ಮಾನ್ವಿ.ಅ.೨೪- ನಾಡ ದಸರಾ ಹಬ್ಬ ಹಾಗೂ ಆಯುಧ ಪೂಜೆಗಾಗಿ ಸಡಗರ-ಸಂಭ್ರಮದಿಂದ ಆಚರಿಸಲು ತಾಲೂಕಿನ ಜನತೆ ಸಕಲ ಸಿದ್ಧತೆಯೊಂದಿಗೆ ಇಂದು ಹೂವು- ಹಣ್ಣುಗಳ ಹಾಗೂ ಬಟ್ಟೆ, ಬಂಗಾರ, ತರಕಾರಿ ಸೇರಿದಂತೆ ಪೂಜೆ ಸಾಮಾಗ್ರಿಗಳನ್ನು ಖರೀದಿ ಜೋರಾಗಿಯೇ ನಡೆಯುತ್ತಿದೆ.
ಪಟ್ಟಣದ ಬಸ್ಸು ನಿಲ್ದಾಣದ ಮುಂಭಾಗ, ಬಸವವೃತ್ತ, ಅಂಬೇಡ್ಕರ್ ವೃತ್ತ, ತರಕಾರಿ ಮಾರುಕಟ್ಟೆ, ವಾಲ್ಮೀಕಿ ವೃತ್ತ ಸೇರಿದಂತೆ ಪಟ್ಟಣದ ಅನೇಕ ಭಾಗದಲ್ಲಿ ವ್ಯಾಪಾರ ಜೋರಾದ ವ್ಯಾಪಾರ ನಡೆಯುತ್ತಿದೆ. ಪ್ರತಿ ವರ್ಷವೂ ಈ ಹಬ್ಬದಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಗ್ರಿಗಳ ಬೆಲೆ ಏರಿಕೆಯಿಂದ ಬಳಲುತ್ತಿದ್ದ ಜನರಿಗೆ ಈ ವರ್ಷ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಂದಿದ್ದರಿಂದ ಹೂವಿನ ದರದಲ್ಲಿ ಯಾವುದೇ ಹೆಚ್ಚಳ ಕಂಡು ಬರುತ್ತಿಲ್ಲ ಆದರಿಂದ ಜನರು ಸಹಜವಾಗಿಯೇ ಗ್ರಾಹಕರಿಗೆ ಹರ್ಷದೊಂದಿಗೆ ವಿವಿಧ ಬಗೆಯ ಅಲಂಕಾರಿಕ ಹೂವು ಮತ್ತು ಪೂಜೆಗೆ ಅಗತ್ಯವಾದ ಹಣ್ಣುಗಳ ಖರೀದಿಗೆ ಅನುಕೂಲವಾಗಿದೆ.
ದರ ಕೇಳುತ್ತಿದ್ದ ಗ್ರಾಹಕರು ಅದು ಕಡಿಮೆ ಎಂದು ಅನಿಸಿದ ತಕ್ಷಣ ತಮಗೆ ಅಗತ್ಯವಾದ ಎಲ್ಲಬಗೆಯ ಹೂವು ಮತ್ತು ಹಣ್ಣು ಪೂಜೆಗೆ ಬೇಕಾಗಿರುವ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದನ್ನು ಕಂಡು ಬಂದಿತು.