ನಾಡ ಧ್ವಜಾಕ್ಕೆ ಅಪಮಾನ: ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

ರಾಯಚೂರು.ನ.10.ಜೈ ಕನ್ನಡ ರಕ್ಷಣಾ ವೇದಿಕೆಯ ಧ್ವಜ ಕಟ್ಟೆ ಯನ್ನು ಧ್ವಂಸಗೊಳಿಸಿ ನಾಡ ಧ್ವಜಕ್ಕೆ ಅಪಮಾನ ಮಾಡಿದ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಾ ನಗರದ ಬಸವೇಶ್ವರ ವೃತ್ತದ ಅತ್ತಿರ ಇರುವ ಜೈ ಕನ್ನಡ ರಕ್ಷಣಾ ವೇದಿಕೆಯ ಧ್ವಜ ಕಟ್ಟೆಯನ್ನು ಧ್ವಂಸಗೊಳಿಸಿ ನಾಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ.
ಕಳೆದ 12 ವರ್ಷಗಳಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸುತ್ತ ಬಂದಿದ್ದೇವೆ, ಇತ್ತೀಚಿಗೆ ನಮ್ಮ ಕಾರ್ಯಕರ್ತರು ಧ್ವಜ ಕಟ್ಟೆಯನ್ನು ಸುಂದರವಾಗಿ ನಿರ್ಮಾಣ ಮಾಡಿದ್ದಾರೆ.
ಇಂದು ಯಾರೊ ದುಷ್ಕರ್ಮಿಗಳು ದುರುದ್ದೇಶದಿಂದ ಉದ್ದೇಶ ಪೂರ್ವಕವಾಗಿ ನಮ್ಮ ಕನ್ನಡ ನಾಡಿನ ಧ್ವಜಾರೋಹಣ ಕಟ್ಟೆಯನ್ನು ಧ್ವಂಸಗೊಳಿಸಿರುವುದು ಕಂಡುಬಂದಿರುತದೆ.
ಆದಕಾರಣ ಕೊಡಲೇ ಧ್ವಜಕ್ಕೆ ಅಪಮಾನ ಮಾಡಿದ ದುಷ್ಕರ್ಮಿಗಳನ್ನು ಕಂಡು ಹಿಡಿದು ಕಾನೂನಿನ ಅಡಿಯಲ್ಲಿ ತನಿಖೆ ಮಾಡಿ ಅಂತವರನ್ನು ಕನ್ನಡ ನಾಡಿನಿಂದ ಗಡಿ ಪಾರು ಮಾಡುವಂತೆ ಸಬಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಯ ಮುಖಂಡರಾದ ಅಶೋಕ್ ಕುಮಾರ ಜೈನ್, ಎಂ.ವಿನೋದ್ ರೆಡ್ಡಿ, ಎನ್ ಶರಣಪ್ಪ, ವೀರೇಶ್ ಹಿರ, ಸಾದಿಕ್ ಯರಗೇರ,ಹುಶೇನ್ ಬಾಷಾ, ಇಮ್ರಾನ್ ಬಡೇಸಾಬ್, ವೆಂಕಟೇಶ್, ಅಶೋಕ್ ಶೆಟ್ಟಿ ಸೇರಿದಂತೆ ಇನ್ನಿರರು ಉಪಸ್ಥಿತರಿದ್ದರು.