ನಾದಬ್ರಹ್ಮ ಸಂಗೀತ ಸಮಿತಿ, ಸಂಗೀತ ಸಮರೋಹ ನಾಳೆ

ಭಾಲ್ಕಿ:ಸೆ.9: ಪಟ್ಟಣದ ಪುರಭವನ (ಟೌನ್‍ಹಾಲ್) ದಲ್ಲಿ ಸೆ.10 ರಂದು ರವಿವಾರ ಬೆಳಿಗ್ಗೆ 10 ಗಂಟೆಗೆ, ಪಂಡಿತ ಶಾಂತಾರಾಮ ಚಿಗ್ರಿ ಗುರೂಜಿ 5ನೇ ಪುಣ್ಯಸ್ಮರಣೆ ನಿಮಿತ್ಯ ನಾದಬ್ರಹ್ಮ ಸಂಗೀತ ಸಮಿತಿಯ ವತಿಯಿಂದ ಸಂಗೀತ ಸಮಾರೋಹ ನಡೆಯಲಿದೆ ಎಂದು ನಾದಬ್ರಹ್ಮ ಸಂಗೀತ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಂಗೀತ ಸಮಾರೋಹ ಕಾರ್ಯಕ್ರಮದ ದಿವ್ಯಸಾನಿಧ್ಯ ಬಸವಕಲ್ಯಾನ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು, ಹಾಗು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಹಾಗು ಅರಣ್ಯ ಸಚಿವ ಈಶ್ವರ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸುವರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಬಾಲಾಜಿ ಮಾನಕರಿ, ಅಬ್ದುಲ್ ಹರೀಮ ಭಯ್ಯಾ, ರವೀಂದ್ರ ಚಿಟಗುಪ್ಪೆ, ಚನ್ನಬಸವ ಟೋಕರೆ, ಗಣೇಶಪಾಟೀಲ ಜ್ಯಾಂತಿ ಉಪಸ್ಥಿತರಿರುವರು. ಸಮಾಜದಲ್ಲಿ ಗಣನೀಯ ಸಾಧನೆ ಮೆರೆದ ಡಾ| ಜ್ಞಾನೇಶ್ವರ ನಿರಗುಡೆ, ಜಯರಾಜ ದಾಬಶೆಟ್ಟಿ, ಡಾ| ತಾನಾಜಿ ಸಗರ, ಕಾಶಿನಾಥ ಚಲವಾ ರವರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಕಿರಣ ಚಾಕೋತೆ ಉಪನ್ಯಾಸ ಮಂಡಿಸುವರು.
ಪ್ರತಿಷ್ಠಿತ ಕಲಾವಿದರಾದ ಉತ್ತರಪ್ರದೇಶದ ಆಕಾಶವಾಣಿ ಹಾಗು ದೂರದರ್ಶನ ಕಲಾವಿದೆ ವಿಲೀನಾ ಪಾತ್ರಾ, ಪಂಡಿತ ಇಶಾನ್ ಘೋಸ್, ಪಂಡಿತ ಆಶಯ ಕುಲಕರ್ಣಿ, ಪಂಡಿತ ನೀಲಯ ಸಾಲವಿ ತಮ್ಮ ಸಂಗೀತ ಸುಧೆ ಉಣಿಸುವರು. ಸ್ಥಳೀಯ ಕಲಾವಿದರಾದ ಶಿವಾಜಿ ಸಗರ, ಪರಮೇಶ್ವರ ಪಾಟೀಲ, ರಾಜೇಂದ್ರಸಿಂಗ್ ಪವಾರ, ಎಸ್.ಕೆ.ಪಾಟೀಲ, ವಿನಾಯಕ ಚೌಧರಿ, ಸುರೇಶ ಕದಮ, ಗೋವಿಂದ ರಾಠೋಡ, ರಾಜಕುಮಾರ ಘೊಟಕಾರ, ಕಮಲಾಕರ ಕುಲಕರ್ಣಿ, ಕಪೀಲ ಸೂರ್ಯವಂಶಿ ಮುಂತಾದವರು ತಮ್ಮ ಸಂಗೀತ ಸುಧೆ ಉಣಿಸುವರು. ಸಾರ್ವಜನಿಕರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಕಲಾವಿದರಿಗೆ ಪ್ರೊತ್ಸಾಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.