ನಾನು ಕೊಟ್ಟ ಮಾತು ತಪ್ಪಿದ ಮಗನಲ್ಲ- ಜನಾರ್ಧನ್ ರೆಡ್ಡಿ

ಸಿಂಧನೂರು,ಮಾ.೨೬- ಕಲ್ಯಾಣ ಪ್ರಗತಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ಇಡೀ ರಾಜ್ಯದ ಚಿತ್ರಣವನ್ನೆ ಬದಲಾಯಿಸುವೆ.
ಅದಕ್ಕಾಗಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು ಎಂದು ಕಲ್ಯಾಣ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಗಾಲಿ ಜನಾರ್ಧನ್ ರೆಡ್ಡಿ ಜನರಲ್ಲಿ ಮನವಿ ಮಾಡಿಕೊಂಡರು.
ನಗರದಲ್ಲಿ ಹಮ್ಮಿಕೊಂಡಿದ್ದ, ಪಕ್ಷದ ಪ್ರಣಾಳಿಕೆ ಬಿಡುಗಡೆ ಹಾಗೂ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕುಂಟಿ ಜನಪರ ಕಾಳಜಿ ಮೆಚ್ಚುವಂತಹದು ಸುಮಾರು ೫ ಕೋಟಿ ವೆಚ್ಚದಲ್ಲಿ ನಗರದಲ್ಲಿ ಗಾರ್ಮೆಂಟ್ ಕಾರ್ಖಾನೆ ಮಾಡಿ ೧೦ ಸಾವಿರ ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಅವರು ಆರ್ಥಿಕವಾಗಿ ಸಬಲೀಕರಣ ಮಾಡಿ ಅವರು ಸ್ವಾವಲಂಬನೆ ಜೀವನ ನಡೆಸಲು ಸಹಾಯ ಮಾಡುತ್ತಿದ್ದಾರೆ. ಅವರ ಕೆಲಸಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುವೆ ಎಂದರು.
ಬಸವೇಶ್ವರ ರೈತ ಸಂಪರ್ಕ ಕೇಂದ್ರವನ್ನ ಹೋಬಳಿ ವ್ಯಾಪ್ತಿಯ ಆರಂಭಿಸಿ ಅದರ ಮೂಲಕ ರೈತರ ಮನೆಗೆ ಹೋಗಿ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳನ್ನು ಒದಗಿಸುವ ಕೆಲಸ ಮಾಡುತ್ತೇನೆ. ಮಲ್ಲಿಕಾರ್ಜುನ ನೆಕ್ಕಂಟಿಯನ್ನು ಆರಿಸಿ ತಂದರೆ ನಗರದ ಬಡಜನರಿಗೆ ಉಚಿತ ನಿವೇಶನ ನೀಡಿ ಎರಡು ಕೋಣೆಗಳ ಮನೆಯನ್ನ ಕಟ್ಟಿಸಿ ಕೊಡುವೆ ಎಂದರು.
ಇತರ ಪಕ್ಷಗಳಂತೆ ನಾವು ತಾರತಮ್ಯ ಮಾಡದೆ ವಿದ್ಯಾಭ್ಯಾಸ ಮುಗಿಸಿದ ತಾರತಮ್ಯ ಮಾಡದೆ ಎಲ್ಲರಿಗೂ ಸಮಾನಾಗಿ ತಿಂಗಳಿಗೆ ೨೫೦೦ ರೂ.ಗಳನ್ನು ಕೊಡುತ್ತೇನೆ ಅಲ್ಲದೆ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಪರೀಕ್ಷೆಯ ಶುಲ್ಕ ವನ್ನು ಸರ್ಕಾರವೆ ಬರಿಸುವಂತಹ ಮಾಡಲಾಗುತ್ತೇದೆ ಎಂದರು.
ಜಯಲಲಿತಾ, ರಾಜಶೇಖರ ರೆಡ್ಡಿ, ಎನ್.ಟಿ.ಆರ್ ಅವರನ್ನು ಜನ ಇಂದಿಗೂ ನೆನೆದು ಗೌರವಿಸುತ್ತಾರೆ ನಾನು ಜನಪರ ವಾಗಿ ಕೆಲಸ ಮಾಡಿ ಜನ ಮಾನಸದಲ್ಲಿ ಉಳಿಯುವ ಆಸೆ ಹೊಂದಿದ್ದೇನೆ. ನನ್ನ ಜೀವ ಇರುವತನಕ ಸದಾ ಜನ ಸೇವೆ ಮಾಡುವೆ ನೀವು ನನ್ನ ಕೈ ಬಿಡಬೇಡಿ ಎಂದು ನೆರೆದಿದ್ದ ಜನರಲ್ಲಿ ಅವರು ಮನವಿ ಮಾಡಿಕೊಂಡರು.
ಜನಾರ್ಧನ್ ರೆಡ್ಡಿ ಮಹಿಳೆಯರ ಪರವಾಗಿ ಅಪಾರ ಗೌರವ ಹೊಂದಿದ್ದಾರೆ. ಇತರ ರಾಜಕಾರಣಿಗಳಂತೆ ಬರವಸೆ ನೀಡದೆ ಅಧಿಕಾರ ಇಲ್ಲದಿದ್ದರೂ ಸಹ ನಮ್ಮ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನಕ್ಕುಂಟಿ ಕಾರ್ಖಾನೆಯನ್ನು ಆರಂಭಿಸುವ ಮೂಲಕ ಜನರಿಗೆ ಉದ್ಯೋಗ ನೀಡುವ ಕೆಲಸವನ್ನು ಮಾಡುತ್ತಿದ್ದು, ಜನಪರ ಕಾಳಜಿ ಇರುವ ಮಲ್ಲಿಕಾರ್ಜುನ ನೆಕ್ಕಂಟಿಯವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯಾದ ಅರುಣಾ ಲಕ್ಷ್ಮಿ ಜಪರಲ್ಲಿ ಮನವಿ ಮಾಡಿಕೊಂಡರು.
ಅಧಿಕಾರಕ್ಕಾಗಿ ನಾನು ರಾಜಕೀಯಕ್ಕೆ ಬಂದಿಲ್ಲ ಜನ ಸೇವೆ ಮಾಡಲು ಚುನಾವಣೆಯಲ್ಲಿ ಸ್ಪರ್ಧಿಸಿರುವೆ. ಬದಲಾವಣೆಗಾಗಿ ಈ ಸಲ ನಿಮ್ಮ ಮಗನಾದ ನನಗೆ ಮತ ನೀಡಿ ಗೆಲ್ಲಿಸಿದರೆ ಇಡೀ ಕ್ಷೇತ್ರದಲ್ಲಿ ಹಿಂದೆ ಯಾರು ಮಾಡಲಾರದೆ ಇರುವಂಥಹ ಜಪಪರ ಅಭಿವೃದ್ಧಿ ಕೆಲಸ ಮಾಡುವೆ. ಅದಕ್ಕೆ ನನಗೊಂದು ಸಲ ಅವಕಾಶ ಕೊಡುವಂತೆ ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ನೆಕ್ಕಂಟಿ ಮತದಾರರಲ್ಲಿ ಕೈಮುಗಿದು ಮನವಿ ಮಾಡಿಕೊಂಡರು.
ಪಕ್ಷದ ಮುಖಂಡರಾದ ಸಿದ್ದಯ್ಯ ಸ್ವಾಮಿ, ಹನುಮನ ಗೌಡ, ಮಹಿಬೂಬ, ಪಾವನಿ, ಸೇರಿದಂತೆ ಇನ್ನಿತರರು ವೇದಿಕೆಯ ಮೇಲೆ ಇದ್ದರು.
ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಹಾಗೂ ವಾಹನಗಳ ಬಂದ ಸಂಚಾರ ಅಸ್ತವ್ಯಸ್ತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಯಿತು.