ನಾನು ಓದಿದ ಶಾಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ:ನಾಗನಗೌಡ


ಸಂಜೆವಾಣಿ ವಾರ್ತೆ
ಸಂಡೂರು :ಜು:24 ನಾನು ಶಿಕ್ಷಣ ಪಡೆದ ಶಾಲೆಯಲ್ಲಿಯೇ ಅಭಿಮಾನಿಬಳಗದವರು 61ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ನನಗೆ ಹೆಮ್ಮೆಯನ್ನು ಉಂಟುಮಾಡಿದೆ, ಗ್ರಾಮದ ಯುವಕರಿಗೆ ಅನುಕೂಲವಾಗುವಂತಹ ನೂತನ ಜಿಮ್ ವ್ಯವಸ್ಥೆಯನ್ನು ಹಾಗೂ ಈ ಶಾಲೆಗೆ ಬೇಕಾದ ಎಲ್ಲಾ ಅನುಕೂಲಗಳನ್ನು ಮಾಡುವುದಾಗಿ ಬಿಕೆಜಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾದ ಬಿ.ನಾಗನಗೌಡ ತಿಳಿಸಿದರು.
ಅವರು ತಾಲೂಕಿನ ಬಾವಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿ.ನಾಗನಗೌಡ ಅಭಿಮಾನಿ ಬಳಗದವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಶರಣರ ಕುರಿತು ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ ನನ್ನ ಜನ್ಮ ಭೂಮಿ, ನಾ ಶಿಕ್ಷಣ ಪಡೆದ ಶಾಲೆಯನ್ನು ನಾವೇ ಅಭಿವೃದ್ದಿ ಮಾಡಬೇಕು, ನಮ್ಮ ಗ್ರಾಮವನ್ನು ನಾವು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯನ್ನು ಮಾಡಲು ಸದಾ ಸಿದ್ದನಿದ್ದೇನೆ, ಇಂದು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡುತ್ತಿರುವುದು ಹೆಮ್ಮೆ ಕಾರಣ ಅವರೂ ಶರಣರ ತತ್ವಗಳನ್ನು ತಿಳಿಯುವ ಕಾರ್ಯ ಮಾಡಿದ್ದಾರೆ, ಅದ್ದರಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವಂತಹ, ಮತ್ತು ಶಾಲೆಗೆ ಈಗಾಗಲೇ ಪೂರ್ಣ ಕಂಪೌಂಡ್, ಕಲಿಕಾ ಸಾಮಾಗ್ರಿಗಳನ್ನು ಹಾಗೂ ಗ್ರಾಮದ ಯುವಕರಿಗೆ ಬೇಕಾದ ಅನುಕೂಲಗಳನ್ನು ಸಹ ಮಾಡಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅಭಿಮಾನಿ ಬಳಗದ ಮುಖಂಡ ಅರ್.ಪಕ್ಕೀರಪ್ಪ ನಾಗನಗೌಡ ಅವರ ಕಿರು ಪರಿಚಯ ಮಾಡಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಿಕೆಜಿ ಕಂಪನಿಯ ಮಾಲೀಕರಾದ ಬಿ.ಕೆ.ಬಸವರಾಜ, ಮಾಜಿ ಗ್ರಾ.ಪಂ. ಜಿ.ಕುಮಾರಗೌಡ ಸಿದ್ದಾಪುರ, ಕೃಷ್ಣಾನಾಯ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಎಲ್.ಅಂಬರೀಶ್‍ನಾಯ್ಕ, ಸದಸ್ಯರು, ಲಾರಿಮಾಲೀಕರ ಸಂಘದ ಅಧ್ಯಕ್ಷ ಜೆ.ಬಾಬುನಾಯ್ಕ, ಗ್ರಾಮದ ಮುಖಂಡ ಬಂಗ್ಲೆ ಮಂಜುನಾಥ, ಬಂಡ್ರಿಗ್ರಾಮದ ಮುಖಂಡ ಪಿ.ರವಿಕುಮಾರ್, ತಾರಾನಗರದ ಗಡಾದ್‍ರಮೇಶ್, ಟಿ.ಮಹೇಶ್, ಮಂಜುನಾಥ ಕತ್ತಿ, ಸಕ್ರಪ್ಪ, ನಾಗರಾಜ ಶಾಲೆಯ ಮುಖ್ಯಗುರುಗಳಾದ ವಸಂಧರ ಜೆ., ಚಂದ್ರನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ  ಶ್ರೀನಿವಾಸ.ಟಿ., ನರಸಿಂಗ್‍ನಾಯ್ಕ, ಮನೋಹರ ಈಡಿಗರ, ಗಡಂಬ್ಲಿ ಚನ್ನಪ್ಪ, ಜಿ.ವೀರೇಶ್, ಮೇಲುಸೀಮೆಶಂಕ್ರಪ್ಪ, ಚನ್ನವೀರಪ್ಪ, ಕೆ.ಶಿವಪ್ಪ ಎಂ.ಎಸ.ಶಿವು, ವೆಂಕನಾಯ್ಕ, ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು
ಶಿಕ್ಷಕಿ ಅನಿತಾ ನಿರೂಪಿಸಿದರು, ಕಲ್ಪನಾ ಸ್ವಾಗತಿಸಿದರು, ಬಹುಮಾನ ವಿತರಣೆ ಕಾರ್ಯಕ್ರಮವನ್ನು ಮಧುಕುಮಾರಿ ನಡೆಸಿಕೊಟ್ಟರು.

Attachments area