ನಾಣ್ಯಾಪುರ : ಚುನಾವಣಾ ಸ್ಪರ್ದಾಳು ನೇಣಿಗೆ ಶರಣು.

ಕೂಡ್ಲಿಗಿ.ಡಿ.25:- ಲೋಕಲ್ ಫೈಟ್ ಚುನಾವಣೆಯಲ್ಲಿ ಸ್ಪರ್ದಿಸಿದ್ದ ವ್ಯಕ್ತಿಯೋರ್ವ ನಿನ್ನೆ ಹೊಲಕ್ಕೆ ಹೋಗಿ ಆಕಳುಗಳಿಗೆ ಮೇವು ತರಲು ಹೋದವ ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆಗೆ ಜಾರಿರುವ ಘಟನೆ ಕೂಡ್ಲಿಗಿ ಠಾಣಾ ಸರಹದ್ದಿನ ಹಗರಿಬೊಮ್ಮನಹಳ್ಳಿ ತಾಲೂಕಿನ ನಾಣ್ಯಾಪುರದ ಹೊರವಲಯದಲ್ಲಿ ಜರುಗಿದ್ದು ಮಧ್ಯ ರಾತ್ರಿ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲಿಯಪ್ಪ (50)ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ ಈತನು ಈ ಬಾರಿಯ ನಾಣ್ಯಾಪುರದ ಐದನೇ ವಾರ್ಡಿನ 3ಸ್ಥಾನದಲ್ಲಿನ ಒಂದು ಮೀಸಲಾತಿ ಸ್ಥಾನಕ್ಕೆ ಸ್ಪರ್ದಿಸಿದ್ದಾನೆಂದು ಹೇಳಲಾಗುತ್ತಿದ್ದು ಕಳೆದಬಾರಿ ಮೃತನ ಪತ್ನಿ ಗೆಲುವು ಪಡೆದಿದ್ದಳು ಎಂದು ಗ್ರಾಮದ ಜನತೆ ಹೇಳುತ್ತಿದ್ದಾರೆ.
ಪತ್ನಿ ದೂರು : ಕುಡಿತದ ಅಮಲಿನಲ್ಲಿ ಪತಿ ಮಾಲಿಯಪ್ಪನು ಗ್ರಾಮದ ಜನರೊಂದಿಗೆ ಮತ್ತು ಮನೆಯಲ್ಲಿ ಜಗಳ ಮಾಡುತ್ತಿದ್ದ ಆದರೆ ನಿನ್ನೆ ಸಂಜೆ ಹೊಲಕ್ಕೆ ಹೋಗಿ ಆಕಳುಗಳಿಗೆ ಮೇವು ತರುತ್ತೇನೆಂದು ಹಗ್ಗ ತೆಗೆದುಕೊಂಡು ಹೋಗಿದ್ದು ಹೊಲದಲ್ಲಿರುವ ಹುಣಸೇಮರಕ್ಕೆ ನೇಣು ಬಿಗಿದುಕೊಂಡುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಸಂಬಂಧಿಕರೊಂದಿಗೆ ಹೋಗಿ ನೋಡಿಲಾಗಿ ಈತನು ಕುಡಿತದ ಅಮಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ಮಾಡುತ್ತ ಜೀವನದಲ್ಲಿ ಜಿಗುಪ್ಸೆ ಹೊಂದಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಮೃತನ ಪತ್ನಿ ಯಲ್ಲಮ್ಮ ನೀಡಿದ ದೂರಿನಂತೆ ಕೂಡ್ಲಿಗಿ ಠಾಣಾ ಪಿಎಸ್ಐ ಮಧ್ಯರಾತ್ರಿ ಪ್ರಕರಣ ದಾಖಲಿಸಿಕೊಂಡಿದ್ದರೆಂದು ಮೂಲಗಳಿಂದ ತಿಳಿದಿದೆ.