮಿಕರು ಹಿಂದುಳಿದವರು ಇಂಥವರಿಗೆ ಸಹಾಯ ಮಾಡುವುದರಿಂದ ಮತ್ತು ಅವರಿಗೆ ಅನುದಾನಗಳನ್ನು ನೀಡುವುದರಿಂದ ನೀವು ಮತ್ತೊಬ್ಬ ಧ್ರುವನಾರಾಯಣಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು