ನಾನು ಅಸಲಿ ರೈತ ರೀ : ರಾಯರೆಡ್ಡಿ ಸ್ಪಷ್ಟನೆ


ಸಂಜೆವಾಣಿ ವಾರ್ತೆ
ಕುಕನೂರು, ನ.21: ನಾನು ಒಬ್ಬ ಶಾಸಕನಾಗಿ ,ಸಂಸದನಾಗಿ, ಸಚಿವ ನಾಗೀ ರಾಜಕೀಯ ಮಾಡಿ ಅಪಾರ ಅನುಭವ ಪಡೆದಿದ್ದೇನೆ ಆದರೂ ಸಹ ಕೃಷಿಯನ್ನು ಬಿಟ್ಟಿಲ್ಲ ಎಂದು ಮಾಜಿ ಸಚಿವ ಬಸವರಾಜ ರಾಯ ರೆಡ್ಡಿ ಹೇಳಿದರು . ಅವರು ಭಾನುವಾರ ಸಂಜೆ ರಾಜೂರಿನ ಶ್ರೀಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಅಭಿವೃದ್ಧಿ ಚಿಂತನ ಮಂಥನ ಕಾಯ೯ಕ್ರಮದಲ್ಲಿ ಮಾತನಾಡಿದರು.  ನಾನು ಓದಿದ್ದು ವಕೀಲ ಕೋಸ್ ೯ ಅನಿವಾರ್ಯವಾಗಿ ರಾಜಕೀಯ ಕ್ಕ ಬಂದು ಸಾಕಷ್ಟು ಅಭಿವೃದ್ಧಿ ಕಾಯ೯ ಮಾಡಿದ ತೃಪ್ತಿ ಇದೆ.ಹುಲ್ಲು ಗಾವಲು ಇದ್ದ ಕ್ಷೇತ್ರವನ್ನು ಸಾಕಷ್ಟು ಪರಿಣಾಮ ಕಾರಿ ಕಾಯ೯ ಮಾಡುವ ಮೂಲಕ  ಯಲ್ವುಗ೯ಕ್ಷೇತ್ರವನ್ನು ಮುಂಚೂಣಿಗೆ ತರಲಾಗಿದೆ. ಆದರೆ ಇತ್ತೀಚೆಗೆ ಬಿಜೆಪಿ ಬಂದ ಮೇಲೆ ರಾಜಕೀಯ ಕ್ಷೇತ್ರವು ಕಲುಷಿತ ಗೊಂಡಿದೆ. ನಮ್ಮ ಕ್ಷೇತ್ರದಲ್ಲಿ ಹಾಲಿ ಸಚಿವ ಹಾಲಪ್ಪ ಆಚಾರ ಗ್ರಾನೈಟ್ ಉದ್ಯಮಿ ಯಾಗಿ ರಾಜಕೀಯ ಮಾಡಿದ್ರೆ ನಾನು ರಾಜಕೀಯ ಜೊತೆ ಅಸಲಿ ಕೃಷಿಕ ನಾಗಿದ್ದು ಬಹಳ ಜನರಿಗೆ ಗೊತ್ತಿಲ್ಲ. ಧಾರವಾಡದ ನನ್ನ ತೋಟದಲ್ಲಿ ಮಾವು,ಚಿಕ್ಕು,ಪೇರಲ ಮುಂತಾದ ತೋಟಗಾರಿಕೆ ಬೆಳೆ ಬೆಳೆದಿರುವೆ .ಆದ್ರೂ ಸಹ ವಿರೋಧಿಗಳ  ಅಪಪ್ರಚಾರದ ನಡುವೆ ನನ್ನ  ಒಕ್ಕಲುತನ, ನ್ಯಾಯಾಂಗ ದ ಬುದ್ದಿವಂತಿಕೆ ಶೂನ್ಯವಾಗಿದೆ ಎಂದು ಅಳಲು ತೋಡಿಕೊಂಡರು. ಮತ್ತೊಮ್ಮೆ ತಾವು ಶಾಸಕರಾದ ನಂತರ ನೀರಾವರಿ, ಕೆರೆ ತುಂಬಿಸುವ ಕೆಲಸ ಮುಂತಾದ ಅಭಿವೃದ್ದಿ ಕಾಯ೯ ಮಾಡಲು ಪ್ರಯತ್ನಿಸುವುದು ಎಂದು ಹೇಳಿದರು. ಮುಖಂಡರಾದ ಬಸವರಾಜ್ ಉಳ್ಳಾಗಡ್ಡಿ, ಹನುಮಂತ ಗೌಡ ಪಾಟೀಲ್, ಫಕೀರ ಸಾಬ್ ನದಾಫ,ವಿರೂಪಾಕ್ಷಪ್ಪ ದೊಡ್ಡಮನಿ, ದೇವೇಂದ್ರ ಪ್ಪಾ ಬಡಿಗೇರ್, ದಾನರೆಡ್ಡಿ ಡಾಕ್ಟರ ಸೇರಿದಂತೆ ಅನೇಕರು ಹಾಜರಿದ್ದರು.