ನಾಡ ಪಿಸ್ತೂಲದೊಂದಿಗೆ ವ್ಯಕ್ತಿಯ ಬಂಧನ

ಮಾದನಹಿಪ್ಪರಗಿ:ಜ.23: ಇಲ್ಲಿಗೆ ಸಮೀಪದ ಕೇರೂರ ಗ್ರಾಮದಲ್ಲಿ ಅಕ್ರಮವಾಗಿ ನಾಡಪಿಸ್ತೂಲ ಇಟ್ಟುಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಾದನಹಿಪ್ಪರಗಿ ಪೊಲೀಸ ಠಾಣೆಯವರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪೊಲೀಸ ಅಪರ ಅಧೀಕ್ಷಕರಾದ ಎನ್ ಶ್ರೀನಿಧಿ, ಆಳಂದ ಪೊಲೀಸ್ ಉಪಾಧೀಕ್ಷಕರಾದ ಗೋಪಿ ಬಿ.ಆರ್. ಹಾಗೂ ವೃತ್ತನಿರೀಕ್ಷಕರಾದ ಪ್ರಕಾಶ ಆರ್.ಯಾತನೂರ ಅವರ ಮಾರ್ಗದರ್ಶನದಲ್ಲಿ ಮಾದನಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್‍ಐ ದಿನೇಶ ಎಂ.ಟಿ ಹಾಗೂ ಸಿಬ್ಬಂಧಿಗಳಾದ ಹಣಮಂತ, ಖಾಸೀಂ, ಭಾಗಣ್ಣ, ಮಂಜುನಾಥ ಬೀರಣ್ಣ, ಬಸವರಾಜ ಸೇರಿಕೊಂಡು ಕೇರೂರ ಗ್ರಾಮದ ಹೊರವಲಯದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ ಆರೋಪಿ ವಿಶ್ವನಾಥ ತಂದೆ, ಸಿದ್ದಲಿಂಗ ಕೊನಕಟ್ಟೆ ಆತನ ಮೇಲೆ ದಾಳಿ ಮಾಡಿ ಆತನ ಬಳಿ ಇದ್ದ ಒಂದು ನಾಡ ಪಿಸ್ತೂಲ ಮತ್ತು ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಸದರಿ ಆರೋಪಿಯನ್ನು ಬಂಧಿಸಿ ನ್ಯಾಂಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಮಾದನಹಿಪ್ಪರಗಿ ಪೊಲೀಸರ ಕಾರ್ಯಚರಣೆಗೆ ಇಲಾಖೆಯ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.