ನಾನು ಎಂಬುದಕ್ಕಿಂತ ನಾವು ಎಂಬ ಭಾವಮೂಡಲಿ: ಡಾ. ಟಿಜಿಆರ್*

ಸಂಜೆವಾಣಿ ವಾರ್ತೆ

ಹರಿಹರ.ಡಿ.೪: ನಾನು ಎಂಬುದಕ್ಕಿಂತ ನಾವು ಎಂಬ ಭಾವ ನಮ್ಮೆಲ್ಲರೆಲ್ಲೂ ಮೂಡಿದಾಗ  ಆರೋಗ್ಯವಂತ ಮತ್ತು ಸುಂದರ ಸಮಾಜದ ನಿರ್ಮಾಣ ಸಾಧ್ಯವಿದೆ. ಹೀಗಾಗಿ, ಜೀವನದಲ್ಲಿ ಸದಾ ನನಗೇನು ಸಿಕ್ಕಿತು, ದಕ್ಕಿತು ಎಂಬುದನ್ನೇ ಲೆಕ್ಕ ಹಾಕುವ ಮನೋಭಾವದಿಂದ ಹೊರಬರಬೇಕಿದೆ ಎಂದು ಪ್ರೀತಿ ಆರೈಕೆ ಟ್ರಸ್ಟ್ ಕಾರ್ಯದರ್ಶಿ ಡಾ. ರವಿಕುಮಾರ್ ಟಿ.ಜಿ ಹೇಳಿದರು.ಹರಿಹರದ ಕೆಎಚ್‌ಬಿ ಬಡಾವಣೆಯ ಚೌಡಮ್ಮ ದೇವಸ್ಥಾನದ ಬಳಿ ಪ್ರೀತಿ ಆರೈಕೆ ಟ್ರಸ್ಟ್, ಆರೈಕೆ ಆಸ್ಪತ್ರೆಯ ಸಹಯೋಗದಲ್ಲಿ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ವಾರವಿಡೀ ದುಡಿಮೆ ಮಾಡಿ ಭಾನುವಾರದ ರಜಾದಿನ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲು ಇಷ್ಟ ಪಡುತ್ತಾರೆ. ಆದರೆ, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಹರಿಹರದ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘವು ಅಪಾರ ಜನಸ್ಥೋಮವನ್ನು ಒಟ್ಟುಗೂಡಿಸಿ, ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಉಚಿತವಾಗಿ ವೈದ್ಯಕೀಯ ಸೇವೆ ನೀಡಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ಸಂಘದ ಎಲ್ಲ ಸದಸ್ಯರು ಅತ್ಯಂತ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.ನಗರ ಪ್ರದೇಶಗಳಲ್ಲಿ ಕೆಲವರು ಅಂತರ್ಜಾಲದಲ್ಲಿನ ಅನಗತ್ಯದ ವಿಚಾರಗಳನ್ನು ತಿಳಿದು ತಾವಾಗಿಯೇ ಚಿಕಿತ್ಸೆ ಮಾಡಿಕೊಂಡು ಔಷಧ ಸೇವಿಸುತ್ತಾರೆ. ಇನ್ನೊಂದೆಡೆ ಗ್ರಾಮೀಣ ಭಾಗದ ಜನರು ಸೂಕ್ತ ಮಾಹಿತಿ ಇಲ್ಲದೆಯೇ ಆರೋಗ್ಯ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ. ಈ ಎರಡೂ ವರ್ತನೆಗಳು ತಪ್ಪು. ನಮ್ಮ ದೇಹದ ಆರೋಗ್ಯವೇ ನಮ್ಮ ಬದುಕು, ಕುಟುಂಬ ಮತ್ತು ಆಲೋಚನೆಗಳನ್ನು ಸುಂದರವಾಗಿ ಇರಿಸಲು ಮೂಲ ಶಕ್ತಿ, ಕಾರಣ ಎಂದರೆ ತಪ್ಪಲ್ಲ. ಹೀಗಾಗಿ, ಆರೋಗ್ಯದ ಬಗ್ಗೆ ಎಂದಿಗೂ ನಿರ್ಲಕ್ಷ್ಯ ಅಥವಾ ಆತಂದ ಮಾಡಿಕೊಳ್ಳದೇ ಸೂಕ್ತ ವೈದ್ಯರಿಂದ ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.ಆರೋಗ್ಯದ ಸಾಮಾನ್ಯ ತೊಂದರೆಗಳಾದ ಮಧುಮೇಹ, ರಕ್ತದೊತ್ತಡ, ಹೃದಯರೋಗ, ಕೀಲುಮೂಳೆ ನೋವು, ಚರ್ಮರೋಗಕ್ಕೆ ನುರಿತ ವೈದ್ಯರಿಂದ ತಂಡದಿAದ ಉಚಿತ ತಪಾಸಣೆ, ಮಾಹಿತಿ, ಸಲಹೆ, ಸೂಚನೆ, ಔಷಧ ನೀಡಲಾಯಿತು.