
ಮುಂಬೈ,ಅ.೧೧-ನಾನು ಜಂಟಿಯಾಗಿ ಇಲ್ಲ, ನಾನು ಒಬ್ಬಂಟಿಯಾಗಿಯೇ ಇದ್ದೇನೆ ಎಂದು ದಿಶಾ ಪಟಾನಿ ಜೊತೆಗಿನ ತಮ್ಮ ಸಂಬಂಧ ಮುರಿದು ಬಿದ್ದ ಬಗ್ಗೆ ಟೈಗರ್ ಶ್ರಾಫ್ ವಿವರಿಸಿದ್ದಾರೆ.
ಬಾಲಿವುಡ್ ನಟ ಟೈಗರ್ ಶ್ರಾಫ್ ದಿಶಾ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ತಾವು ಕರಾರುಬದ್ಧ ಸಂಬಂಧವನ್ನು ಇಷ್ಟಪಡುವುದಿಲ್ಲ, ಹಾಗಾಗಿ ನಾನು ಒಂಟಿ ಎಂದು ನಟ ಸ್ಪಷ್ಟಪಡಿಸಿದ್ದಾರೆ ತಮ್ಮ ಬಗ್ಗೆ ಹರಡಿದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಟೈಗರ್ ಶ್ರಾಫ್-ದಿಶಾ ಪಟಾನಿ ಮದುವೆಗೆ ದಿಶಾ ಒತ್ತಾಯಿಸಿದರು. ಟೈಗರ್ ಶ್ರಾಫ್ ಅವರು ಬದ್ಧತೆ ಸಂಬಂಧವನ್ನು ಇಷ್ಟಪಡದ ಕಾರಣ ಮದುವೆ ಬೇಡ ಎಂದು ಹೇಳಿದರು. ಹಾಗಾಗಿ ೨೦೨೦ರಲ್ಲಿ ಇಬ್ಬರೂ ಬೇರ್ಪಟ್ಟರು ಎನ್ನಲಾಗುತ್ತಿದೆ.
ಇದೀಗ ಸಂದರ್ಶನವೊಂದರಲ್ಲಿ ಟೈಗರ್ ಶ್ರಾಫ್ ತಾನು ಸಿಂಗಲ್ ಎಂದು ಹೇಳಿದ್ದಾರೆ.
ನಾನು ಕಳೆದ ಎರಡು ವರ್ಷಗಳಿಂದ ಒಂಟಿಯಾಗಿದ್ದೇನೆ. ಇತ್ತೀಚಿಗೆ ನನ್ನ ಹೆಸರು ಕೆಲವರ ಜೊತೆ ಸೇರಿಕೊಂಡಿದೆ. ಇದು ಸುಳ್ಳು ಎಂದು ಅವರು ಹೇಳಿದರು. ದಿಶಾ ಪಟಾನಿ ಜೊತೆಗಿನ ಬ್ರೇಕಪ್ ಸ್ಟೋರಿ ಬಗ್ಗೆ ಪರೋಕ್ಷವಾಗಿ ಉತ್ತರಿಸಿದರು. ಟೈಗರ್ ಶ್ರಾಫ್ ದಿಶಾ ಧನುಕಾ (ದೀಶಾ ಧನುಕಾ) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗೆ ಹಬ್ಬಿತ್ತು. ಈ ಬಗ್ಗೆ ಟೈಗರ್ ಶ್ರಾಫ್ ಕೂಡ ಸ್ಪಷ್ಟನೆ ನೀಡಿದ್ದಾರೆ.
ಸದ್ಯ ದಿಶಾ ಪಟಾನಿಗೆ ಹೊಸ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ. ನಟಿ ಅಲೆಕ್ಸಾಂಡರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಬಾಲಿವುಡ್ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.