ಕಲಬುರಗಿ:ಜೂ.24: ನಗರದ ಗೋದುತಾಯಿ ಪದವಿ ಮಹಿಳಾ ಮಹಾವಿದ್ಯಾಲಯದ ಸಂಗೀತ ವಿಭಾಗದಲ್ಲಿ ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಹಿರಿಯ ಜಾನಪದ ಕಲಾವಿದ ಶ್ರೀ ಧರ್ಮಣ್ಣ ಖರ್ಚನ ನಿಂಬರ್ಗಾ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮತ್ತು ಅನೇಕ ನಮ್ಮ ಭಾಗದ ಹಳೆಯ ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು. ನಾದಮಯವಾಗಿರುವಂತಹ ಸಂಗೀತ ವಿಶ್ವದ ತುಂಬೆಲ್ಲಾ ಹಬ್ಬಿಕೊಂಡಿದೆ. ಸಂಗೀತವು ಸಕಲ ಜೀವಿ ರಾಶಿಗಳನ್ನು ತನ್ನತ್ತ ಸೆಳೆಯುತ್ತದೆ ಹಾಗೂ ಮನುಷ್ಯನ ನಾಡಿ ಮಿಡಿತವು ಕೂಡಾ ಒಂದು ನಾದ ವಾಗಿದೆ ಎಂದು ವಿಭಾಗದ ಮುಖ್ಯಸ್ಥರು ಡಾ. ಸೀಮಾ ಪಾಟೀಲ ಹೇಳಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಶ್ರೀಮತಿ ಜಾನಕಿ ಹೊಸೂರ ವಹಿಸಿದ್ದರು. ಪ್ರಾಧ್ಯಾಪಕ ವೀರಭದ್ರಯ್ಯ ಸ್ಥಾವರಮಠ ನಿರೂಪಿಸಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.