ನಾನು ಕ್ಷೇತ್ರದ ಶಾಸಕ ಪಟ್ಟಣ ಪಂಚಾಯತಿ ಸದಸ್ಯನಲ್ಲ -ಶಾಸಕ ಎನ್ ವೈ ಜಿ ಗುಡುಗು.

ಕೂಡ್ಲಿಗಿ.ಏ.24 :- ನಾನು ಕ್ಷೇತ್ರದ ಶಾಸಕನಿದ್ದೇನೆ ಪಟ್ಟಣದಲ್ಲಿ ಮನೆ ಮಂಜೂರು ಮಾಡಲು ಪಟ್ಟಣ ಪಂಚಾಯತಿ ಸದಸ್ಯನಲ್ಲ ಸ್ಥಳೀಯ ಆಡಳಿತ ವ್ಯಾಪ್ತಿಯ ಪಟ್ಟಣ ಪಂಚಾಯತಿಗೆ ಮನವಿ ಕೊಡಿ ನನಗಲ್ಲ ಎಂದು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ದಲಿತಪರ ಮತ್ತು ಸಿಐಟಿಯು ಸಂಘಟಕರ ಮೇಲೆ ಗುಡುಗಿದ ಘಟನೆ ಶುಕ್ರವಾರ ಮಧ್ಯಾಹ್ನ ಕೂಡ್ಲಿಗಿ ಪಟ್ಟಣದಲ್ಲಿ ಜರುಗಿತು. ಪಟ್ಟಣದ ಆಶ್ರಮ ಶಾಲಾ ಆವರಣದಲ್ಲಿ ಬಿಸಿಎಂ ಇಲಾಖೆಯ ಮಹಿಳಾ ಹಾಸ್ಟೆಲ್ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದಾಗ ದಲಿತಪರ ಸಂಘಟನೆ ಪದಾಧಿಕಾರಿಗಳು ಹಾಗೂ ಸಿಐಟಿಯು ಸಂಘಟನೆ ಪದಾಧಿಕಾರಿಗಳು ಮತ್ತು ಕನ್ನಡ ಸೇನೆ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಸೇರಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ನಿರ್ಗತಿಕರಿಗೆ ಹಾಗೂ ಕಡುಬಡವರಿಗೆ ನಿವೇಶನ ಮತ್ತು ವಸತಿ ಸೌಕರ್ಯ ಕಲ್ಪಿಸಿಕೊಡುವಂತೆ ಮನವಿ ಸಲ್ಲಿಸುವ ಸಂದರ್ಭ ಶಾಸಕ ಎನ್ ವೈ ಗೋಪಾಲಕೃಷ್ಣ ಸಂಘಟನೆ ಪದಾಧಿಕಾರಿಗಳ ಮೇಲೆ ಗುಡುಗಿದ ಪ್ರಸಂಗ ಜರುಗಿತು. ಇದೆ ಸಂದರ್ಭದಲ್ಲಿ ಸಿಐಟಿಯು ಸಂಘಟನೆಯ ಗುನ್ನಳ್ಳಿ ರಾಘವೇಂದ್ರ ಮಾತನಾಡಿ ಕೂಡ್ಲಿಗಿ ಪಟ್ಟಣದಲ್ಲಿ ಸುಮಾರು 20 ವರ್ಷಗಳಿಂದ ಸರ್ಕಾರದಿಂದ ನಿರಾಶ್ರಿತರಿಗಾಗಲಿ ಅಥವಾ ಕಡುಬಡವರಿಗಾಗಲಿ ಹಾಗೂ ನಿರ್ಗತಿಕರಿಗೆ ಜೀವನೋಪಾಯ ಮಾಡಲು ಖಾಲಿ ನಿವೇಶನ ಸಹ ಕೊಟ್ಟಿಲ್ಲ ಪಟ್ಟಣದಲ್ಲಿ ಅತೀ ಹೆಚ್ಚು ಪರಿಶಿಷ್ಟ ಜಾತಿ, ಪಂಗಡದ ಸಮುದಾಯದವರೆ ಹೆಚ್ಚಾಗಿದ್ದು ಕುಟುಂಬದಲ್ಲಿ ನಾಲ್ಕೈದು ಕುಟುಂಬವು ಒಂದೇ ಸೂರಿನಡಿ ವಾಸವಾಗಲು ಆಗದಿದ್ದು ಜೀವನ ಕಷ್ಟವಾಗಿದೆ ಇದರಿಂದ ಇಂತಹ ಕುಟುಂಬಕ್ಕೆ ಖಾಲಿ ನಿವೇಶನ ಮತ್ತು ವಸತಿ ಸೌಕರ್ಯ ಕಲ್ಪಿಸಬೇಕಾಗಿದೆ ನಮ್ಮ ಕ್ಷೇತ್ರದ ಶಾಸಕರನ್ನು ಕೇಳದೆ ಮತ್ಯಾರನ್ನು ನಾವು ಕೇಳಬೇಕು ಸ್ಥಳೀಯ ಆಡಳಿತ ಪಟ್ಟಣಪಂಚಾಯತಿಯಲ್ಲಿ ಸುಮಾರು ವರ್ಷಗಳಿಂದ ಮನೆ ಮಂಜೂರು ಆಗಿರುವುದಿಲ್ಲ ನಮಗೆ ವೈಯಕ್ತಿಕವಾಗಿ ಮನೆ ಕೇಳಲು ಬಂದಿಲ್ಲ ಎಂದು ಶಾಸಕರಿಗೆ ಮನವಿ ಪತ್ರ ಕುರಿತಂತೆ ತಿಳಿಸಿ ಹೇಳಿದರು ಅದಕ್ಕೆ ಸಂಘಟನೆಯ ಪದಾಧಿಕಾರಿಗಳಾದ ಸಾಲುಮನಿ ರಾಘವೇಂದ್ರ, ನಿವೃತ್ತ ಯೋಧ ರಮೇಶ, ಗುನ್ನಳ್ಳಿ ರಘು ಸೇರಿದಂತೆ ಇದಕ್ಕೆ ಧ್ವನಿಗೂಡಿಸಿದರು ಸ್ವಲ್ಪ ಸಮಯ ಮಾತಿನ ಚಕಮಕಿ ನಡೆಯಿತು ಪೊಲೀಸರು ಅದನ್ನು ತಿಳಿಗೊಳಿಸಿದರು.
ಸಂಘಟಕರ ಮನವಿ ಆಲಿಸಿದ ಶಾಸಕರು ನೀವು ನಿರ್ಗತಿಕರ ಮತ್ತು ಕಡುಬಡಕುಟುಂಬದ ಪಟ್ಟಿಮಾಡಿ ಕೊಡಿ ಎಂದು ಸಂಘಟಕರಿಗೆ ತಿಳಿಸಿದರು ಆ ಪಟ್ಟಿ ಮಾಡುವಾಗ ಪಟ್ಟಣ ಪಂಚಾಯತಿ ಸದಸ್ಯರು ಅದಕ್ಕೆ ಅಡ್ಡಿಪಡಿಸಬಹುದು ಅದನ್ನು ಪಟ್ಟಣಪಂಚಾಯತಿಗೆ ವಹಿಸಿ ಎಂದು ಸಂಘಟಕರು ಹೇಳಿದ ಮಾತಿಗೆ ಶಾಸಕರು ಇಲ್ಲಾ ನೀವೇ ಪಟ್ಟಿಮಾಡಿ ನನಗೆ ಕೊಡಿ ನಿವೇಶನ ಮತ್ತು ವಸತಿ ಸೌಕರ್ಯ ಕೊಡುವ ವ್ಯವಸ್ಥೆ ನಿಜವಾದ ಕುಟುಂಬಕ್ಕೆ ಸಿಗುವಂತೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಇಓ ಬಸಣ್ಣ, ಪಟ್ಟಣಪಂಚಾಯತಿ ಉಪಾಧ್ಯಕ್ಷೆ , ಜಿಲ್ಲಾ ಪಂಚಾಯತಿ ಸದಸ್ಯ ರೇವಣ್ಣ, ತಾಲೂಕು ಪಂಚಾಯತಿ ಸದಸ್ಯ ಪಾಪನಾಯಕ ಗುಂಡುಮುಣುಗು ತಿಪ್ಪೇಸ್ವಾಮಿ, ಪ್ರಕಾಶ, ಪಟ್ಟಣ ಪಂಚಾಯತಿ ಸದಸ್ಯರಾದ ಸಚಿನ್, ಬಿಜೆಪಿ ಮುಖಂಡರಾದ ಭೀಮೇಶ್, ದುರುಗೇಶ, ಬಿಸಿಎಂ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಇತರೆ ಅಧಿಕಾರಿ ವರ್ಗವು ಹಾಜರಿತ್ತು.