
ಕಲಬುರಗಿ,ಸೆ.9:ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾ ನಿಕೇತನ ಶಾಲೆಯಲ್ಲಿ ಹಿರಿಯ ರಂಗಕರ್ಮಿ ಶಂಕರಯ್ಯ ಘಂಟಿ ಅಭಿನಯದ ‘ನಾನು ಐನ್‍ಸ್ಟೈನ್’ ಏಕವ್ಯಕ್ತಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಮನುಕುಲದ ಉನ್ನತಿಗಾಗಿ ಬಳಸಬೇಕಾದ ವಿಜ್ಞಾನವು ಕೆಲವರ ತಪ್ಪು ನಿರ್ಧಾರಗಳಿಂದಾಗಿ ಮನುಕುಲದ ಅವನತಿಗೂ ಕಾರಣವಾಗಬಲ್ಲದು ಎಂಬುದನ್ನು ಈ ಏಕವ್ಯಕ್ತಿ ಪ್ರದರ್ಶನದ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಲಾಯಿತು.
ಮೊದಲನೇ ವಿಶ್ವಯುದ್ಧ ನಡೆದಾಗ ಜರ್ಮನಿ ದೇಶದಲ್ಲಿದ್ದ ಐನ್‍ಸ್ಟೈನ್ ಯುದ್ಧವನ್ನು ವಿರೋಧಿಸಿದ ಕಾರಣಕ್ಕಾಗಿ ನಾಝಿಗಳ ವಿರೋಧ ಎದುರಿಸಬೇಕಾಗುತ್ತದೆ. ಮುಂದೆ ಅಮೆರಿಕಾ ದೇಶದ ಪೌರತ್ವ ಪಡೆದ ಬಳಿಕ ಎರಡನೇ ವಿಶ್ವಯುದ್ಧವನ್ನೂ ಅವರು ವಿರೋಧಿಸಿದ ಕಾರಣಕ್ಕೆ ಅಲ್ಲಿಯೂ ಅವರು ಟೀಕೆಗೆ ಹೇಗೆ ಗುರಿಯಾದರು ಎಂಬುದನ್ನು ರಂಗಕರ್ಮಿ ಶಂಕರಯ್ಯ ಘಂಟಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅರ್ಥ ಮಾಡಿಸಿದರು.
ಯಾವುದೇ ವಿಷಯವನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಾಗ ಆ ವಿಷಯದ ಕುರಿತಾದ ಕುತೂಹಲ ನಮ್ಮೊಳಗೆ ಜೀವಂತವಾಗಿರದ ಕುರಿತು ಆ ವಿಷಯ ಹೃದಸ್ಥವಾಗುವುದಿಲ್ಲ. ಜೊತೆಗೆ, ಒಬ್ಬ ವ್ಯಕ್ತಿ ತನ್ನ ಕೊನೆಯುಸಿರಿನವರೆಗೆ ಕಲಿಯುತ್ತಲೇ ಇರಬೇಕಾಗುತ್ತದೆ. ಆತನೊಳಗಿನ ವಿದ್ಯಾರ್ಥಿಯು ಕಲಿಕೆಯನ್ನು ನಿಲ್ಲಿಸಿದ ದಿನವೇ ಜೀವನದ ಅಂತ್ಯ ಆರಂಭವಾಗುತ್ತದೆ ಎಂದು ಘಂಟಿ ವಿದ್ಯಾರ್ಥಿಗಳಿಗೆ ತಮ್ಮ ಅಭಿನಯದ ಮೂಲಕ ಆಪ್ತ ಸಲಹೆ ನೀಡಿದರು.
ತಾವು ಪ್ರತಿಪಾದಿಸಿದ ಸಾಪೇಕ್ಷತಾ ಸಿದ್ಧಾಂತ ಎರಡನೇ ವಿಶ್ವಯುದ್ಧದಲ್ಲಿ ಹೇಗೆಲ್ಲಾ ಮಾರಣಹೋಮಕ್ಕೆ ಕಾರಣವಾಯಿತು ಎನ್ನುವುದರ ಕುರಿತು ಐನ್‍ಸ್ಟೈನ್ ಪಾತ್ರಧಾರಿ ಘಂಟಿ ವಿμÁದ ವ್ಯಕ್ತಪಡಿಸಿದಾಗ ವಿದ್ಯಾರ್ಥಿಗಳ ಮುಖಗಳಲ್ಲಿಯೂ ಅದೇ ವಿμÁದದ ಗೆರೆಗಳು ಗೋಚರಿಸಿದವು.
ಪ್ರಕೃತಿಗೆ ಏನು ಬೇಕೋ ಅದನ್ನು ಮಾತ್ರ ವಿಜ್ಞಾನದಿಂದ ಪಡೆಯಬೇಕೆ ಹೊರತು; ವಿಕೃತಿ ಪ್ರದರ್ಶನಕ್ಕೆ ಮುಂದಾದರೆ ಮನುಕುಲದ ಅವನತಿ ತಪ್ಪಿದ್ದಲ್ಲ ಎಂದಾಗ ವಿದ್ಯಾರ್ಥಿಗಳು ಘಂಟಿ ಅವರೊಳಗಿನ ಐನ್‍ಸ್ಟೈನ್ ಭಾವಾಬಿವ್ಯಕ್ತಿಗೆ ತಲೆದೂಗಿದರು.
ಉಮೇಶ್ ಪಾಟೀಲ್ ನಿರ್ದೇಶನದ ನಾಟಕಕ್ಕೆ ಸಾಗರ ಗಾಳೆ ಸಂಗೀತ ನೀಡಿದರು.
ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಆಡಳಿತಾಧಿಕಾರಿ ಆರ್.ಎಂ.ಶಿಂಧೆ ಹಾಗೂ ಶಿಕ್ಷಕರು ಇದ್ದರು.