ನಾನಾ ಹಜರತ್ ದರ್ಗಾ ಕಮಿಟಿಗೆ ವಹಿಸಲು ಆಗ್ರಹ

ಚಿಟಗುಪ್ಪ :ನ.15:ಪಟ್ಟಣದ ಹೊರವಲಯದಲ್ಲಿರುವ ಪ್ರಸಿದ್ಧ ಧಾರ್ಮಿಕ ಕೇಂದ್ರ ನಾನಾ ಹಜರತ್ ದರ್ಗಾದ ಆಡಳಿತವನ್ನು ದರ್ಗಾ ಕಮಿಟಿಗೆ ವಹಿಸುವಂತೆ ಒತ್ತಾಯಿಸಿ ನಾನಾ ಹಜರತ್ ದರ್ಗಾ ಪರಿಸರದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾನಾ ಹಜರತ್ ದರ್ಗಾ ಕಮಿಟಿ ಅಧ್ಯಕ್ಷ ಡಾ ಅಬ್ದುಲ್ ಖುದ್ದೂಸ್ ನಾನಾ ಹಜರತ್ ದರ್ಗಾದ ಆಡಳಿತವನ್ನು ವನ್ನು ನಾನಾ ಹಜರತ್ ಗೆ ಸಂಬಂಧವಿಲ್ಲದ ವ್ಯಕ್ತಿ ನಡೆಸುತ್ತಿದ್ದು ಆ ವ್ಯಕ್ತಿಯನ್ನು ದರ್ಗಾ ದಿಂದ ಹೊರಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.
ನಾನಾ ಹಜರತ್ ಗೆ ಯಾವುದೇ ರೀತಿಯ ರಕ್ತ ಸಂಬಂಧವಿಲ್ಲದ ವ್ಯಕ್ತಿ ಒಬ್ಬ ನ್ಯಾಯಾಲಯವನ್ನು ಕತ್ತಲೆಯಲ್ಲಿಟ್ಟು ದರ್ಗಾ ಆಡಳಿತವನ್ನು ತನ್ನ ಕೈಯಲ್ಲಿ ತೆಗೆದುಕೊಂಡಿರುತ್ತಾನೆ. ಆ ವ್ಯಕ್ತಿಗೆ ನಾವು ನಾನಾ ಹಜರತ್ ಹಾಗೂ ನಿಮ್ಮ ಸಂಬಂಧದ ಬಗ್ಗೆ ದಾಖಲೆಗಳನ್ನು ಕೊಡುವಂತೆ ಕೇಳಿದ್ದೆವು ಆದರೆ ಆತ ದಾಖಲೆಗಳನ್ನು ನೀಡುವಲ್ಲಿ ವಿಫಲವಾಗಿದ್ದಾನೆ ನ್ಯಾಯಾಲಯದ ತೀರ್ಪಿನ ವಿರುದ್ಧ ನಾವು ಮನವಿ ಸಲ್ಲಿಸಿದಾಗ ನ್ಯಾಯಾಲಯವು ಈ ಪ್ರಕರಣವನ್ನು ವಕ್ಸ ಬೋರ್ಡ್ ಗೆ ವಹಿಸಿರುತ್ತದೆ. ಅದರಂತೆ ವಾಕ್ಸ ಬೋರ್ಡ್ ತನಿಖೆ ನಡೆಸಿ ಆ ವ್ಯಕ್ತಿಯ ವಾದದಲ್ಲಿ ಯಾವುದೇ ಹುರುಳಿಲ್ಲವೆಂದು ಈ ಪ್ರಕರಣವನ್ನು ಕೈ ಬಿಟ್ಟಿರುತ್ತದೆ.
ಅಲ್ಲದೆ ಈ ಭಾಗದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಧಾರ್ಮಿಕ ಸ್ಥಳವಾದ ನಾನಾ ಹಜರತ್ ದರ್ಗಾ ನಲ್ಲಿ ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಮರೀಚಿಕೆಯಾಗಿದೆ.
ಪ್ರತಿ ವರ್ಷ ಜಾತ್ರೆಗೆ ಲಕ್ಷಾಂತರ ಜನರು ನಾನಾ ಹಜರತ್ ಜಾತ್ರೆಗೆ ಆಗಮಿಸುತ್ತಾರೆ ಆದರೆ ಅವರಿಗೆ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ. ಅಲ್ಲದೆ ದರ್ಗಾದ ಹಣಕಾಸು ವಹಿವಾಟಿನ ಬ್ಯಾಂಕ್ ಅಡಿಟ್ ಆಗಿಲ್ಲ. ಹಾಗೂ ದರ್ಗಾದಲ್ಲಿ ಕೆಲವು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಆದಕಾರಣ ದರ್ಗಾದ ಉಸ್ತುವಾರಿಯನ್ನು ಈ ಮೊದಲಿನಂತೆ ದರ್ಗಾ ಕಮಿಟಿ ಗೆ ವಹಿಸಬೇಕು ಎಂದು ಡಾಕ್ಟರ್ ಖುದ್ದುಸ್ ಆಗ್ರಹಿಸಿದ್ದಾರೆ.