
ಸಿಂಧನೂರು,ಏ.೧೩- ಪಕ್ಷ ನನಗೆ ಟಿಕೆಟ್ ನೀಡಿದ್ದು ಎಲ್ಲರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಮಾಡುವ ಮೂಲಕ ತಾಲೂಕಿನಲ್ಲಿ ಕಮಲ್ ಹರಳಿಸಲಾಗುತ್ತೇದೆ ಎಂದು ಬಿಜೆಪಿಯ ಪಕ್ಷದ ಅಭ್ಯರ್ಥಿಯಾದ ಕೆ.ಕರಿಯಪ್ಪ ಮಾತನಾಡಿದರು.
ನಗರದ ಗಂಗಾವತಿ ರಸ್ತೆಯಲ್ಲಿ ಪಕ್ಷದ ಚುನಾವಣೆಯ ಕಛೇರಿಯಲ್ಲಿ ಪತ್ರಕರ್ತರರೊಂದಿಗೆ ಮಾತನಾಡಿದ ಅವರು ನನಗೆ ಪಕ್ಷ ಟಿಕೆಟ್ ಘೋಷಣೆ ಮಾಡಿದ ಮೇಲೆ ಪಕ್ಷದ ಮುಖಂಡರಾದ ಕೊಲ್ಲಾ ಶೇಷ ಗಿರಿರಾವ್, ಕೆ.ವಿರೂಪಾಕ್ಷಪ್ಪ, ಕೆ. ಮರಿಯಪ್ಪ ಅಮರೇಗೌಡ ವಿರುಪಾಪುರ, ಶಿವನಗೌಡ ಗೌರೇಬಾಳ ರಾಜೇಶ ಹಿರೇಮಠ ಸೇರಿದಂತೆ ಪ್ರಮುಖರನ್ನು ಭೇಟಿ ಮಾಡಿ ಅವರಿಂದ ಆಶೀರ್ವಾದ ಪಡೆದುಕೊಂಡಿದ್ದೇನೆ ಎಲ್ಲರು ಒಂದಾಗಿ ಚುನಾವಣೆ ಮಾಡೋಣ ನಾವು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.
ಹಿಂದಿನ ಚುನಾವಣೆಗಳಲ್ಲಿ ಹಲವಾರು ಜನರಿಗೆ ಮತ ನೀಡಿ ಗೆಲ್ಲಿಸಿದ್ದು ಅವರು ಯಾರು ಕ್ಷೇತ್ರ ಅಭಿವೃದ್ಧಿ ಪಡಿಸಿಲ್ಲ ನನಗೊಂದು ಸಲ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ.ಮಾಡಿ ಕೊಡುವಂತೆ ಕ್ಷೇತ್ರದ ಮತದಾರರಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ನಾನು ಹೋಗಿ ಮತ ಕೇಳಿದಾಗ ಜನರು ನನಗೆ ಪ್ರೀತಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಅಲ್ಪಸಂಖ್ಯಾತರು ತಮಗೆ ಮತ ನೀಡುತ್ತಾರಾ ಎನ್ನುವ ಸುದ್ದಿ ಗಾರರ ಪ್ರಶ್ನೆಗೆ ನನಗೆ ಆ ಮತ ಈ ಮತ ಇಲ್ಲ ಕ್ಷೇತ್ರದ ಎಲ್ಲ ವರ್ಗದ ಜನರು ಮತ ನೀಡಿ ಗೆಲ್ಲಿಸುತ್ತಾರೆ. ಅಲ್ಲದೆ ನನಗೆ ಅತಿ ಹೆಚ್ಚು ಮುಸ್ಲಿಂ ಸಮಾಜದ ಗೆಳೆಯರಿದ್ದಾರೆ ಅವರೆಲ್ಲರೂ ಈ ಸಲ ನನಗೆ ಆಶೀರ್ವಾದ ಮಾಡುತ್ತಾರೆ. ಇದರಲ್ಲಿ ಅನುಮಾನ ಬೇಡ ಎಂದರು.
ನಿರೀಕ್ಷೆಯಂತೆ ಕೆ.ಕರಿಯಪ್ಪಗೆ ಬಿಜೆಪಿ ಪಕ್ಷದ ಟಿಕೆಟ್ ನೀಡಿ ಕೆ.ಕರಿಯಪ್ಪ ಪಕ್ಷ ಸೇರುವಾಗ ಕೊಟ್ಟ ಮಾತಿನಂತೆ ಪಕ್ಷ ನಡೆದುಕೊಂಡಿದೆ ಕೆ.ಕರಿಯಪ್ಪಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಪಕ್ಷದ ಮುಖಂಡರು ಟಿಕೆಟ್ ಘೋಷಣೆ ಮಾಡಿದ ಸುದ್ದಿ ಕೇಳಿದ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ನಗರದಲ್ಲಿ ಪಟಾಕಿ ಸಿಡಿಸುವ ಮೂಲಕ ಹರ್ಷ ವ್ಯಕ್ತಪಡಿಸಿ ಸಂಭವಿಸಿದರು.
ಕೆ.ಕರಿಯಪ್ಪಗೆ ಕಾಂಗ್ರೆಸ್ ಟಿಕೆಟ್ ಸಿಗುವದು ಅನುಮಾನ ಆದ್ದರಿಂದ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ. ಈಗಾಗಲೆ ಮಾತುಕತೆ ನಡೆಸಲಾಗಿದೆ ಮೊದಲು ಕೆ.ಮರಿಯಪ್ಪ ನಂತರ ಕೆ.ಕರಿಯಪ್ಪ ಬಿಜೆಪಿಗೆ ಹೋಗುತ್ತಾರೆ ಎಂದು ಪತ್ರಿಕೆಯಲ್ಲಿ ಮೊದಲು ಸುದ್ದಿ ಮಾಡಿದ್ದು ಪತ್ರಿಕೆಯಲ್ಲಿ ಬಂದ ವರದಿ ನೋಡಿ ಅದು ಸುಳ್ಳು ಸುದ್ದಿ ಎಂದು ಕೆಲವರು ಕುಂಡಿ ಉರುಕೊಂಡು ಎಗೆರಾಡಿದರು ಈಗ ಕೆ.ಕರಿಯಪ್ಪ ಬಿಜೆಪಿಗೆ ಬಂದು ಪಕ್ಷದ ಅಭ್ಯರ್ಥಿಯಾಗಿದ್ದಾರೆ ಯಾವದೆ ಸುಳಿವು ಇಲ್ಲದೆ ಪತ್ರಿಕೆ ವರದಿ ಪ್ರಕಟಿಸುವುದಿಲ್ಲ.
ಪಕ್ಷದ ಮುಖಂಡರಾದ ಅಮರೇಶಪ್ಪ ಮೈಲಾರ, ಕೆ.ಬೀಮಣ್ಮ ವಕೀಲರು, ಗಾಂಧಿನಗರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ದುರಗಪ್ಪ ನಾಯಕ, ವೆಂಕೋಬ ನಾಯಕ ರಾಮತ್ನಾಳ, ಪರಮೇಶ ದಡೇಸೂಗೂರ, ಹುಸೇನಪ್ಪ ಸೂಲಂಗಿ, ದಾವಲಸಾಬ ದೊಡ್ಡ ಮನಿ, ರಮೇಶ ಯಾದವ, ಶ್ರೀನಿವಾಸ, ಆದಿಕೇಶವ, ಅಜರುದ್ದೀನ್, ರಾಘವೇಂದ್ರ ಹೆಡಿಗಿನಾಳ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.