ನಾದ ಕೆ.ಡಿ ವಿಧ್ಯಾರ್ಥಿ- ರಾಷ್ಟ್ರಮಟ್ಟದ ಇನ್‍ಸ್ಪೈಯಿರ್ ಆವಾರ್ಡ ವಿಚೇತ

ಇಂಡಿ: ಡಿ.8:ಡಿ,3ರಂದು ಬೆಂಗಳೂರಿನ ಎನ್.ಐ.ಎ.ಎಸ್ ನಲ್ಲಿ ನಡೇದ ಇನ್‍ಸ್ಪೈಯರ್ ಅವಾರ್ಡ ಸ್ಪರ್ಧೆಯಲ್ಲಿ ತಾಲೂಕಿನ ನಾದ ಕೆ.ಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿಧ್ಯಾರ್ಥಿ ದೇವೇಂದ್ರ ಬಿರಾದಾರ ರಾಷ್ಟ್ರಮಟ್ಟಕ್ಕೆ ವಿಚೇತನಾಗಿದ್ದಾನೆ.
ವಿಧ್ಯಾರ್ಥಿ ಸತತ ಅಭ್ಯಾಸ ಹಾಗೂ ಶಿಕ್ಷಕರು ಹೇಳಿದ ಪ್ರತಿಯೊಂದು ಪಾಠ ಪ್ರವಚನ ಗಮನಿಸಿ ಪ್ರತಿ ಹಂತದಲ್ಲಿ ವಿಜ್ಞಾನಕ್ಕೆ ಸಂಭದಿಸಿದ ಕ್ರೀಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೋಳ್ಳುತ್ತಿದ್ದ ಎಂದು ವಿಷಯ ಶಿಕ್ಷಕಿ ಎಸ್.ಎಲ್ ಬಡಿಗೇರ ಪ್ರತಿಕ್ರೀಯಿಸಿದ್ದಾರೆ.
ವಿಧ್ಯಾರ್ಥಿ ದೇವೆಂದ್ರ ಬಿರಾದಾರ ಇತನಿಗೆ ಪ್ರಶೇಸ್ತಿ,ಟ್ರೋಪಿ ಮತ್ತು ಲ್ಯಾಪ್ ಟ್ಯಾಪ್ ನೀಡಿ ಸನ್ಮಾನಿಸಿದ್ದಾರೆ. ಮಾರ್ಗದರ್ಶಿ ಶಿಕ್ಷಕಿ ಹಾಗೂ ವಿಧ್ಯಾರ್ಥಿಯ ಸಾಧನೆಗೆ ನಾದ.ಕೆಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು, ಗುರುಮಾತೆಯರು ಹಾಗೂ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ,ಸದಸ್ಯರು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.